ನವದೆಹಲಿ: ಇತ್ತೀಚೆಗೆ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ನಾಡಿಗೆ ಬಂದು ಕಾಡಾನೆಗಳು ದಾಂಧಲೆ ನಡೆಸುತ್ತಿರುವ ಘಟನೆಗಳನ್ನು ನಾವು ಕೇಳುತ್ತಲ್ಲೇ ಇರುತ್ತೇವೆ. ಇಲ್ಲೊಬ್ಬ ಯುವಕ ಆನೆಗೆ ಉಪಟಳ ಕೊಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ಅಲ್ಲೊಂದಿಷ್ಟು ಆನೆಗಳ ಗುಂಪು ನಿಂತುಕೊಂಡಿವೆ. ಅದರ ಮುಂದೆ ಇಬ್ಬರು ಹುಡುಗರು ಧೈರ್ಯವಂತರಂತೆ ನಿಂತಿದ್ದಾರೆ. ಅದರಲ್ಲಿ ಒಬ್ಬ ಕೋಲೊಂದರಿಂದ ಆನೆಗೆ ಹೊಡಿದಿದ್ದಾನೆ. ಒಂದೆರೆಡು ಪೆಟ್ಟು ತಿಂದು ಸುಮ್ಮನಿದ್ದ ಆನೆ ಬಳಿಕ ಕೋಲಿನಿಂದ ಹೊಡೆದ ಹುಡುಗ ಹಾಗೂ ಆತನ ಸ್ನೇಹಿತನನ್ನು ಅಟ್ಟಾಡಿಸಿಕೊಂಡು ಬಂದಿದೆ. ಭಯದಿಂದ ಇಬ್ಬರು ಓಡಿ ಹೋಗಿದ್ದಾರೆ.
ಈ ವಿಡಿಯೋವನ್ನು ಡಿ.4 ರಂದು (ಭಾನುವಾರ) ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುರೇಂದರ್ ಮೆಹ್ರಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡು ಇದೊಂದು ಹುಚ್ಚಾಟ ಎಂದು ಬರೆದುಕೊಂಡು, ವಿಡಿಯೋ ಹಂಚಿಕೊಂಡಿದ್ದಾರೆ.
4 ಸೆಕೆಂಡ್ ಗಳ ಈ ವಿಡಿಯೋವನ್ನು 14 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಇದು ಹುಚ್ಚತನ, ಇವರ ವಿರುದ್ಧ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಿ ಎಂದಿದ್ದಾರೆ.