Advertisement

ಕಾಡಾನೆ ಹಿಡಿಯಲು ಕಾರ್ಯಾಚರಣೆ ಶುರು

09:25 PM Feb 04, 2021 | Team Udayavani |

ಶಿವಮೊಗ್ಗ: ಭದ್ರಾ ಅಭಯಾರಣ್ಯದಿಂದ ಬಂದು ಉಂಬ್ಳೆಬೈಲು ಭಾಗದಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಬುಧವಾರದಿಂದ ಕಾರ್ಯಾಚರಣೆ ಆರಂಭವಾಗಿದೆ. ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಬಾಲಣ್ಣ, ಸೋಮಣ್ಣ, ಸಾಗರ್‌ ಆನೆಗಳ ಜತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಒಂದು ಕಾಲದಲ್ಲಿ ಕಾಡಾನೆಗಳಾಗಿದ್ದು, ಈಗ ಪಳಗಿರುವ ಆನೆಗಳು ಈ ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಹಾಸನದ ಕಾಡಿನಲ್ಲಿ ಸೋಮಣ್ಣ, ಬಾಲಣ್ಣ, ನಾಗಣ್ಣ ಹೆಸರಿನ ಆನೆಗಳನ್ನು ಸೆರೆಹಿಡಿಯಲಾಗಿತ್ತು. ಅವುಗಳನ್ನು ಅಲ್ಲಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗಿತ್ತು. ಅನುಭವಿ ಸಿಬ್ಬಂದಿ ಕೈಯಲ್ಲಿ ಪಳಗಿರುವ ಈ ಆನೆಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.

ಇದನ್ನೂ ಓದಿ :ನಾನು ಈಗಲೂ ರೈತರ ಪರ; ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ: ಗ್ರೇಟಾ ಥನ್ಬರ್ಗ್

ಜತೆಗೆ ಆಕರ್ಷಕ ಮೈಕಟ್ಟಿನ ಸಾಗರ್‌ ಆನೆಯೂ ಭಾಗಿಯಾಗಿದೆ. ಐದಾರು ವರ್ಷಗಳಿಂದ ಒಂಟಿ ಸಲಗ ಉಂಬ್ಳೆಬೈಲು, ಸಾರಿಗೆರೆ, ಕೈದೊಟ್ಲು, ಹುರುಳಿಹಳ್ಳಿ, ತೋಟದಕೆರೆ, ಯರಗನಾಳ್‌, ಹಾಲ್‌ಲಕ್ಕವಳ್ಳಿ ಮುಂತಾದ ಕಡೆ ಓಡಾಡಿಕೊಂಡಿತ್ತು. ಈಗ ಅದರೊಂದಿಗೆ ಇನ್ನೂ ಎರಡೂ¾ರು ಆನೆಗಳು ಸೇರಿಕೊಂಡು ನಿರಂತರವಾಗಿ ಬೆಳೆ ಹಾಳು ಮಾಡುತ್ತಿವೆ. ಇವುಗಳ ಉಪಟಳಕ್ಕೆ ಹಗಲುರಾತ್ರಿ ಎನ್ನದೆ ಬೆಳೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಸರಕಾರ ಆನೆಗಳ ಹಿಡಿಯಲು ಅವಕಾಶ ಕೊಟ್ಟಿದ್ದು, ಕಾರ್ಯಾಚರಣೆ ಯಶಸ್ವಿಯಾಗುವುದೇ ಕಾದು ನೋಡಬೇಕಿದೆ. ವನ್ಯಜೀವಿ ವೈದ್ಯ ವಿನಯ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದ್ದು,  ಉಂಬ್ಳೆಬೈಲು ವಲಯ ರೇಂಜರ್‌ ಮಂಜುನಾಥ್‌, ಉಪ ವಲಯ ಅ ಧಿಕಾರಿ ಕರೀಂಗಿಡ್‌ ಸ್ವಾಮಿ ಬಿಡಾರದ ಅನುಭವಿ ಸಿಬ್ಬಂದಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next