Advertisement

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

06:56 PM Sep 28, 2020 | mahesh |

ಹೊಸದಿಲ್ಲಿ: ಆನೆಗಳು ನೀರಿಗಿಳಿದರೆ ಸ್ನಾನ ಮಾಡುವುದಕ್ಕಿಂತ, ನೀರಲ್ಲಿ ಚೆಲ್ಲಾಟ ಆಡುವುದೇ ಹೆಚ್ಚು. ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜನಿಸಿದ ಆನೆ ಮರಿ ಶಿವಾನಿ, ಅದರ ನಾಮಕರಣದ ದಿನ ನೀರಲ್ಲಿ ಚೇಲ್ಲಾಟವಾಡುತ್ತಿದ್ದ ವೀಡಿಯೋ ಎಲ್ಲೆಡೆ ಶೇರ್‌ ಆಗಿತ್ತು. ಅದರ ತುಂಟಾಟಕ್ಕೆ ಮನಸೋಲದವರೇ ಇರಲಿಲ್ಲ. ಎಲ್ಲರ ವಾಟ್ಸಪ್‌ ಸ್ಟೇಟಸ್‌ನಲ್ಲಿ ಅದರದ್ದೇ ಹವಾ. ಈಗ ಅಂತಹದ್ದೆ ರೀತಿಯಲ್ಲಿ ಆನೆ ಮರಿಯೊಂದು ನೀರು ತುಂಬಿದ ಟಬ್‌ನಲ್ಲಿ ಆಟವಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವೀಕ್ಷಕರ ಮನಸೋರೆಗೊಂಡಿದೆ. ಯಾವುದೇ ಪ್ರಾಣಿಯಾದರೂ ಅದು ಮುರಿಯಾಗಿರುವಾಗ ಏನು ಮಾಡಿದರೂ ತುಂಬ ಮುದ್ದಾಗೇ ಕಾಣುತ್ತದೆ.

Advertisement

ಸಿಮೋನ್‌ ಬಿಆರ್‌ಎಫ್ಸಿ ಹಾಪ್ಕಿನ್ಸ್‌ ಎಂಬವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, “ಬಾತ್‌ ಟೈಮ್‌’ ಎಂಬ ಅಡಿಬರಹ ನೀಡಿದ್ದಾರೆ. ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಜನ ಇದನ್ನು ವೀಕ್ಷಿಸಿ, ಕಮೆಂಟ್‌ ಮಾಡಿದ್ದಾರೆ. ಆನೆ ಮತ್ತು ಅದರ ಮರಿಯನ್ನು ಶುಚಿಗೊಳಿಸಲು ಮಾವುತ ಆನೆಗೆ ಪೈಪ್‌ನಿಂದ ನೀರು ಬಿಡುತ್ತಾನೆ. ಇದಾವುದುಕ್ಕೂ ತೃಪ್ತವಾಗದ ಆನೆಯ ಮರಿ ಸಾನದ ಬದಲಾಗಿ, ಅಲ್ಲಿಯೇ ಪಕ್ಕದಲ್ಲಿ ಇರಿಸಲಾಗಿದ್ದ ನೀರು ತುಂಬಿದ ತಬ್‌ನತ್ತ ತರೆಳಿ ಆದರಲ್ಲಿ ಚೆಲ್ಲಾಟ ನಡೆಸಿದೆ. ಬಾತ್‌ ಟಬ್‌ನಲ್ಲಿ ಆನೆ ಮರಿಯ ವಿನೋದ, ತುಂಟಾಟದ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next