ಹೊಸದಿಲ್ಲಿ: ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಸರಕುಗಳನ್ನು ಭಾರತ ಚೀನದಿಂದ ಗರಿಷ್ಠ ಪ್ರಮಾಣದಲ್ಲಿ ಆಮದು ಮಾಡುತ್ತಿರುವಂತೆಯೇ ಮುಂದಿನ ದಿನಗಳಲ್ಲಿ ಚೀನಕ್ಕೆ ಸಡ್ಡು ಹೊಡೆಯಲು ಭಾರತ ಉದ್ದೇಶಿಸಿದೆ.
ಇದಕ್ಕೆ ಎಲೆಕ್ಟ್ರಾನಿಕ್ಸ್ ಸರಕಗಳು, ಅದರಲ್ಲೂ ಮೊಬೈಲ್ ಉತ್ಪಾದನೆಯನ್ನು ಗರಿಷ್ಠ ಪ್ರಮಾಣದಲ್ಲಿ ಭಾರತಲ್ಲೇ ಮಾಡಲು ಮುಂದಾಗಿದೆ.
ಇದಕ್ಕಾಗಿ ಕೇಂದ್ರ ಸರಕಾರ ಉತ್ಪಾದನೆ ಕುರಿತ ಯೋಜನೆಯೊಂದನ್ನು ಹೊರತಂದಿದ್ದು, 50 ಸಾವಿರ ಕೋಟಿ ರೂ.ಗಳ ನೆರವು ನೀಡಲು ಯೋಜಿಸಿದೆ. ಇದು ತೈವಾನ್‌ನ ಮೊಬೈಲ್ ಕಂಪೆನಿಯಾದ ಫಾಕ್ಸ್‌ಕಾನ್ (ಆ್ಯಪಲ್ ಫೋನ್ ತಯಾರಿಕೆ ಮಾಡುವ ಕಂಪೆನಿ) ದ.ಕೊರಿಯಾದದ ಸ್ಯಾಮ್ಸಂಗ್, ಭಾರತದ ದೇಸಿ ಬ್ರ್ಯಾಂಡ್‌ಗಳಾದ ಲಾವಾ, ಕಾರ್ಬನ್, ಮೈಕ್ರೋಮ್ಯಾಕ್ಸ್, ಇಂಟೆಕ್ಸ್‌ಗೆ ಪ್ರಯೋಜನಕಾರಿಯಾಗಿರಲಿದೆ.
ಐದು ಅಂ.ರಾ. ಮೊಬೈಲ್ ಕಂಪೆನಿಗಳನ್ನು ಮತ್ತು ಐದು ಸ್ಥಳೀಯ ಕಂಪೆನಿಗಳನ್ನು ಉತ್ತೇಜಿಸಲು ಯೋಜಿಸಲಾಗಿದೆ ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸರಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ, 2019-20ರಲ್ಲಿ 10 ಸಾವಿರ ಕೋಟಿ ರೂ. ಒಟ್ಟು ಆದಾಯ ಹೊಂದಿರುವ ಮೊಬೈಲ್ ಕಂಪೆನಿಗಳು ಮತ್ತು 15 ಸಾವಿರ ರೂ. ಮೇಲ್ಪಟ್ಟ ಹ್ಯಾಂಡ್‌ಸೆಟ್‌ಗಳನ್ನು ಮಾರಾಮಾಡುವ ಕಂಪೆನಿಗಳಿಗೆ ಮತ್ತು 2019-20ರ ಅವಧಿಯಲ್ಲಿ 100 ಕೋಟಿ ರೂ. ಮಿಕ್ಕಿ ಆದಾಯ ಹೊಂದಿದ ದೇಶೀಯ ಕಂಪೆನಿಗಳಿಗೆ ನೆರವು ನೀಡಲಾಗುತ್ತದೆ.