Advertisement

ಹಳಿಯಾಳದಲ್ಲಿ  ಓಡಾಡಿದ ಒಂಟಿ ಸಲಗ

04:31 PM Jun 09, 2018 | Team Udayavani |

ಹಳಿಯಾಳ: ಕಾಡಾನೆಯೊಂದು ಶುಕ್ರವಾರ ಬೆಳಗಿನಜಾವ ಹಳಿಯಾಳ ಪಟ್ಟಣಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿತು. ಹಾಗೆಯೇ ಭಯದ ವಾತಾವರಣ ಕೂಡ ಸೃಷ್ಟಿಯಾಗಿತ್ತು. 

Advertisement

ಧಾರವಾಡ ರಸ್ತೆಯಿಂದ ಹಳಿಯಾಳ ಪಟ್ಟಣ ಪ್ರವೇಶ ಮಾಡಿರುವ ಒಂಟಿ ಸಲಗ ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಎದುರಿನಿಂದಲೇ ರಾಜಾರೋಷವಾಗಿ ಸುತ್ತಾಡುತ್ತಾ ನಾನು ನಡೆದದ್ದೆ  ದಾರಿ ಎಂದು ಸಾಗುತ್ತಾ ಶಿವಾಜಿ ವೃತ್ತ. ಪೋಲಿಸ್‌ ಠಾಣೆ ಎದುರುಗಡೆಯಿಂದ ದುರ್ಗಾದೇವಿ ದೇವಸ್ಥಾನ ಗೇಟ್‌ ಪ್ರವೇಶಿಸಿ ಅಲ್ಲಿಂದ. ಹೊರ ಬಂದು ದುರ್ಗಾನಗರದಲ್ಲಿಯೇ ಹೆಚ್ಚು ಸಮಯ ಸುತ್ತಾಡಿ ಅಲ್ಲಿಂದ ಮುಂದೆ ಆಲೊಳ್ಳಿ ರಸ್ತೆ ಮೂಲಕ. ಸಾಗಿ ದೇಶಪಾಂಡೆ ಅಶ್ರಯ ನಗರದ ಪಕ್ಕದಿಂದ ಹಳಿಯಾಳದ ಹುಲ್ಲಟ್ಟಿ ಭಾಗದಲ್ಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಬಳಿಯ ಪರಿಸರದಲ್ಲಿ ಹೊಗಿ ನಿಂತು ಮುಂದೆ ಸಾಗಿತು. ಆದರೆ ಜನರ ಅದೃಷ್ಟವೊ ಎಂಬಂತೆ ಆನೆಗೆ ಮದವೇರದೆ ಇರುವುದು. ಯಾವುದೇ ಅವಘಡ ಸಂಭವಿಸಿಲ್ಲ ದಾರಿ ತಪ್ಪಿ ಬಂದ. ಆನೆ ಸಕ್ಕರೆ ಕಾರ್ಖಾನೆ ಬಳಿಯಿಂದ ಹಾಗೆ ಕೆಸರೊಳ್ಳಿ ಭಾಗದಲ್ಲೂ ಹೆದ್ದಾರಿ ಪಕ್ಕದಲ್ಲಿ ಸಮಯ ಕಳೆದಿದೆ.

ಬೆಳಗ್ಗೆ 6 ಗಂಟೆಗೆ ಹಳಿಯಾಳ ಪ್ರವೇಶ ಮಾಡಿದೆ ಎಂದು ಹೇಳಿರುವ ಈ ಆನೆ ಸುಮಾರು 30 ನಿಮಿಷಗಳ ಕಾಲ ದುರ್ಗಾನಗರದಲ್ಲಿಯೇ ಕಳೆದಿದೆ.

ಬಳಿಕ ಅರಣ್ಯ ಇಲಾಖೆಯವರು ಆನೆ ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಶಬ್ದ ಮಾಡಿ ಹೆದರಿಸಿ ಆನೆ ಮತ್ತೆ ಪಟ್ಟಣ ಪ್ರವೇಶ ಮಾಡದಂತೆ ಹೊರಗಿನ ದಾರಿ ಹಿಡಿಯುವಂತೆ ಮಾಡಿದ್ದರಿಂದ ಅದು ಅಲೊಳ್ಳಿ ರಸ್ತೆ ಮಾರ್ಗವಾಗಿ ಕೃಷಿ ಜಮೀನಿನ ಸಾಗಿ ಕೆಸರೊಳ್ಳಿ ಬಳಿ ಬಂದು ಇಲ್ಲಿ ಸುಮಾರು 1 ಗಂಟೆ ಕಾಲ ಸುತ್ತಾಡಿದ ಆನೆಯನ್ನು ಅರಣ್ಯ ಇಲಾಖೆಯವರು ದಾಂಡೇಲಿಯ ಆಲೂರು ಭಾಗದ ಅರಣ್ಯ ಪ್ರವೇಶಿಸುವಂತೆ ಸಿಬ್ಬಂದಿಗಳಿಂದ ಯಶಸ್ವಿ ಸುರಕ್ಷಿತ ಕಾರ್ಯಾಚರಣೆ ನಡೆಸಲಾಯಿತು. ಯಾರಿಗೂ ತೊಂದರೆ ನೀಡದೆ ಪಟ್ಟಣ ಹಾಗೂ ಕೆಲವು ಗ್ರಾಮಾಂತರ ಭಾಗ ಸುತ್ತಾಡಿ ಕೊನೆಗೂ ಕಾಡು ಸೇರಿದೆ.

ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್‌ ಸಂತೋಷ ಕೆಂಚಪ್ಪನವರ, ಆರ್‌ಎಫ್‌ಒ ಪ್ರಸನ್ನ ಸುಬೇದಾರ, ಪೊಲೀಸ್‌ ಇಲಾಖೆಯ ಸಿಪಿಐ ಸುಂದ್ರೇಶ ಹೊಳೆನ್ನವರ, ಪಿಎಸ್‌ಐ ಆನಂದಮೂರ್ತಿ ಇತರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ನೂರಾರು ಜನತೆ ಜಮಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next