Advertisement

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

03:28 PM Oct 20, 2021 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಸಲಗವೊಂದು  ಗುರುಪುರ ಟಿಬೇಟ್ ಕ್ಯಾಂಪಿನಲ್ಲಿ ಸಾಕಷ್ಟು ದಾಂಧಲೆ ನಡೆಸಿದೆ.

Advertisement

ಸಲಗ ಕ್ಯಾಂಪಿನೊಳಗೆ ನುಗ್ಗಿದ್ದರಿಂದ ಆತಂಕಗೊಂಡ  ಟಿಬೇಟಿಯನ್ನರು ಕೊನೆಗೆ ಕಲ್ಲು ಹೊಡೆದು ಸಲಗವನ್ನು ಓಡೆಸಿದ್ದರೂ ಪಕ್ಕದ ಕುರುಚಲು ಕಾಡಿನಲ್ಲಿ ಆನೆ ಸೇರಿಕೊಂಡಿರುವುದುಆತಂಕ ಸೃಷ್ಟಿಸಿದೆ.

ಬುಧವಾರ ಮುಂಜಾನೆ ಉದ್ಯಾಮವನದ ಸೊಳ್ಳೆಪುರ ಕಡೆಯಿಂದ ಅರಣ್ಯ ದಾಟಿ ಬಂದಿದ್ದ ಸಲಗವು ಬಾಳೆ,ಜೋಳದ‌ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ. ಸಲಗವನ್ನು ಕಂಡ ಟಿಬೇಟಿಯನ್ನರು ಅಕ್ಕಪಕ್ಕದವರ ನೆರವಿನೊಂದಿಗೆ‌ ಸಲಗವನ್ನು ಕಾಡಿಗಟ್ಟುವ ವೇಳೆ ಕಾಡಾನೆ ಮನೆಗಳ ಬಳಿ ಧಾವಿಸಿ ಅಲ್ಲಿಯೂ ದಾಂಧಲೆ ನಡೆಸಿದೆ.

ವಿಷಯ ತಿಳಿದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next