ಚಿಕ್ಕಮಗಳೂರು: ಆನೆ ದಂತದಿಂದ ಚೆಸ್ ಆಟದ ಪಾನ್ ತಯಾರಿಸಿ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸಕಲೇಶಪುರ ಮೂಲದ ಮೆಲ್ವಿನ್ ಬಂಧಿತ ಆರೋಪಿಯಾಗಿದ್ದಾನೆ.
ಈತ ಆನೆದಂತದಲ್ಲಿ ಚದುರಂಗದ ಪಾನ್ ತಯಾರಿಸಿ ಮಾರಾಟ ಮಾಡಲು ಹೊರಟಿದ್ದ ವೇಳೆ ಅರಣ್ಯ ಇಲಾಖೆ ಸಿಐಡಿ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆರೋಪಿ ಬಳಿ ಕಪ್ಪು ಹಾಗೂ ಬಿಳಿ ಬಣ್ಣದ 32 ಪಾನ್ , ಆನೆ ದಂತದಲ್ಲಿ ಕೆತ್ತಿದ್ದ ಚೆಸ್ ಪಾನ್ ಇಡುವ ಬಾಕ್ಸ್ ಜೊತೆಗೆ ಟ್ರೋಫಿಗೆ ಹಾಕಿರುವ ಜಿಂಕೆ ಕೊಂಬು ಪತ್ತೆಯಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೆಲ್ವಿನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.