Advertisement

ಇದ್ದಿಲು ತಿಂದು ಹೊಗೆ ಬಿಡುವ ಆನೆ!

06:00 AM Mar 27, 2018 | |

ನವದೆಹಲಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು ಧೂಮವನ್ನು ಹೊರಬಿಡುವ ವಿಡಿಯೋ ಭಾರಿ ಪ್ರಚಾರ ಪಡೆದಿದೆ. 2016ರಲ್ಲಿ ವೈಲ್ಡ್‌ಲೈಫ್ ಕನ್ಸರ್ವೇಶನ್‌ ಸೊಸೈಟಿಯ ಭಾರತೀಯ ವಿಭಾಗದ ಸಹಾಯಕ ನಿರ್ದೇಶಕ ವಿನಯ್‌ ಕುಮಾರ್‌ ಸೆರೆ ಹಿಡಿದಿರುವ ವಿಡಿಯೋದಲ್ಲಿ ಆನೆಗಳ ಈ ವಿಚಿತ್ರ ಹವ್ಯಾಸ ಬಹಿರಂಗಗೊಂಡಿತ್ತು. ಮರ ಸುಟ್ಟ ಇದ್ದಿಲನ್ನು ತಿಂದುಕೊಂಡು ಆನೆಗಳು ಧೂಮವನ್ನು ಸೊಂಡಿಲಿನಿಂದ ಹೊರಹಾಕುತ್ತಿದೆ ಎಂದು ಹೇಳಲಾಗಿದ್ದು, ಇದಕ್ಕೆ ಹಲವು ರೀತಿಯ ಕಾರಣಗಳನ್ನೂ ನೀಡಲಾಗುತ್ತಿದೆ. ಇದ್ದಿಲು ವಿಷಾಂಶವನ್ನು ಹೀರಿಕೊಳ್ಳುವ ಶಕ್ತಿ ಹೊಂದಿದ್ದು, ಇದು ವನ್ಯಜೀವಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸು ವುದರಿಂದ, ಕಾಡ್ಗಿಚ್ಚು ಅಥವಾ ಮಿಂಚಿನ ಸಂದರ್ಭದಲ್ಲಿ ಉಂಟಾಗುವ ಇದ್ದಿಲನ್ನು ಇವು ಸೇವಿಸುತ್ತವೆ ಎಂದು ವಿನಯ್‌ ಕುಮಾರ್‌ ಹೇಳಿದ್ದಾರೆ. 

Advertisement

ಇಂಗಾಲಯುಕ್ತ ಇದ್ದಿಲು ಜೀರ್ಣ ಪ್ರಕ್ರಿಯೆಯಲ್ಲಿ ಧೂಮ ಉಗುಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 2016ರಲ್ಲೇ ಇದನ್ನು ರೆಕಾರ್ಡ್‌ ಮಾಡಲಾಗಿತ್ತಾದರೂ, ವೀಡಿಯೋ  ಬಿಡುಗಡೆ ಮಾಡಿರಲಿಲ್ಲ. ಇತ್ತೀಚೆಗೆ ಇದನ್ನು ಬಿಡುಗಡೆ ಮಾಡಿದ ನಂತರದಲ್ಲಿ ವನ್ಯಜೀವಿ ಪ್ರಿಯರಲ್ಲಿ ಅತ್ಯಂತ ಕುತೂಹಲ ಮೂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next