Advertisement

Tumkur: ಶಾರ್ಟ್ ಸರ್ಕ್ಯೂಟ್ ಶಂಕೆ; 350ಕ್ಕೂ ಹೆಚ್ಚು ಪ್ರಾಣಿಗಳು ಸಜೀವದಹನ

02:35 PM Dec 12, 2023 | Team Udayavani |

ತುಮಕೂರು: 350 ಕ್ಕೂ ಹೆಚ್ಚು ಮೂಕ ಪ್ರಾಣಿಗಳು ಸಜೀವ ದಹನವಾದ ಘಟನೆ ಜಿಲ್ಲೆಯ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿಯಲ್ಲಿ ತಾಲೂಕು ಹಂದನಕೆರೆ ಬಳಿಯ ರಾಮಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ 150 ಕುರಿಗಳು, 200 ಕೋಳಿ, 6 ಹಸುಗಳ ಸಜೀವ ದಹನವಾಗಿದೆ.

ರೈತ ಚೇತನ್ ಕುಮಾರ್ ಎಂಬವರಿಗೆ ಸೇರಿದ ಕುರಿ, ಹಸು, ಕೋಳಿಗಳಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next