Advertisement

ಕಾಡಾನೆಗಳ ದಾಳಿ, ತೋಟದ ಬೆಳೆ ನಾಶ

02:46 PM Nov 29, 2020 | Suhan S |

ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಹೋಬಳಿಯ ಹಲವು ಗ್ರಾಮಗಳಲ್ಲಿ ಕ ‌ಳೆದ ಎರಡು ದಿನಗಳಿಂದ ಕಾಡಾನೆಗಳ ‌ ಉಪಟಳ ಮುಂದುವರಿದಿದ್ದು, ಲಕ್ಷಾಂತರ ‌ ರೂ. ಮೌಲ್ಯದ ರಾಗಿ, ಟೋಮೆಟೋ, ಜೋಳ, ಕ್ಯಾರೆಟ್‌, ತೆಂಗು ಸೇರಿ ಹಲವು ಬೆಳೆಗಳನ್ನು ನಾಶ ‌ ಮಾಡಿದ್ದು, ಸುಮಾರು 30 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

Advertisement

ಬೆಳೆ ಹಾನಿ: ತಾಲೂಕಿನ ಬೂದಿಕೋಟೆ ಹೋಬಳಿಯ ಎಳೇಸಂದ್ರ, ಜುಂಜನಹಳ್ಳಿ, ಸೇರಿ ಹಲವು ಗ್ರಾಮಗಳಲ್ಲಿ 15 ಕ್ಕೂ ಹೆಚ್ಚಿನ ಗಜಪಡೆ ದಾಳಿ ಮಾಡಿದ್ದು, ಜುಂಜನಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪರಿಗೆ ಸೇರಿದ ಎರಡು ಎಕರೆ ಟೊಮೆಟೋ ಬೆಳೆ ಮತ್ತು ತೆಂಗಿನ ಮರಗಳನ್ನು, ಹೆಬ್ಬೆರಪ್ಪ ಹಾಗೂ ವೆಂಕಟಪ್ಪರ ರಾಗಿ ಬೆಳೆ ನಾಶ ಮಾಡಿವೆ. ಎಳೇಸಂದ್ರ ಗ್ರಾಮದ ನಿವೃತ್ತ ಶಿಕ್ಷಕ ಗೋವಿಂದಪ್ಪರ ಒಂದು ಎಕರೆ ಟೊಮೆಟೋ ಬೆಳೆ ಮತ್ತು ಹನಿ ನೀರಾವರಿಯ ಪೈಪುಗಳು, ಕೊಂಡನಹಳ್ಳಿ ರಾಮಪ್ಪರವರ ಒಂದು ಎಕರೆಟೊಮೆಟೋ, ಮುನಿಯಪ್ಪ ಅವರಿಗೆ ಸೇರಿದ ಒಂದು ಎಕರೆ ಕ್ಯಾರೆಟ್‌, ಕದಿರೇನಹಳ್ಳಿ ಗ್ರಾಮದರೈತ ಎಂ.ಸುರೇಶ್‌ ಮತ್ತು ನಾಗರಾಜ್‌ರಿಗೆ ಸೇರಿದ ಟೊಮೆಟೋ ಬೆಳೆ, ಭುವನಹಳ್ಳಿ ಗ್ರಾಮದ ನಾರಾಯಣಸ್ವಾಮಿಯ ಹನಿ ನೀರಾವರಿಯ ಫಿಲ್ಟರ್‌ ಹಾಗೂ ಪೈಪುಗಳು, ತೀತುಬನಹಳ್ಳಿ ಗ್ರಾಮದ ಬಸಪ್ಪಕಟಾವು ಮಾಡಿ ಕೂಡಿ ಹಾಕಿದ್ದ ರಾಗಿ ಮೆದೆ, ಗರುಡಗಾನಹಳ್ಳಿ ಗ್ರಾಮದ ತಿಮ್ಮರಾಯಪ್ಪರ ಜೋಳ, ರಾಗಿ ಬೆಳೆ ಸೇರಿ ಹಲವು ಬೆಳೆಗಳನ್ನು ಕಾಡಾನೆಗಳು ನಾಶಪಡಿಸಿದೆ.

ನೆರೆಯ ತಮಿಳುನಾಡು ಅರಣ್ಯ ಪ್ರದೇಶದಿಂದ ಬಂದಿರುವ 15 ಕ್ಕೂ ಮೇಲ್ಪಟ್ಟ ಗಜಪಡೆಸದ್ಯಕ್ಕೆಎಳೇಸಂದ್ರಬಳಿಯಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಗಜಪಡೆ ಹಿಮ್ಮೆಟ್ಟಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಹಲವು ತಿಂಗಳುಗಳಿಂದ ನಿರಂತರವಾಗಿ ಆನೆಗಳು ಬೆಳೆಗಳನ್ನು ನಾಶ ಮಾಡುತ್ತಾ, ರೈತರನ್ನು ಬಲಿ ಪಡೆದಿರುವ ಕಾರಣ ರೈತರು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಬೆಳೆ ಕಳೆದುಕೊಂಡ ರೈತರಿಗೆ ಸಕಾಲಕ್ಕೆ ಪರಿಹಾರ ಸಹ ಸಿಗದೇ ಇರುವುದರಿಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸಾಲ ಮಾಡಿ 3 ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗಿದ್ದು,ಉತ್ತಮ ಬೆಲೆ ಇದೆ.ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದ್ದು, ಬೆಳೆಗೆ ಮಾಡಿದ ಸಾಲ ತೀರಿಸಲುಕಷ್ಟವಾಗಿದೆ. ಸರ್ಕಾರಗಳು ಕಾಡಾನೆಗಳ ಹಾವಳಿ ತಪ್ಪಿಸಲು ವಿಶೇಷ ಯೋಜನೆ ರೂಪಿಸಬೇಕಾಗಿದೆ. ಗೋವಿಂದಪ್ಪ, ನಿವೃತ್ತ ಶಿಕ್ಷಕ ಹಾಗೂ ರೈತ ಎಳೇಸಂದ್ರ

Advertisement

ಇತ್ತೀಚೆಗೆಕಾಡಾನೆಗಳಕಾರ್ಯಾಚರಣೆಯಲ್ಲಿ ಸಿಬ್ಬಂದಿಯಕೆಲವರಿಗೆ ಗಾಯ ಗಳಾಗಿವೆ.ಹವಾಮಾನವೈಪರೀತ್ಯದಿಂದ ಆನೆಗಳ ಕಾರ್ಯಾಚರಣೆ ಕಷ್ಟವಾಗಿದ್ದು, ಬನ್ನೇರಘಟ್ಟದಿಂದ ನುರಿತರನ್ನು ಕರೆಸಿ ಕಾರ್ಯಾಚರಣೆಮಾಡಲಾಗುವುದು. ಬೂದಿಕೋಟೆ ಹೋಬಳಿಯಲ್ಲಿ ಕಾಡಾನೆಗಳ ದಾಳಿಯಿಂದ ರೈತರಿಗೆ ನಷ್ಟವಾಗಿರುವಬಗ್ಗೆ ಸರ್ಕಾರಕ್ಕೆ ಪರಿಹಾರ ನೀಡುವಂತೆವರದಿನೀಡಲಾಗಿದೆ. ಸುಧಾಕರ್‌ ಯಾದವ್‌, ಆರ್‌ಎಫ್ಒ, ಮಾಲೂರು

Advertisement

Udayavani is now on Telegram. Click here to join our channel and stay updated with the latest news.

Next