Advertisement

ವಿದ್ಯುತ್‌ ಕಳವು ಪತ್ತೆಹಚ್ಚಿ 8 ಲಕ್ಷ ರೂ. ದಂಡ

01:28 PM Feb 01, 2018 | Team Udayavani |

ಹೊಸಕೋಟೆ:  ತಾಲೂಕಿನಾದ್ಯಂತ ಬುಧವಾರ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿ 32 ವಿದ್ಯುತ್‌ ಕಳವು ಪ್ರಕರಣಗಳನ್ನು ಪತ್ತೆಹೆಚ್ಚಿ 8 ಲಕ್ಷ ರೂ.ಗಳಷ್ಟು ದಂಡ ವಿಧಿಸಿದ್ದಾರೆ ಎಂದು ಬೆಂಗಳೂರು ವಿಭಾಗದ ಬೆಸ್ಕಾಂ ಜಾಗೃತ ದಳದ ಪೊಲೀಸ್‌ ವರಿಷ್ಠಾ ಧಿಕಾರಿ ನಾರಾಯಣ್‌ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನ ನಂದಗುಡಿ, ಕಸಬಾ ಹೋಬಳಿ, ಸಮೀಪದ ದೇವನಹಳ್ಳಿ ತಾಲೂಕಿನ ಬೂದಿ ಗೆರೆ ವ್ಯಾಪ್ತಿಯ ಗ್ರಾಮಗಳಿಗೆ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ವಿದ್ಯುತ್‌ ಕಳವು, ದುರ್ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ನೇರವಾಗಿ ವಿದ್ಯುತ್‌ ಕಂಬಗಳಿಂದ ಅಕ್ರಮ ಸಂಪರ್ಕ: ತಾಲೂಕಿನ ಇ.ಹೊಸಹಳ್ಳಿ, ಚಿಕ್ಕಹು ಲ್ಲೂರು, ದೊಡ್ಡಹುಲ್ಲೂರು, ಗುಳ್ಳಹಳ್ಳಿ, ಗಂಗಸಂದ್ರ, ನಂದಗುಡಿ, ಹುಲುವನಹಳ್ಳಿ, ಓಬಳಹಳ್ಳಿ, ಚಿಕ್ಕೊಂಡಹಳ್ಳಿ, ಹಿಂಡಿಗನಾಳ, ಕಾರಹಳ್ಳಿ ಯಶವಂತಪುರ, ಚೊಕ್ಕಹಳ್ಳಿ, ದೇವನಹಳ್ಳಿ ತಾಲೂಕಿನ ಬೂದಿಗೆರೆಯಲ್ಲಿನ ಪ್ರಭಾವಶಾಲಿ ವ್ಯಕ್ತಿಗಳು ಹಾಗೂ ಸಣ್ಣ ಕೈಗಾರಿಕೆ ಒಳಗೊಂಡಂತೆ 150 ಕಡೆ ಜಾಗೃತ
ದಳದ 100ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ದಾಳಿಯಲ್ಲಿ ಭಾಗವಹಿಸಿದ್ದರು. ನಿರಂತರ ವಿದ್ಯುತ್‌ ಸಂಪರ್ಕವನ್ನು ಪಂಪ್‌ಸೆಟ್‌ ಹಾಗೂ ಇನ್ನಿತರೆ ವಾಣಿಜ್ಯ ಉಪಯೋಗಗಳಿಗೆ ಬಳಕೆಯಾಗುತ್ತಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ನೇರವಾಗಿ ವಿದ್ಯುತ್‌ ಕಂಬಗಳಿಂದ ಅಕ್ರಮವಾಗಿ ಸಂಪರ್ಕ ಪಡೆಯುತ್ತಿರುವ ಕಾರಣ ಅಳವಡಿಸಿರುವ ಉಪಕರಣಗಳಿಗೆ ಒತ್ತಡ ಹೆಚ್ಚಾಗಿ ಬೆಸ್ಕಾಂಗೆ
ಉಂಟಾಗುತ್ತಿರುವ ಆರ್ಥಿಕ ನಷ್ಟ ತಡೆಗಟ್ಟುವುದು ದಾಳಿಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.

4.44 ಕೋಟಿ ರೂ.ಗಳಷ್ಟು ವಸೂಲು: ಪ್ರಥಮ ಹಂತದಲ್ಲಿ ದಂಡ ವಿಧಿಸಿದ್ದು ನಿಗದಿತ ಅವಧಿಯೊಳಗಾಗಿ ಅಕ್ರಮ ಸಂಪರ್ಕ ಸಕ್ರಮಗೊಳಿಸಿಕೊಂಡು ಮೀಟರ್‌ ಅಳವಡಿಸಿಕೊಳ್ಳದಿದ್ದಲ್ಲಿ ಬಂಧನಕ್ಕೊಳಗಾಗಿ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ಕಾನೂನಿನಡಿ ಅವಕಾಶವಿದೆ. ಇಂತಹುದೇ ಪ್ರಕರಣಗಳಲ್ಲಿ ಕಳೆದ 3 ತಿಂಗಳುಗಳ ಅವಧಿಯಲ್ಲಿ ವಿಭಾಗದ ವ್ಯಾಪ್ತಿಯಲ್ಲಿ 48 ಜನರನ್ನು ಬಂಧಿಸಲಾಗಿದ್ದು ವಿಧಿಸಿದ್ದ 6.64 ಕೋಟಿ ರೂ.ಗಳಷ್ಟು ದಂಡದಲ್ಲಿ 4.44 ಕೋಟಿ ರೂ.ಗಳಷ್ಟು ವಸೂಲು ಮಾಡಲಾಗಿದೆ. 

ವಿದ್ಯುತ್‌ ಕಳವು ಪ್ರಕರಣಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡದೆ ಕರ್ತವ್ಯಲೋಪ ಎಸಗಿದ್ದ 3 ಲೈನ್‌ಮನ್‌
ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಅನಧಿಕೃತ ವಿದ್ಯುತ್‌ ಸಂಪರ್ಕ ಪಡೆದಿರುವ ಪ್ರಕರಣಗಳು ಕಂಡುಬಂದಲ್ಲಿ ಜಾಗೃತ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು. ದಾಳಿಯಿಂದಾಗಿ ವಿಭಾಗದ ವ್ಯಾಪ್ತಿಯಲ್ಲಿ ಅಳವಡಿಸಿರುವ 23 ಫಿಡರ್‌ಗಳಲ್ಲಿ ಸಂಭವಿಸುತ್ತಿದ್ದ ಶೇ.50ರಷ್ಟು ನಷ್ಟದ ಪ್ರಮಾಣ ಇಳಿಮುಖವಾಗಿದೆ.
 
ಗ್ರಾಹಕರ ಹಿತ ಕಾಪಾಡಲು ಬೆಸ್ಕಾಂ ಬದ್ಧವಾಗಿದ್ದು ಉತ್ತಮ ಸೇವೆ ನೀಡುವ ಉದ್ದೇಶದಿಂದ “ಬೆಸ್ಕಾಂ ಮಿತ್ರ’ ಎಂಬ
ಮೊಬೈಲ್‌ ಆ್ಯಪ್‌ ಜಾರಿಯಲ್ಲಿದ್ದು ಗ್ರಾಹಕರು ವಿದ್ಯುತ್‌ ಸರಬರಾಜಿನ ಬಗ್ಗೆ ದೂರು, ಬಿಲ್‌ ಪಾವತಿಗೆ ಬಳಸಬಹುದಾಗಿದೆ ಎಂದು ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಡಿವೈಎಸ್‌ಪಿ ಭಾಸ್ಕರ್‌, ಎಇಇ ಸುರೇಶ್‌, ಚಲಪತಿ, ಎಸ್‌ಐ ಪುಟ್ಟಮ್ಮ, ಜಿಲ್ಲಾ ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next