Advertisement

ಪ್ರಿಯಕರನಿಗಾಗಿ ಕರುಳಿನ ಕುಡಿಜತೆ ಕಾಡು ಸೇರಿದ ನೇತ್ರಾ! ಸಕ್ರೆಬೈಲಲ್ಲಿ ಆನೆಗಳ ಪ್ರೇಮದ ಕತೆ

12:02 PM Sep 07, 2021 | Team Udayavani |

ಶಿವಮೊಗ್ಗ: ಪ್ರಿಯಕರನ ಮೋಹಕ್ಕೆ ಬಿದ್ದ ತಾಯಿ ನೇತ್ರಾ ತನ್ನ ಮಗುವಿನ ಜತೆ ಕಾಡು ಸೇರಿ 17 ದಿನ ಕಳೆಯಿತು. ಬಂಧು-ಬಳಗ ಅತ್ತು ಕರೆದರೂ ಮನೆಗೆ ವಾಪಸ್‌ ಬರುತ್ತಿಲ್ಲ. ಮನೆ ಮಂದಿಗಿಂತ ಪ್ರಿಯಕರನ ಪ್ರೀತಿಯೇ ಹೆಚ್ಚು ಎಂಬಂತೆ ಅಲ್ಲಿಯೇ ಉಳಿದಿದ್ದಾಳೆ!

Advertisement

ಇದು ಮಾಮೂಲಿ ಯುವಕ-ಯುವತಿಯರ ಪ್ರೇಮ ಕಹಾನಿ ಅಲ್ಲ. ಕಾಡು ಮತ್ತು ನಾಡಿನ ಆನೆಗಳ “ಪ್ರೀತಿಯ ದಂತ’ ಕಥೆ. ಮನುಷ್ಯನ ಪ್ರೀತಿಗಿಂತ ತುಸು ಹೆಚ್ಚೇ ಎನ್ನು ವಂತೆ ವ್ಯಕ್ತವಾಗಿದ್ದು ವಿಶೇಷ. ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆ ನೇತ್ರಾ ತನ್ನ ಮರಿಯೊಂದಿಗೆ ಈಗ ಪ್ರಿಯಕರನ ಸೇರಲು ಮನೆ ಬಿಟ್ಟು ಕಾಡು ಸೇರಿದ್ದಾಳೆ. ತವರಿಗಿಂತ ಪ್ರಿಯಕರನ ಮಡಿಲಲ್ಲಿ ಹಾಯಾಗಿದ್ದಾಳೆ.

ಏನಿದು ಆನೆ ಪ್ರೀತಿ?: ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಪ್ರತಿದಿನ ಶೆಟ್ಟಿಹಳ್ಳಿ ಅರಣ್ಯದಲ್ಲಿ ಮೇವು ತಿನ್ನಲು ಬಿಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಹೋಗುವ ಕಾಡಾನೆಗಳು ಸಂಜೆ ಮನೆ ಸೇರುತ್ತವೆ. ದೂರ ಹೋಗಿದ್ದರೆ ಬೆಳಗ್ಗೆ ಬರುತ್ತವೆ. ಶೆಟ್ಟಿಹಳ್ಳಿ ಅರಣ್ಯದಲ್ಲಿ ಸಕ್ರೆಬೈಲು ಆನೆ ಬಿಡಾರದ ಲ್ಲಿರುವ ಆನೆಗಳಷ್ಟೇ ಅಲ್ಲದೇ ಮೂರು ಕಾಡಾನೆಗಳಿವೆ. ಈ ಮೂರು ಕಾಡಾನೆಗಳು ಹೆಣ್ಣಾನೆಗಳನ್ನು ಹುಡುಕಿಕೊಂಡು ಅನೇಕಬಾರಿ ಬಿಡಾರದಬಳಿ ಕೂಡಬರುತ್ತವೆ.ಹೆಣ್ಣಾನೆಗಳ ಹುಡುಕಾಟದಲ್ಲಿದ್ದ ಕಾಡಾನೆ ಪ್ರತಿದಿನ ಬಂದು ನೇತ್ರಾಳಿಗೆ ಲೈನ್‌ ಹೊಡೆದು ತನ್ನ ಮೋಹದ ಬಲೆಗೆ ಬೀಳಿಸಲು ಯಶಸ್ವಿಯಾಗಿದೆ. ಪ್ರೇಮ ಪಾಶಕ್ಕೆ ಬಿದ್ದ ನೇತ್ರಾ ನಾಡು ಬಿಟ್ಟು ಪ್ರಿಯಕರನ ಜತೆ ಕಾಡಿಗೆ ತೆರಳಿದೆ. ಜತೆಗೆ ತನ್ನ ಎರಡು ವರ್ಷದ ಮಗುವನ್ನೂ ಕರೆದುಕೊಂಡು ಹೋಗಿದೆ.

ಇದನ್ನೂ ಓದಿ :ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಿದ ತಾಲಿಬಾನ್

ಅಧಿಕಾರಿಗಳು, ಮಾವುತರು ನೇತ್ರಾ ಹಾಗೂ 2 ವರ್ಷದ ಮಗುವನ್ನು ಕರೆತರಲು ಕಾಡಿಗೆ ಹೋದರೆ ನೇತ್ರಾ ಬರಲು ಒಪ್ಪುತ್ತಿಲ್ಲ. ನೇತ್ರಾ ಹೋದರೆ ಹೋಗಲಿ 2 ವರ್ಷದ ಮಗುವನ್ನಾದರೂ ಕರೆ ತರಲು ಯತ್ನಿಸಿದ ಅಧಿಕಾರಿಗಳಿಗೆ ಫ‌ಲ ಸಿಕ್ಕಿಲ್ಲ. ಪ್ರಣಯದ ನಂತರ ತಾಯಿ ನೇತ್ರಾ ತನ್ನ ಮಗುವಿನ ಜತೆ ವಾಪಸ್‌ ಬರುವ ನಿರೀಕ್ಷೆಯಲ್ಲಿದ್ದಾರೆ ಬಿಡಾರದ ಸಿಬ್ಬಂದಿ.

Advertisement

ಕೋರ್ಟ್‌ಶಿಪ್‌ ಬಿಹೇವಿಯರ್‌ ಅಥವಾ ಪ್ರಣಯದ ವರ್ತನೆ ಮೂಲಕ ಗಂಡಾನೆಗಳು ಹೆಣ್ಣಾನೆಗಳನ್ನು ಆಕರ್ಷಿಸುತ್ತವೆ. ಆಂಗಿಕ ಭಾವ, ಗುಣಲಕ್ಷಣ, ವರ್ತನೆಯಿಂದ ಗಂಡಾನೆಗಳು ಹೆಣ್ಣಾನೆಗಳನ್ನು ಆಕರ್ಷಿಸುತ್ತವೆ. ಒಂದು ಹೆಣ್ಣಾನೆ ಸೆಳೆಯಲುಕನಿಷ್ಠ ಒಂದು ವಾರವಾದರೂ ಬೇಕು. ಆಕರ್ಷಣೆಗೊಳಗಾದ ನಂತರ ತಿಂಗಳುಗಟ್ಟಲೆ ಜತೆಗಿದ್ದು ಲೈಂಗಿಕ ಸಂಪರ್ಕ ಹೊಂದುತ್ತವೆ. ಆಸೆ ಈಡೇರಿದ ಬಳಿಕ ಬಿಟ್ಟು ಕಳಿಸುತ್ತವೆ.

ನೇತ್ರಾ ಕೂಡ ಗಂಡಾನೆಗೆ ಆಕರ್ಷಣೆಗೊಂಡಿದ್ದುಮಾವುತರು, ಕಾವಾಡಿಗಳು ವಾಪಸ್‌ ಕರೆತರಲು ಹರಸಾಹಸ ಪಡುತ್ತಿದ್ದಾರೆ. ಬಿಡಾರದ ಸಾಕಾನೆಗಳ ಮೂಲಕ ಕರೆತರುವ ಪ್ರಯತ್ನ ಕೈಗೂಡಿಲ್ಲ. ಈ ಹಿಂದೆ ಅನೇಕ ಆನೆಗಳು ಈ ರೀತಿ ನಡೆದುಕೊಂಡಿರುವ ಉದಾಹರಣೆಗಳಿವೆ. ಹಾಗಾಗಿ ಕೆಲ ದಿನಗಳ ಲ್ಲಿ ವಾಪಸ್‌ ಬರುವ ‌ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ನೇತ್ರಾಳ ಹಠ ಯಶಸ್ವಿಯಾದರೆ ಸಕ್ರೆಬೈಲಿಗೆ ಕಾಡಾನೆ ಜೀನ್‌ ಇರುವ ಅತಿಥಿ ಬರುವುದು ಖಾತ್ರಿಯಾದಂತೆ.

ಅವಧಿಗೆ ಮುನ್ನ ವೇ ನೇತ್ರಾ ಡೇಟಿಂಗ್‌
ಸಾಮಾನ್ಯವಾಗಿ ಹೆಣ್ಣಾನೆಗಳು ಮರಿ ಹಾಕಿ ಎರಡು ವರ್ಷ ಬಳಿಕ ಬೇರೆ ಆನೆಜತೆಡೇಟಿಂಗ್‌ಗೆಹೋಗುತ್ತವೆ. ಆದರೆಈ ಪ್ರಕರಣದಲ್ಲಿ ತನ್ನ ಎರಡು ವರ್ಷದ ಮರಿ ಜತೆಯೇ ಹೊರಟಿರುವುದು ಆಶ್ಚರ್ಯ ಮೂಡಿಸಿದೆ. ಕರ್ನಾಟಕದಲ್ಲಿರುವ ಆನೆಗಳಲ್ಲಿ ಒಂದೇ ರೀತಿಯ ವಂಶಾವಳಿ ಇರುವುದರಿಂದಕಾಡಾನೆ ಜತೆ ಸಂಪರ್ಕ ಹೊಂದಿ ಮಗು ಜನಿಸಿದರೂ ಯಾವುದೇ ರೀತಿಯ ಬದಲಾವಣೆ ಇರಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸಂಗಾತಿ ಸಿಗದಿದ್ದರೆ ದಾಳಿ!
ಹೆಣ್ಣಾನೆಕಂಡರೆ ಹಾತೊರೆಯುವಕಾಡಾನೆಗಳು ಸಂಗಾತಿ ದೊರೆಯದಿದ್ದಾಗ ಗಂಡಾನೆಗಳನ್ನೇ ಮುಗಿಸಿ ಬಿಡುತ್ತವೆ. ಈಚೆಗೆ ರಂಗ ಎಂಬ ಆನೆಯನ್ನು ಇದೇ ರೀತಿ ಕಾಡಾನೆಗಳು ತಿವಿದು ಕೊಂದಿದ್ದವು. ಬಿಡಾರದ ಹೆಣ್ಣಾನೆಗಳ ಜತೆ ಡೇಟಿಂಗ್‌ ಮಾಡುವ ಭದ್ರಾ ಅಭಯಾರಣ್ಯದಿಂದ ಬಂದಿರುವ ಮೂರುಕಾಡಾನೆಗಳು ಗಂಡಾನೆಗಳಿಗೆ ಯಮದೂತರಾಗಿ ಪರಿಣಮಿಸಿವೆ. ಬಿಡಾರದ ಅನೇಕ ಆನೆಗಳು ಇದೇ ರೀತಿ ಮೃತಪಟ್ಟಿವೆ.

– ಶರತ್ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next