ಹುಣಸೂರು: ನಾಗರಹೊಳೆ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡನೇ ದಿನದ ಗಜ ಗಣತಿ ಕಾರ್ಯದಲ್ಲಿ ಲೈನ್ ಟ್ರಾನ್ಸೆಕ್ಟ್ ಮೂಲಕ ಆನೆಗಳ ಲದ್ದಿ, ಹೆಜ್ಜೆ ಗುರುತುಗಳನ್ನು ದಾಖಲಿಸಲಾಯಿತು.
ಉದ್ಯಾನದೊಳಗೆ ಗಣತಿ ಕಾರ್ಯಕ್ಕಾಗಿ ಎಲ್ಲ 8 ವಲಯಗಳಲ್ಲಿ ಮೊದಲೇ ನಿರ್ಮಿಸಿರುವ ಎರಡು ಕಿ.ಮೀ.ಟ್ರಾನ್ಸೆಕ್ಟ್ ಲೈನ್‌ನಲ್ಲಿ ಮುಂಜಾನೆ 6ರಿಂದ ತರಬೇತಿ ಗಣತಿದಾರರು ಎರಡು ಕಿ.ಮೀ.ದೂರದವರೆಗೆ ನಡಿಗೆಯಲ್ಲಿ ಗಣತಿದಾರರು ತೆರಳಿ ಎರಡೂ ಬದಿ ಕಾಣುವ ಆನೆಗಳ ಲದ್ದಿ, ಹೆಜ್ಜೆ ಗುರುತುಗಳನ್ನು ದಾಖಲಿಸಿಕೊಂಡರು.
ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದರವರು ವಿವಿಧ ವಲಯದಲ್ಲಿ ನಡೆದ ಗಣತಿ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಿ ಗಣತಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಎಸಿಎಫ್ ರಂಗಸ್ವಾಮಿ, ಆರ್‌ಎಫ್‌ಓ ಭರತ್ ಮತ್ತಿತರರಿದ್ದರು.
ಇಂದು ಕೆರೆಗಳ ಬಳಿ ಗಣತಿ: ಗಣತಿಯ ಕೊನೆ ದಿನವಾದ ಶನಿವಾರದಂದು ಉದ್ಯಾನದ ಕೆರೆಗಳ ಬಳಿ ಗಣತಿ ಸಿಬ್ಬಂದಿಗಳು ಮುಂಜಾನೆಯಿಂದ ಸಂಜೆವರೆಗೂ ಕುಳಿತು ನೀರು ಕುಡಿಯಲು ಕೆರೆಗಳಿಗೆ ಬರುವ ಆನೆಗಳ ಛಾಯಾಚಿತ್ರದೊಂದಿಗೆ ಮಾಹಿತಿ ದಾಖಲಿಸುವರು.