Advertisement

ಬನಹಟ್ಟಿಯಲ್ಲಿ ವಿದ್ಯುತ್ ಅವಘಡ ಲಕ್ಷಾಂತರ ಮೌಲ್ಯದ ನೂಲು ಹಾನಿ

05:21 PM Jul 18, 2022 | Team Udayavani |

ರಬಕವಿ-ಬನಹಟ್ಟಿ: ಬನಹಟ್ಟಿಯ ಲಕ್ಷ್ಮಿ ನಗರದ ಮಗ್ಗದ ಕಾರ್ಖಾನೆಯೊಂದರಲ್ಲಿ ವಿದ್ಯುತ್ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ನೂಲು ಸುಟ್ಟು ಬಸ್ಮವಾದ ಘಟನೆ ಸೋಮವಾರ ನಡೆದಿದೆ.

Advertisement

ಶಶಿಕಾಂತ ಪಟ್ಟಣ ಅವರ ಮಗ್ಗದ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಣೆಯಲ್ಲಿದ್ದ 30 ಕ್ಕೂ ಹೆಚ್ಚು ಭೀಮುಗಳು ಸುಟ್ಟಿವೆ. ಅದೇ ರೀತಿಯಾಗಿ ಭೀಮ ಸುತ್ತಲಿಕ್ಕೆ ಬಳಸಲಾಗುವ ತುಂಬಿದ ಝರಿ ಗಾಲಿಗಳು, ನೂಲಿನ ಗಾಲಿಗಳು ಸುಟ್ಟು ಕರುಕಲಾಗಿವೆ.

ಇದನ್ನೂ ಓದಿ: ಲಾರಿಗೆ ಕಾರು ಢಿಕ್ಕಿಯಾಗಿ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್ ಪಿ, ಪತ್ನಿ ಸ್ಥಳದಲ್ಲೇ ಸಾವು

ಕೂಡಲೇ ಸ್ಥಳೀಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಿಮಿಸಿ ಬೆಂಕಿಯನ್ನು ನಂದಿಸಿದರು. ಇದರಿಂದಾಗಿ ಕೋಣೆಯ  ಒಳಗಡೆ ಮತ್ತೊಂದು ಬದಿಗೆ ಇದ್ದ ಅಪಾರ ಪ್ರಮಾಣದ ನೂಲು ಬೆಂಕಿಗೆ ತಗುಲದೆ ಉಳಿದುಕೊಂಡಿದೆ. ಬೆಂಕಿಯಿಂದಾಗಿ ಲಕ್ಷಾಂತರ ಮೌಲ್ಯದ ನೂಲು ಸುಟ್ಟಿದೆ ಎಂದು ಶಶಿಕಾಂತ ಪಟ್ಟಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next