ನವದೆಹಲಿ: ವಿದ್ಯುನ್ಮಾನ ಮತ ಯಂತ್ರ ಮತ್ತು ವಿವಿಪ್ಯಾಟ್ ಪರಿಶೀಲನೆ ವೇಳೆ ಎಷ್ಟರಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದೆ ಎಂಬ ವಿವರ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಆದೇಶ ನೀಡಿದೆ.
ಪ್ರಮಾಣೀಕರಣ, ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣಪತ್ರ ನಿರ್ದೇಶನಾಲಯ (ಎಸ್‌ಟಿಕ್ಯೂಸಿ)ಕ್ಕೆ ಈ ಸೂಚನೆ ಸಿಕ್ಕಿದೆ. ವೆಂಕಟೇಶ್ ನಾಯಕ್ ಎಂಬವರು ಇವಿಎಂಗಳ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
2019ರ ಚುನಾವಣೆಗೆ ಸಂಬಂಧಿಸಿದಂತೆ ವಿವಿಪ್ಯಾಟ್‌ಗಳು ಮತ್ತು ಇವಿಎಂಗಳ ಫರ್ಮ್ವೇರ್‌ನ ಪರೀಕ್ಷೆ ವೇಳೆ ಎಷ್ಟರಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿದೆ ಎಂದು ಮಾಹಿತಿ ಕೋರಿದ್ದರು. ಎಸ್‌ಟಿಕ್ಯೂಸಿ ಎನ್ನುವುದು ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಯಾಗಿದೆ.
ಇದನ್ನೂ ಓದಿ:ಬಾರ್ಸಿಲೋನಾಗೆ ಮೆಸ್ಸಿ ಭಾವುಕ ವಿದಾಯ
ನಾಯಕ್ ಕೋರಿಕೆಯನ್ನು ಸಂಸ್ಥೆ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.