ಹೊಸದಿಲ್ಲಿ: ಆದಾಯ ರಿಟರ್ನ್ಸ್ ಸಲ್ಲಿಕೆ ಯನ್ನು ತ್ವರಿತವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಜಾರಿಗೊಳಿಸಲು ಉದ್ದೇಶಿಸಿದ ಇ-ಎಸೆಸ್‌ಮೆಂಟ್ ಯೋಜನೆಗೆ ಕೇಂದ್ರ ಸರಕಾರ ಪ್ರಕಟನೆ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ 15 ದಿನಗಳ ಒಳಗಾಗಿ ಅದನ್ನು ಸ್ವಯಂಚಾಲಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಅ. 8ರಿಂದ ಜಾರಿಯಾಗಲಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಗುರುವಾರ ಗೆಝೆಟ್ ಪ್ರಕಟನೆ ಹೊರಡಿಸಿದೆ. ಬಜೆಟ್‌ನಲ್ಲಿ ಕೂಡ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾವಿ ಸಿದ್ದರು. ಹೊಸ ವ್ಯವಸ್ಥೆಯ ಪ್ರಕಾರ ರಾಷ್ಟ್ರೀಯ ಇ-ಎಸೆಸ್‌ಮೆಂಟ್ ಸೆಂಟರ್ ಅನ್ನು ಸ್ಥಾಪಿಸಲಾಗುತ್ತದೆ. ಈ ಸೆಂಟರ್‌ನಿಂದ ರಿಟರ್ನ್ಸ್ ಸಲ್ಲಿಕೆ ಮಾಡಿದ ಪ್ರಕ್ರಿಯೆಯಲ್ಲಿ ಲೋಪವಿದ್ದರೆ ನೋಟಿಸ್ ನೀಡಿ, ಅದನ್ನು ಸರಿಪಡಿಸುವಂತೆ ಸೂಚಿಸುತ್ತದೆ. ರೀಫಂಡ್ ಇದ್ದಲ್ಲಿ 15 ದಿನಗಳಲ್ಲಿ ನಿಗದಿತ ವ್ಯಕ್ತಿಯ ಖಾತೆಗೆ ಜಮೆಯಾಗುತ್ತದೆ.