Advertisement
ಸುಮಾರು ೬೭ವರ್ಷದ ಬಲರಾಮನಿಗೆ ಕಳೆದ ಕಳೆದ ಹತ್ತು ದಿನಗಳಿಂದ ಬಾಯಿಯಲ್ಲಿ ಹುಣ್ಣಾಗಿ ನಿತ್ರಾಣಗೊಂಡಿದ್ದ, ಬಲರಾಮನಿಗೆ ಟಿ.ಬಿ.(ಕ್ಷಯ) ಇರಬಹುದೆಂದು ವೈದ್ಯರು ಶಂಕಿಸಲಾಗಿದ್ದು, ವೈದ್ಯಕೀಯ ವರಧಿ ಬಂದ ನಂತರವಷ್ಟೆ ಕಾಯಿಲೆ ಕುರಿತು ನಿಖರವಾಗಿ ತಿಳಿಯಲಿದೆ.
ಆಹಾರ ಸೇವಿಸಲು, ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿದ್ದರಿಂದ ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ. ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ರತ್ನಾಕರ್, ಡಿಆರ್‌ಎಫ್‌ಓ ಸಿದ್ದರಾಜು ನೇತ್ರತ್ವದ ತಂಡ ಹಾಗೂ ಬಲರಾಮನ ಮಾವುತ ತಿಮ್ಮ, ಕವಾಡಿ ಮಂಜನಾಥ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಇದ್ದು, ಅಸ್ವಸ್ಥ ಬಲರಾಮನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಡೋಸ್ಕಪಿ ವರದಿ ಬರಬೇಕು:
ತೀವ್ರ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರದಂದು ಪಶು ವೈದ್ಯ ಡಾ,ಚೆಟ್ಟಿಯಪ್ಪ, ಡಾ.ಮದನ್, ಡಾ.ರಮೇಶ್ ತಂಡ ಪರಿಶೀಲಿಸಿದೆ. ಅಲ್ಲದೇ ಮೈಸೂರು ಅರಮನೆ ರಾಜ ಕುಟುಂಬದ ಶೃತಿ ಕೀರ್ತಿದೇವಿಯವರ ನೆರವಿನಿಂದ ಪೋರ್ಟಬಲ್ ಯಂತ್ರದ ಮೂಲಕ ಎಂಡೋಸ್ಕಪಿ ಸಹ ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ
Related Articles
ಬಲರಾಮ ಕಳೆದ ಹತ್ತು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿದ್ದು, ಪಶು ವೈದ್ಯರು ತೀವ್ರ ನಿಗಾವಹಿಸಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ, ಆನೆ ಚೇತರಿಸಿಕೊಳ್ಳುತ್ತಿದೆ. ಗಟ್ಟಿ ಆಹಾರ ಸೇವಿಸಲಾಗದ ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರ ನೀಡಲಾಗುತ್ತಿದೆ. ಎಂಡೋಸ್ಕಪಿ ಸಹ ಮಾಡಲಾಗಿದ್ದು, ಲ್ಯಾಬ್‌ನಿಂದ ರಿಪೋರ್ಟ್ ಬಂದ ನಂತರ ಕಾಯಿಲೆ ತಿಳಿದು ಸೂಕ್ತ ಚಿಕಿತ್ಸೆ ನೀಡಲಾಗುವುದೆಂದು ಉದಯವಾಣಿಗೆ ನಾಗರಹೊಳೆ ಉದ್ಯಾನವನದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
Advertisement