Advertisement

ಆನೆ ದಾಳಿ: 3 ವರ್ಷಗಳಲ್ಲಿ 1,581 ಮಂದಿ ಸಾವು

12:24 AM Mar 21, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆನೆ ದಾಳಿ ಯಿಂದ 1,581 ಮಂದಿ ಸಾವನಪ್ಪಿದ್ದಾರೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಸಚಿವಾಲಯ ಮಾಹಿತಿ ನೀಡಿದೆ.

Advertisement

ಸಚಿವಾಲಯವು ನೀಡಿದ ಅಂಕಿಅಂಶದ ಪ್ರಕಾರ 2019-20ರಲ್ಲಿ 585, 2020- 21ರಲ್ಲಿ 461 ಹಾಗೂ 2021-22ರಲ್ಲಿ 535 ಮಂದಿ ದೇಶದಲ್ಲಿ ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ.

ಒಡಿಶಾದಲ್ಲಿ ಅತೀ ಹೆಚ್ಚು
ಕಳೆದ ಮೂರು ವರ್ಷಗಳ ರಾಜ್ಯವಾರು ಅಂಕಿಅಂಶ ಗಮನಿಸಿದರೆ ಒಡಿಶಾ ರಾಜ್ಯ ಮೊದಲ ಸ್ಥಾನದಲ್ಲಿದ್ದು 322 ಮಂದಿ ಸಾವನ್ನಪ್ಪಿದ್ದಾರೆ. ಝಾರ್ಖಂಡ್‌ನ‌ಲ್ಲಿ 291, ಪಶ್ಚಿಮ ಬಂಗಾಲದಲ್ಲಿ 240, ಅಸ್ಸಾಂನಲ್ಲಿ 229 ಹಾಗೂ ಛತ್ತೀಸ್‌ಗಢದಲ್ಲಿ 183 ಮಂದಿ ಕಳೆದ ಮೂರು ವರ್ಷಗಳಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ತಮಿಳು ನಾಡಿನಲ್ಲಿ ಅತೀ ಹೆಚ್ಚು ಸಾವಾಗಿದ್ದು, 152 ಮಂದಿ ಆನೆಯ ದಾಳಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಅತೀ ಹೆಚ್ಚು ಆನೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ 69 ಜನ ಆನೆಯ ದಾಳಿಗೆ ತುತ್ತಾಗಿದ್ದಾರೆ. ಇನ್ನು ಕೇರಳದಲ್ಲಿ 57 ಹಾಗೂ ಆಂಧ್ರ ಪ್ರದೇಶದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ.

Advertisement

ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಂಸದ ಸು. ತಿರುನಾವುಕ್ಕರಸರ್‌ ಕೇಳಿದ ಪ್ರಶ್ನೆಗೆ ಸಚಿವಾಲಯದ ಸಹಾಯಕ ಸಚಿವರಾದ ಅಶ್ವಿ‌ನ್‌ ಕುಮಾರ್‌ ಚೌಬೆ ಸೋಮವಾರ ಉತ್ತರ ನೀಡಿದ್ದಾರೆ.

ದೇಶದಲ್ಲಿ 2019-22ರ ವರೆಗೆ 266 ಆನೆಗಳು ಸಾವನ್ನಪ್ಪಿದ್ದು, ಇದರಲ್ಲಿ 198 ವಿದ್ಯುತ್‌ ಅವಘಡದಿಂದ, 41 ರೈಲು ಅಪಘಾತ ಹಾಗೂ 27 ಬೇಟೆ ಹಾಗೂ ವಿಷ ಸೇವನೆಯಿಂದ ಸಾವಿಗೀಡಾಗಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇ ಶಗಳಲ್ಲಿ ಆನೆ-ಮಾನವ ಸಂಘರ್ಷ ದಂತಹ ಅವಘಡಗಳನ್ನು ಕಡಿಮೆ ಮಾಡುವಲ್ಲಿ ಅರಣ್ಯ ಇಲಾಖೆ ಸ್ಥಳೀಯರಿಗೆ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಜತೆಗೆ ಆನೆಗಳ ಚಲನೆಯ ಬಗ್ಗೆ ಗಮನಹರಿಸಿ ಸ್ಥಳೀಯರಿಗೆ ಸೂಚನೆ ನೀಡಿ ಅವಘಡಗಳನ್ನು ತಪ್ಪಿಸಲು ಕಾರ್ಯಾ ಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next