Advertisement

ಆನೆ ದಾಳಿಗೆ ತೆಂಗು, ಮಾವು ಹಾನಿ

07:25 AM Mar 06, 2019 | Team Udayavani |

ರಾಮನಗರ: ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಮೂರು ಆನೆಗಳ ಗುಂಪೊಂದು ದಾಂಧಲೆ ನಡೆಸಿದ ಪರಿಣಾಮ ತೆಂಗಿ ತೋಟ, ಮಾವಿನ ತೋಟಗಳಿಗೆ ಹಾನಿಯಾದ ಪ್ರಸಂಗ ನಡೆದಿದೆ.

Advertisement

ಹೊಸದೊಡ್ಡಿ ಗ್ರಾಮದ ಚಿಕ್ಕೇಗೌಡ, ಗೋವಿಂದೇಗೌಡ, ನರಸಿಂಹಯ್ಯ ಎಂಬುವರ ತೆಂಗಿನ ಮರಗಳು ಚಂದ್ರು, ಅಪ್ಪಾಜಿಗೌಡ, ನಾಗರಾಜು ಎಂಬುವರ ಮಾವಿನ ಮರಗಳಿಗೆ ಹಾನಿಯಾಗಿದೆ. ಕೊಳವೆಬಾವಿಯ ಪೈಪುಗಳನ್ನು ಆನೆಗಳು ಕಿತ್ತು ದಾಂಧಲೆ ನಡೆಸಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ತಾಲೂಕು ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ರೈತರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆಹಾಕಿದರು. ಆನೆಗಳನ್ನು ತಮ್ಮ ಸ್ವಸ್ಥಾನ ಸೇರಿಸುವ ಭರವಸೆ ನೀಡಿದರು.

ಆನೆಗಳು ತೆಂಗಿನಕಲ್ಲು ಆರಣ್ಯ ಪ್ರದೇಶದಿಂದ ಗ್ರಾಮಕ್ಕೆ ಆಗಮಿಸಿವೆ. ಸದ್ಯ ಆನೆಗಳ ಹಿಂಡು ಸದ್ಯ ತೆಂಗಿನ ಕಲ್ಲು ಅರಣ್ಯದಲ್ಲೇ ಇದ್ದು, ಅಲ್ಲಿಂದ ಅವುಗಳನ್ನು ತಮ್ಮ ಸ್ವ ಸ್ವಾನಕ್ಕೆ ಹಿಂದಿರುಗಿಸಲಾಗುವ ಬಗ್ಗೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

ಆನೆಗಳು ತೆಂಗಿನ ತೋಟಕ್ಕೆ ಪದೇ ಪದೇ ಬರುತ್ತಿವೆ, ಅನೇಕ ಬಾರಿ ಇಂತಹ ಹಾನಿ ಉಂಟಾಗಿದೆ. ಕಷ್ಟಪಟ್ಟು ಬೆಳೆಸಿದ ತೆಂಗು, ಮಾವು ಬೆಳೆ ಹೀಗೆ ನಾಶವಾಗುತ್ತಿರುವುದರಿಂದ ತಮಗೆ ನಿರಂತರ ನಷ್ಟವುಂಟಾಗುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಬಳಿ ಅಲವತ್ತುಕೊಂಡರು. ಆನೆಗಳು ಗ್ರಾಮಕ್ಕೆ ಬರದಿರುವಂತೆ ರಕ್ಷಣ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next