ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ರಾಜೇಶ್ (50) ಸಾವನ್ನಪ್ಪಿದ ದು ರ್ದೈವಿ.
ರಾಜೇಶ್ ಬುಧವಾರ ರಾತ್ರಿ ರಾಸುಗಳಿಗೆ ಮೇವು ಹಾಕಲು ಹುಲ್ಲು ತರಲು ಮನೆಯಿಂದ ಹೊರಬಂದು ಹುಲ್ಲಿನ ಮೆದೆಯತ್ತ ತೆರಳಿದ ವೇಳೆ ರಾಗಿ ಮೆದೆಬಳಿಯಲ್ಲಿ ಹುಲ್ಲು ಮೇಯುತ್ತಿದ್ದ ಸಲಗವನ್ನು ಕತ್ತಲಿನಲ್ಲಿ ಕಾಣಿಸದೆ ಹುಲ್ಲು ತಲೆ ಮೇಲೆ ಹೊತ್ತು ತರುತ್ತಿದ್ದ ರಾಜೇಶನನ್ನು ಕಂಡು ಒಮ್ಮೆಲೆ ಘೀಳಿಟ್ಟಿದೆ.
ಹೆದರಿದ ರಾಜೇಶ ಅವರು ಹುಲ್ಲು ಬಿಸಾಡಿ ಹತ್ತಿರದ ಮರ ಹತ್ತಿ ಜೀವ ವುಳಿಸಿಕೊಳ್ಳಲು ಓಡಿ ಹೋಗಿ ಮರ ಹತ್ತುವ ವೇಳೆ ಸೊಂಡಿನಲಿನಿಂದ ಎಳೆದು ಬಿಸಾಡಿದ ರಭಸಕ್ಕೆ ತೀವ್ರಪೆಟ್ಟು ಬಿದ್ದು ರಾಜೇಶ್ ಸಾವನ್ನಪ್ಪಿದ್ದಾರೆ.
ರಾಜೇಶನ ಚಿಕ್ಕಮ್ಮನ ತಿಥಿ ಕಾರ್ಯ ಗುರುವಾರ ನಡೆಯಬೇಕಿತ್ತು.ಮನೆ ಮಂದಿಯೆಲ್ಲಾ ತಯಾರಿಯಲ್ಲಿದ್ದರು. ಹೀಗಾಗಿ ರಾತ್ರಿ 9 ರ ವೇಳೆಗೆ ತಡವಾಗಿ ರಾಸುಗಳಿಗೆ ಹುಲ್ಲು ತರಲು ಹೋದ ವೇಳೆ ಘಟನೆ ನಡೆದಿದ್ದು. ಚಿಕ್ಕಮ್ಮನ ತಿಥಿಯಂದೇ ರಾಜೇಶ್ ಸಾವನ್ನಪ್ಪಿರುವುದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪೊಲೀಸರು, ಸ್ಥಳಕ್ಕೆ ದೌಡಾಯಿಸಿದ್ದಾರೆ.