Advertisement

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

02:34 PM Sep 27, 2024 | Team Udayavani |

ವಿಜಯವಾಡ: ಆಂಧ್ರಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಸಾವು ನೋವು ಸಂಭವಿಸುತ್ತಿದೆ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಕರ್ನಾಟಕದ ದಸರಾ ಆನೆಗಳನ್ನು ಹೊರತು ಪಡಿಸಿ 4 ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Advertisement

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರದ ಅರಣ್ಯ ಇಲಾಖೆ ಸಿಬ್ಬಂದಿಗೆ ಮತ್ತು ಮಾವುತರಿಗೆ ಆನೆ ಸೆರೆ ಹಿಡಿಯುವ, ಪಳಗಿಸುವ ಮತ್ತು ಅದನ್ನು ಆನೆ ಕಾರ್ಯಾಚರಣೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ದಸರಾ ಆನೆ ಕೊಡುವುದಿಲ್ಲ
ರಾಜ್ಯದ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಆನೆಗಳ ಬಗ್ಗೆ ಜನರಲ್ಲಿ ಭಾವನಾತ್ಮಕ ನಂಟಿರುತ್ತದೆ. ಹೀಗಾಗಿ ದಸರಾದಲ್ಲಿ ಭಾಗಿಯಾದ ಯಾವುದೇ ಆನೆಯನ್ನಾಗಲೀ, ಮುಂಬರುವ ದಸರಾ ಮಹೋತ್ಸವಕ್ಕಾಗಿ ಗುರುತಿಸಲಾದ ಯಾವುದೇ ಕುಮ್ಕಿ ಆನೆಯನ್ನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next