ಬೆಂಗಳೂರು: ಕಾಫಿ ಬೆಳೆಗಾರರಿಗೂ 10 ಎಚ್‌ಪಿಯವರೆಗೆ ವಿದ್ಯುತ್ ಸಬ್ಸಿಡಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಶೂನ್ಯ ವೇಳೆಯಲ್ಲಿ ಶಾಸಕರಾದ ಬಿಜೆಪಿಯ ಸಿ.ಟಿ. ರವಿ, ಎಂ.ಪಿ. ಕುಮಾರಸ್ವಾಮಿ, ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜೆಡಿಎಸ್‌ನ ಎಚ್.ಕೆ. ಕುಮಾರ ಸ್ವಾಮಿ, ಎ.ಟಿ. ರಾಮಸ್ವಾಮಿ ಸೇರಿ ಪಕ್ಷಾ ತೀತ ವಾಗಿ ಕಾಫಿ ಬೆಳೆಗಾರರಿಗೂ ವಿದ್ಯುತ್ ಸಬ್ಸಿಡಿ ನೀಡಬೇಕು ಎಂದು ಮನವಿ ಮಾಡಿದರು.
ಕಾಫಿ ಬೆಳೆಗಾರರು ಹಿಂದಿನಂತೆ ಸಾಹುಕಾರರಲ್ಲ, ಇಂದು ಸಾಲಗಾರರಾಗಿದ್ದಾರೆ ಎಂದು ರವಿ ಹೇಳಿ ದರು. ನಮಗೆ ನಿರಂತರ ವಾಗಿ ಬೇಕಿಲ್ಲ. ಆದರೆ ಮಳೆಗಾಲ ಅಲ್ಲದ ಸಮಯದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಬೋಪಯ್ಯ ತಿಳಿಸಿದರು. ನಮ್ಮ ಸಮಸ್ಯೆಗೂ ಸ್ಪಂದಿಸಿ ಎಂದು ಎಂ.ಪಿ. ಕುಮಾರಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ:ನಾವೂ ಹಿಂದೂಗಳೇ, ಭಗವದ್ಗೀತೆ ಬಗ್ಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ರಾಜ್ಯ ಸರಕಾರದ ಮೇಲೆ ವಿದ್ಯುತ್ ಸಬ್ಸಿಡಿ 14 ಸಾವಿರ ಕೋಟಿ ರೂ. ವರೆಗೆ ವಾರ್ಷಿಕ ಹೊರೆ ಬೀಳುತ್ತಿದೆ. ಆದರೂ ಕಾಫಿ ಬೆಳೆಗಾರರಿಗೂ ವಿದ್ಯುತ್ ಸಬ್ಸಿಡಿ ಕೊಡಲಾಗುವುದು. ಆದರೆ ದುರ್ಬಳಕೆ ತಡೆಗೆ ಕಾನೂನು ರೂಪಿಸಲು ಸಮ್ಮತಿಸಬೇಕು ಎಂದರು.
ಎಲ್ಲ ಶಾಸಕರೂ ಒಪ್ಪಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳಿಂದ ಇಂಧನ ಸಚಿವ ವಿ. ಸುನಿಲ್ ಕುಮಾರ್, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಭಾಗದ ಕಾಫಿ ಬೆಳೆಗಾರರ ಮಾಹಿತಿ ಪಡೆದರು.