ಮಾನವನ ದುಸ್ಸಾಹದಿಂದ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಆಹಾರ ಸಿಗದಂತಾಗಿದೆ ಇದರಿಂದ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ನಾಡಿಗೆ ಬರುವ ಸ್ಥಿತಿಯನ್ನು ಮಾನವನೇ ನಿರ್ಮಾಣ ಮಾಡಿ ಇದೀಗ ಕಾಡು ಪ್ರಾಣಿಗಳಿಂದ ತೊಂದರೆಯಾಗುತ್ತಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡುವ ಸ್ಥಿತಿಗೆ ಬಂದಿದ್ದೇವೆ.
ಆಹಾರ ಅರಸಿಕೊಂಡು ಕಾಡು ಪ್ರಾಣಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತವೆ ಅದೇ ರೀತಿ ಕೇರಳ-ಕರ್ನಾಟಕ ಗಡಿಭಾಗದ ಗುಂಡ್ಲುಪೇಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಇದ್ದಕಿದ್ದಂತೆ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.
ಕಾಡಾನೆಯನ್ನು ಕಂಡ ಗ್ರಾಮದ ಜನ ಭಯಭೀತರಾಗಿದ್ದಾರೆ ಅಲ್ಲದೆ ಆನೆಯನ್ನು ಕಾಡಿಗೆ ಓಡಿಸುವ ಯತ್ನವನ್ನೂ ಮಾಡಿದ್ದಾರೆ ಆದರೆ ಜನರ ಬೆದರಿಕೆಗೆ ಜಗ್ಗದ ಆನೆ ನೇರವಾಗಿ ಆಹಾರ ನಿಗಮದ ಗೋದಾಮಿನ ಬಳಿ ಬಂದಿದೆ ಇಲ್ಲಿ ಗೋದಾಮಿಗೆ ಶಟರ್ ಹಾಕಿರುವುದನ್ನು ಕಂಡ ಆನೆ ಸೊಂಡಿಲಿನಿಂದ ಶಟರ್ ಮುರಿದು ಒಳಗಿನಿಂದ ಅಕ್ಕಿಯ ಚೀಲವನ್ನು ಹೊರಗೆ ಎಳೆದು ತಂದು ಅದರಲ್ಲಿದ್ದ ಅಕ್ಕಿಯನ್ನು ತಿನ್ನಲು ಶುರು ಮಾಡಿದೆ. ಗ್ರಾಮಸ್ಥರು ಆನೆಯನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.