Advertisement
ಆಹಾರ ಅರಸಿ ಗ್ರಾಮಗಳಿಗೆ ಲಗ್ಗೆ: ತಾಲೂಕಿನಲ್ಲಿ 1990ರ ದಶಕದಲ್ಲಿ ಕೂಡಗಿನ ಕೊಡ್ಲಿಪೇಟೆ ಹೋಬಳಿಯಿಂದ ಕಾಡಾನೆಗಳು ತಾಲೂಕಿಗೆ ಕಾಲಿಟ್ಟ ವೇಳೆ ಹೋಬಳಿಯ ಕೆರೋಡಿ, ಕುಂಬ್ರಹಳ್ಳಿ ಗ್ರಾಮದ ಹೇಮಾವತಿ ಹಿನ್ನೀರು ಪ್ರದೇಶದಲ್ಲಿನ ಬಿದಿರು ಮೇವು ಕಾಡಾನೆಗಳ ಆಹಾರ ತಾಣವಾಗಿತ್ತು. ರಾತ್ರಿ ವೇಳೆ ಆಹಾರ ಅರಸಿ ಹಿನ್ನೀರು ಪ್ರದೇಶಕ್ಕೆ ಬರುತ್ತಿದ್ದ ಕಾಡಾನೆಗಳು, ರಾತ್ರಿ ವೇಳೆ ಆಲೂರು ತಾಲೂಕಿ ನ ದೊಡ್ಡಬೆಟ್ಟ ಸೇರಿದಂತೆ ಉಪ ಅರಣ್ಯಗಳಲ್ಲಿ ಬೀಡುಬಿಡುತ್ತಿದ್ದವು. ಹಗಲು ವೇಳೆ ಕಣ್ಣೀಗೆ ಕಾಣದಂತೆ ಮರೆಯಾಗಿರುತ್ತಿದ್ದ ಕಾಡಾನೆಗಳು, ಇವುಗಳ ಸಂಖ್ಯೆ ಹೆಚ್ಚಿದಂತೆ ಹಗಲು ಸಂಚಾರಕ್ಕೆ ಮುಂದಾಗಿದ್ದವು.
Related Articles
Advertisement
ಅಘೋಷಿತ ಕರ್ಫ್ಯೂ: ಯಸಳೂರು ಹೋಬಳಿಯಲ್ಲಿ 2000 ಸಾಲಿನಿಂದ ರಿಂದ 2020 ರವರಗೂ ಅತಿಯಾಗಿದ್ದ ಕಾಡಾನೆಗಳ ಸಮಸ್ಯೆಯಿಂದ ಕೊಡಗು ಹಾಗೂ ಹಾಸನ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೇರಿ ದಂತೆ ಹಲವು ಹೋಬಳಿಯ ಪ್ರಮುಖ ರಸ್ತೆಗಳಲ್ಲಿ ಕತ್ತಲಾದ ನಂತರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದ್ದರೆ, ಜನರು ಕತ್ತಲಾದ ನಂತರ ತಮ್ಮ ಗ್ರಾಮಗಳಿಗೆ ತೆರಳಲು ಅಂಜುತ್ತಿದ್ದರು. ಇದರಿಂದಾಗಿ ಇಡಿ ಹೋಬಳಿಯಲ್ಲಿ ಎರಡು ದಶಕಗಳ ಕಾಲ ಅಘೋಷಿತ ಕರ್ಫ್ಯೂ ಜಾರಿಯಲ್ಲಿತ್ತು. ತೋಟಗಳ ನಿರ್ವಹಣ ಶೈಲಿ ಬದಲು: ಹೌದು ಕಾಡಾನೆ ಸಮಸ್ಯೆ ಅಲ್ಪಮೆಟ್ಟಿಗೆ ತಗ್ಗಲು ಹೋಬಳಿಯ ಬೆಳೆಗಾರರು ತಮ್ಮ ತೋಟ ದ ನಿರ್ವಹಣ ಶೈಲಿ ಬದಲಿಸಿಕೊಂಡಿರುವುದು ಕಾರಣ ಎನ್ನಲಾಗುತ್ತಿದೆ.
ಆರಂಭದಲ್ಲಿ ಬೈನೆ, ಹಲಸಿನ ನಂತಹ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಕಾಫಿ ತೋಟದಲ್ಲಿ ಬೆಳೆಯಲಾಗುತ್ತಿದ್ದರೆ ಬಾಳೆ ಸೇರಿದಂತೆ ಹಲವು ಉಪಬೆಳೆಗಳು ತೋಟದಲ್ಲಿ ಹೆಚ್ಚಾಗಿದ್ದವು. ಆದರೆ, ಕಾಡಾನೆ ಕಾಟ ಹೆಚ್ಚದಾಂತೆ ಅನಗತ್ಯ ಹಲಸು ಹಾಗೂ ಬೈನೆಯಂತಹ ಮರಗಳನ್ನು ತೋಟದಿಂದಲೇ ಹೊರ ಹಾಕಲಾಗಿದ್ದರೆ ಬಾಳೆಯಂತಹ ಉಪಬೆಳೆಗಳಿಗೆ ತೋಟದಲ್ಲಿ ಸ್ಥಳಲ್ಲದಂತೆ ಮಾಡಲಾಗಿದೆ. ಇದರಿಂದ ಹೆಚ್ಚಿರುವ ಕಾಡಾನೆಗಳಿಗೆ ಹೋಬಳಿಯಲ್ಲಿ ಆಹಾರದ ಕೊರತೆ ಎದುರಾಗಿದ್ದೆ ಬೇರೆಡೆ ವಲಸೆ ಹೋಗಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಮಸ್ಯೆ ಕ್ಷೀಣ: ಆರು ತಿಂಗಳ ಅವಧಿಯಲ್ಲಿ ಹೆತ್ತೂರು ಹೋಬಳಿ ಓರ್ವ ಹಾಗೂ ಬೆಳಗೋಡು ಹೋಬಳಿ ಯಲ್ಲಿ ನಾಲ್ವರು ಕಾಡಾನೆಧಾಳಿಗೆ ಸಿಲುಕಿ ಮೃತಪಟ್ಟಿದ್ದರೆ, ಬೆಳೆಹಾನಿ ಸಮೀಕ್ಷೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದೆ ಅವಧಿಯಲ್ಲಿ ಯಸಳೂರು ಹೋಬಳಿಯಲ್ಲಿ ಪ್ರಾ ಣಹಾನಿ ಬಗ್ಗೆ ವರದಿಯಾಗಿಲ್ಲದಿರುವುದು, ಬೆಳೆ ಹಾನಿ ತೀರ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಹೋಬಳಿಯಲ್ಲಿ ಕಾಡಾನೆ ಹಾವಳಿ ಸಮಸ್ಯೆ ಕೊಂಚ ತಗ್ಗಿದೆ ಎನ್ನಲು ಕಾರಣವಾಗಿದೆ.
ಹರಿಯುವ ನೀರು ಹಾಗೂ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಯಸಳೂರು ಹೋಬಳಿಯಲ್ಲಿ ಅತಿಹೆಚ್ಚುವರ್ಷ ಕಾಡಾನೆಗಳು ನೆಲೆ ನಿಲ್ಲಲ್ಲು ಕಾರಣ. ಆದರೆ ಇತ್ತೀಚ್ಚಿಗೆ ತೋಟದಲ್ಲಿ ಅವುಗಳ ಇಷ್ಟದ ಆಹಾರಗಳ ಕೊರತೆ ಎದುರಾಗಿರುವುದು ಬೇರೆಡೆ ವಲಸೆ ಹೋಗಲು ಕಾರಣವಿಬಹುದು: ● ಯೋಗೇಶ್, ಕೆರೋಡಿ ಗ್ರಾಮಸ್ಥ
ಯಸಳೂರು ಹೋಬಳಿಯಲ್ಲಿ ಕಾಡಾನೆಗಳ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಇಲ್ಲಿದ್ದ ಕಾಡಾನೆಗಳು ಹೆತ್ತೂರು ಹೋಬಳಿಯಡೆಗೆ ವಲಸೆ ಬಂದಿದ್ದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿವೆ. ● ಸುರೇಶ್, ಎಸಿಎಫ್, ಸಕಲೇಶಪುರ.
-ಸುಧೀರ್ ಎಸ್.ಎಲ್