Advertisement

37 ಜನರನ್ನು ಕೊಂದ “ಲಾಡೆನ್‌’

06:00 AM Jun 10, 2018 | Team Udayavani |

ಗುವಾಹಟಿ: ಈ ಲಾಡೆನ್‌ 2016 ರಿಂದ ಈವರೆಗೆ ಸುಮಾರು 37 ಜನರನ್ನು ಕೊಂದುಹಾಕಿದ್ದಾನಂತೆ! ಅವನನ್ನೀಗ “ಕ್ರೂರಿ’ ಎಂದು ಘೋಷಿಸಿ ಎಂಬ ಒತ್ತಾಯ ಕೇಳಿಬಂದಿದೆ.

Advertisement

ಅಂದ ಹಾಗೆ, ಲಾಡೆನ್‌ ಎಂಬ ಹೆಸರು ಕೇಳಿ, ಇವನನ್ನು ಉಗ್ರ ಒಸಮಾ ಬಿನ್‌ ಲಾಡೆನ್‌ ಎಂದು ಭಾವಿಸಬೇಡಿ. ಅಸ್ಸಾಂನ ಗುವಾಹಟಿಯಲ್ಲಿರುವ ಆನೆಯ ಹೆಸರಿದು. ಇಲ್ಲಿನ ಗ್ರಾಮಸ್ಥರನ್ನು ಅಟ್ಟಾಡಿಸಿ, ಬೆದರಿಸಿರುವಂಥ ಈ ಆನೆಗೆ ಸ್ಥಳೀ ಯರೇ “ಲಾಡೆನ್‌’ ಎಂದು ಹೆಸರಿಟ್ಟಿ ದ್ದಾರೆ. ಗೋಲ್‌ಪಾರಾ ಅರಣ್ಯದ 363 ಚದರ ಕಿ.ಮೀ. ವ್ಯಾಪ್ತಿಯಲ್ಲಿ 2016ರಿಂದ ಈವರೆಗೆ ಸುಮಾರು 37 ಜನರು ಆನೆ ದಾಳಿಯಿಂದ ಮೃತ ಪಟ್ಟಿದ್ದು, ಇದಕ್ಕೆಲ್ಲ ಇದೇ ಆನೆ ಕಾರಣ. ಹಾಗಾಗಿ ಲಾಡೆನ್‌ನನ್ನು ಕ್ರೂರಿ ಎಂದು ಘೋಷಿಸಿ ಎಂದು ಅ ಸ್ಸಾಂ ರಾಜ್ಯ ಅರಣ್ಯ ಇಲಾಖೆಗೆ ಇಲ್ಲಿನ ಅಧಿಕಾರಿಯೊಬ್ಬರು ಆಗ್ರಹಿಸಿದ್ದಾರೆ.

ಜೂ.1ರಂದು ಪತ್ಪಾರ ಪಹೊಲಿ ಗ್ರಾಮದ ಬುಡಕಟ್ಟು ವ್ಯಕ್ತಿ ಮನೋಜ್‌ ಹಜೋಗ್‌ನನ್ನೂ ಆನೆ ಬಲಿ ಪಡೆದುಕೊಂಡಿತ್ತು. ಈ ಆನೆಯ ಚಲನವಲನಗಳನ್ನು ಪರೀಶೀಲಿಸಿ, ಈ ಮುಂಚೆ ನಡೆದ ಹತ್ಯೆಗಳನ್ನೂ ಇದೇ ಆನೆ ನಡೆಸಿದೆ ಎಂದು ಅಧಿಕಾರಿ ನಯನ್‌ಜ್ಯೋತಿ ರಾನ್‌ಬೋಂಗಿÏ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next