Advertisement

Hunsur: ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಆನೆ  ಬಲಿ

02:38 PM Oct 03, 2023 | |

ಹುಣಸೂರು: ನಾಗರಹೊಳೆ ಉದ್ಯಾನದ ಮೇಟಿಕುಪ್ಪೆ ವಲಯದಂಚಿನ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಸುಮಾರು 25 ವರ್ಷದ ಮಖನಾ ಆನೆ ಸಾವನ್ನಪ್ಪಿದೆ.

Advertisement

ನಾಗರಹೊಳೆ ಉದ್ಯಾನದ ಮೇಟಿಕುಪ್ಪೆ ವಲಯದಂಚಿನ ಜಿ.ಎಂ.ಹಳ್ಳಿಯ ಜಮೀನೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಜಮೀನು ಮಾಲಿಕ ತಲೆಮರೆಸಿಕೊಂಡಿದ್ದಾರೆ.

ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಎಸಿಎಫ್ ರಂಗಸ್ವಾಮಿ, ಆರ್.ಎಫ್.ಓ.ಗಳಾದ  ಹರ್ಷಿತ್ ಗೌಡ, ಪೂಜಾ ಭೇಟಿ ನೀಡಿ ಪರಿಶೀಲಿಸಿದರು.

ಘಟನೆಯ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next