Advertisement

ಹೊನ್ನಾಳಿ: ಕೊನೆಗೂ ಸೆರ ಸಿಕ್ಕಿತು ಒಂಟಿ ಸಲಗ; ಕಾರ್ಯಾಚರಣೆ ವೇಳೆ ವೈದ್ಯರ ಮೇಲೂ ದಾಳಿ

02:42 PM Apr 11, 2023 | Team Udayavani |

ದಾವಣಗೆರೆ: ಚನ್ನಗಿರಿ ತಾಲೂಕಿನ ಸೋಮಲಾಪುರದಲ್ಲಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾಗಿದ್ದ ಆನೆಯನ್ನು ಮಂಗಳವಾರ ಹೊನ್ನಾಳಿ ತಾಲೂಕಿನ ಜೀನಹಳ್ಳಿ ಬಳಿ ಸೆರೆ ಹಿಡಿಯಲಾಗಿದೆ.

Advertisement

ಹಾಸನ ಜಿಲ್ಲೆಯ ಆಲೂರು ಭಾಗದಿಂದ ಬಂದಿದ್ದ ಆನೆ ಶನಿವಾರ ಚನ್ನಗಿರಿ ತಾಲೂಕಿನ ವಿವಿಧ ಗ್ರಾಮದಲ್ಲಿ ದಾಂಧಲೆ ನಡೆಸಿತ್ತು. ಸೋಮಲಾಪುರ ಗ್ರಾಮದಲ್ಲಿ ಮನೆ ಮುಂದೆ ಕೆಲಸ ಮಾಡುತ್ತಿದ್ದ ಕವನಾ ಎಂಬ ವಿದ್ಯಾರ್ಥಿನಿಯನ್ನ ನೆಲಕ್ಕೆ ಅಪ್ಪಳಿಸಿದ್ದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಆನೆ ದಾಳಿಯಿಂದ ಇತರ ಮೂವರು ಗಾಯಗೊಂಡಿದ್ದರು.

ಸೋಮಲಾಪುರದಲ್ಲಿ ದಾಳಿ ನಂತರ ಸೂಳೆಕೆರೆ ಇತರೆ ಭಾಗಕ್ಕೂ ನುಗ್ಗಿತ್ತು. ಶನಿವಾರದ ಸಂಜೆ ವೇಳೆಗೆ ಬಸವಾಪಟ್ಟಣ ಸಮೀಪದ ಶೃಂಗಾರ್‌ಬಾಗ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.

ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ವಿಶೇಷವಾಗಿ ಸಕ್ರೆಬೈಲ್ ಬಿಡಾರದಿಂದ ಆನೆಗಳನ್ನ ಕರೆ ತರಲಾಗಿತ್ತು. ಸತತ ಕಾರ್ಯಾಚರಣೆ ನಂತರ ಜೀನಹಳ್ಳಿ ಬಳಿ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.

ಕಾಡಾನೆ ಪತ್ತೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಸಿಬ್ಬಂದಿ ಮತ್ತು ಡಾರ್ಟ್ ತಜ್ಞರು ಜೀನಹಳ್ಳಿ ಬಳಿ ಆನೆ ಇರುವುದನ್ನ ಪತ್ತೆ ಹಚ್ಚಿದ್ದರು. ಡ್ರೋನ್ ಮೂಲಕ ಆನೆ ಇರುವಂತಹ ಜಾಗವನ್ನ ಸರಿಯಾಗಿ ಪತ್ತೆ ಮಾಡಲಾಗಿತ್ತು. ಸಕ್ರೆಬೈಲ್‌ನಿಂದ ಕಾರ್ಯಾಚರಣೆಗೆ ಆಗಮಿಸಿದ್ದ ಆನೆಗಳೊಂದಿಗೆ ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಿ, ಡಾರ್ಟ್ ಮಾಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆನೆ ಸೆರೆಯಾಗುವ ಮುನ್ನ ಕಾರ್ಯಾಚರಣೆ ನಡೆಸುತ್ತಿದ್ದ ತಂಡದಲ್ಲಿದ್ದ ಡಾ. ವಿನಯ್ ಮೇಲೆ ಆನೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆಯೂ ನಡೆಯಿತು.

ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಡಾರ್ಟ್ ಮಾಡಿದ ನಂತರ ಆನೆ ನೆಲಕ್ಕೆ ಉರಿಳಿತ್ತು. ಪರಿಶೀಲನೆಗಾಗಿ ವಿನಯ್ ಇತರರು ಸ್ಥಳಕ್ಕೆ ತೆರಳಿದಾಗ ಏಕಾಏಕಿ ಎದ್ದ ಆನೆ ಎದ್ದು ನಿಂತಿದ್ದರಿಂದ ಗಾಬರಿಗೊಂಡ ಓಡುವಾಗ ಎಡವಿ ಬಿದ್ದ ಡಾಣ ವಿನಯ್ ಮೇಲೆ ದಾಳಿ ನಡೆಸಿದ ಆನೆ ಸೊಂಟದ ಮೇಲೆ ಕಾಲಿಟ್ಟು ತುಳಿಯಲು ಯತ್ನಿಸಿದೆ. ಕೂಡಲೇ ಅರಣ್ಯ ಸಿಬ್ಬಂದಿ ಏರ್‌ಗನ್‌ನಿಂದ ಫೈರ್ ಮಾಡಿದ್ದಾರೆ. ಗಾಬರಿಗೊಂಡ ಆನೆ ಓಡಿ ಹೋಗಿದೆ. ಅದೃಷ್ಟವಶಾತ್ ಡಾಣ ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next