Advertisement
ನಗರದ ಕಲ್ಕುಣಿಕೆಯ ಹೌಸಿಂಗ್ ಬೋರ್ಡ್-2ನೇ ಹಂತ ಹಾಗೂ ಗುರುಗಳ ಕಟ್ಟೆ ಬಡಾವಣೆಯಲ್ಲಿ ರಕ್ತದ ಮಾದರಿ ಸಂಗ್ರಹಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರೋಗ್ಯ ಕಾರ್ಯಕರ್ತರು 2016-2019 ರಲ್ಲಿ ನೀಡಿರುವ ಮಾಹಿತಿಯನ್ನಾಧರಿಸಿ ಸರಕಾರವು ಹೌಸಿಂಗ್ ಬೋಡ್ ಹಾಗೂ ಮುಸ್ಲಿಂಬ್ಲಾಕ್‌ನಲ್ಲಿ ತಲಾ ಒಂದು ಪ್ರಕರಣ ಇರುವುದನ್ನು ಮನಗಂಡು, ಸುತ್ತ ಮುತ್ತಲಿನ ಜನವಸತಿ ಪ್ರದೇಶದ 2 ವರ್ಷಕ್ಕೆ ಮೇಲ್ಪಟ್ಟವರ ರಕ್ತದ ಮಾದರಿ ಸಂಗ್ರಹಿಸಿ, ರೋಗವನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿಗಳ ತಂಡವು ರಾತ್ರಿ 8 ರ ನಂತರ ಪ್ರತಿಮನೆ ಮನೆಗೆತೆರಳಿ ರಕ್ತದ ಮಾದರಿ ಸಂಗ್ರಹಸಲು ಬರುತ್ತಾರೆ, ತಡ ರಾತ್ರಿವರೆಗೂ ಈ ತಪಾಸಣಾ ಕಾರ್ಯ ನಡೆಸಲಿದ್ದು, ಸಾರ್ವಜನಿಕರು ಆರೋಗ್ಯ ಸಿಬ್ಬಂದಿಗಳು ಮನೆ ಬಳಿಗೆ ಬಂದ ವೇಳೆ ಭಯಪಡದೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
Related Articles
Advertisement
ರೋಗಕ್ಕೆ ಚಿಕಿತ್ಸೆಗಳೇನು:
ಸೊಳ್ಳೆಯಿಂದ ಸೋಂಕು ಪಡೆದ ಆರಂಭದಲ್ಲೇ ರಾತ್ರಿವೇಳೆ ರಕ್ತ ಮಾದರಿ ಸಂಗ್ರಹಿಸಿ, ಅದರಲ್ಲಿ ಮೈಕ್ರೋಫಿಲಾರಿಯಾ ಪರಾವಲಂಬಿ ಜೀವಿ ಕಂಡುಬಂದಲ್ಲಿ ಡಿಇಸಿ (೬ ಎಂ.ಜಿ-ಕೆ.ಜಿ) ಮಾತ್ರೆಯನ್ನು 12 ದಿನಗಳ ಕಾಲ ನೀಡಿ ಗುಣಪಡಿಸಬಹುದು. ಆರಂಭಿಕ ಹಂತದಲ್ಲೇ ಕಂಡು ಹಿಡಿಯದಿದ್ದರೆ, ಚಿಕಿತ್ಸೆ ಪಡೆಯದಿದ್ದರೆ. 8-10 ವರ್ಷದಲ್ಲಿ ಕಾಲು ಆನೆಕಾಲಿನ ಮಾದರಿ ಊತ ಬರಲಿದೆ. ವಾಸಿಯಾಗುವುದಿಲ್ಲ.
ನಿಯಂತ್ರಣ ಹೇಗೆ:
ಕ್ಯುಲೆಕ್ಸ್ ಸೊಳ್ಳೆಗಳು ಗಲೀಜು ನೀರಿನಲ್ಲಿ(ಚರಂಡಿ, ಕೊಳಚೆನೀರು ಶೇಖರಣಾಸ್ಥಳ, ಕಕ್ಕಸ್ಸುಗುಂಡಿ) ಉತ್ಪತ್ತಿಯಾಗಲಿದೆ. ಮನುಷ್ಯ ವಾಸಿಸುವ ಸ್ಥಳದಿಂದ 3 ಕಿ.ಮೀ. ದೂರ ವ್ಯಾಪ್ತಿಯಲ್ಲಿ ಗಲೀಜು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮಲಗುವಾಗ ಔಷಧ ಲೇಪಿತ ಸೊಳ್ಳೆ ಪರದೆ ಬಳಸಬೇಕು. ಸೊಳ್ಳೆ ನಿರೋಧಕ ಕಾಯಿಲ್ ಹಚ್ಚಬೇಕು. ಕ್ಯುಲೆಕ್ಸ್ ಉತ್ಪತ್ತಿ ಮತ್ತು ಕಚ್ಚಿವಿಕೆ ತಡೆಗಟ್ಟುವುದು. ಆನೆಕಾಲು ರೋಗ ತಡೆಗಟ್ಟುವುದು ನಿಯಂತ್ರಣದ ಮುಖ್ಯವಿಧಾನ.
ಈ ವೇಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವನಂಜು, ರತ್ನಾಕುಮಾರಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಲಕ್ಷ್ಮಮ, ಮಹದೇವಯ್ಯ ಸೇರಿದಂತೆ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.