Advertisement

ನೂರು ದಿನದಲ್ಲಿ 1.20 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ

12:25 PM Dec 12, 2021 | Team Udayavani |

ಬೆಂಗಳೂರು: ವಿದ್ಯುತ್‌ ಸಂಪರ್ಕವಿಲ್ಲದ ರಾಜ್ಯದ 1.20 ಲಕ್ಷ ಮನೆಗಳಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನೂರೇ ದಿನದಲ್ಲಿ “ಬೆಳಕು” ನೀಡುವ ಮಹತ್ವದ ಗುರಿ ಸಾಧನೆಯಲ್ಲಿ ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಯಶಸ್ವಿಯಾಗಿದ್ದಾರೆ.

Advertisement

ಇಷ್ಟು ವರ್ಷವಾದರೂ ರಾಜ್ಯದಲ್ಲಿ ವಿದ್ಯುತ್‌ ಸಂಪರ್ಕ ವಿಲ್ಲದ ಲಕ್ಷಾಂತರ ಮನೆಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಚಿವರು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದರು. ಆದರೆ ವಿದ್ಯುತ್‌ ಸಂಪರ್ಕ ರಹಿತ ಜನವಸತಿಗಳಿಗೆ ಸಂಪರ್ಕ ಕಲ್ಪಿಸುವ ಡಿಡಿಯುಜಿಜಿವೈ (ದೀನ್‌ ದಯಾಳ್‌ ಉಪಾಧ್ಯಾಯ) ಹಾಗೂ ಸೌಭಾಗ್ಯ ಯೋಜನೆಗಳು 2020ಕ್ಕೆ ಮುಕ್ತಾಯಗೊಂಡಿತ್ತು.

ಹೀಗಾಗಿ ” ಬೆಳಕು” ವಿಶೇಷ ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡು ಅದಕ್ಕೆ ನೂರು ದಿನಗಳ ಕಾಲಮಿತಿ ವಿಧಿಸಲಾಗಿತ್ತು. ಕೊನೆಗೂ ಈ ಗುರಿ ಮುಟ್ಟುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ.

ಏಕೆ ತ್ವರಿತ ಕ್ರಮ?: ಬೆಳಕು ಜನಸಾಮಾ ನ್ಯರಿಗಾಗಿಯೇ ರೂಪುಗೊಂಡ ಯೋಜನೆ. ಹೀಗಾಗಿ ಅನುಷ್ಠಾನದಲ್ಲಿ ವಿಳಂಬ ವಾಗುವ ಸಾಧ್ಯತೆ ಹೆಚ್ಚಿತ್ತು. ಆದರೆ ಕೋವಿಡ್‌ ಕಾಲಘಟದಲ್ಲಿ ಗ್ರಾಮೀಣ ಪ್ರದೇಶದಲ್ಲೂ ವರ್ಕ್ ಫ್ರಂ ಹೋಮ್‌ ಹಾಗೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ನಡೆಯಲಾರಂಭಿಸಿದವು.

ಈ ಹಿನ್ನೆಲೆಯಲ್ಲಿ ಬಡಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಅನನುಕೂಲತೆಯಾಗದಂತೆ ನೋಡಿಕೊಳ್ಳಲು ಆದ್ಯತೆ ಮೇರೆಗೆ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

Advertisement

ನಿರ್ಬಂಧ ಸಡಿಲ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಈ ಹಿಂದೆ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯವಾಗಿತ್ತು. ಎಷ್ಟೋ ಕಡೆ ಸ್ಥಳೀಯ ಆಡಳಿತದಿಂದಲೇ ಸಮಸ್ಯೆ ಉಂಟಾಗಿತ್ತು.

ಇದನ್ನೂ ಓದಿ;- ಜನ್ಮದಿನ ಸಾಮಾಜಿಕ ಕಾರ್ಯಕ್ಕೆ ಮೀಸಲಿಡಿ

ಈ ಹಿನ್ನೆಯಲ್ಲಿ ಯಾರಿಗೆ ಮನೆ ಇದೆಯೋ ಅವರೆಲ್ಲರಿಗೂ ಸಂಪರ್ಕ ನೀಡಬೇಕು. ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಮತದಾರರ ಪ್ರಮಾಣ ಪತ್ರ, ಗ್ರಾಮ ಪಂಚಾಯಿತಿ ಒದಗಿಸುವ ಇನ್ನಿತರ ದಾಖಲೆ ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಪ್ರಕ್ರಿಯೆಯಲ್ಲಿ ಅನಗತ್ಯ ಕಿರಿಕಿರಿಗೆ ಅವಕಾಶವಿರಲಿಲ್ಲ. ಇದರ ಫಲವಾಗಿ 1.20 ಲಕ್ಷ ವಿದ್ಯುತ್‌ ಸಂಪರ್ಕ ಕಲ್ಪಿಸುವ ಗುರಿ ಕಾಲಮಿತಿಯಲ್ಲೇ ಮುಕ್ತಾಯಗೊಂಡಿದೆ.

“ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಲಕ್ಷಾಂತರ ಮನೆಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿ ನನ್ನನ್ನು ಬಹುವಾಗಿ ಕಾಡಿತು. ಈ ಹಿನ್ನೆಲೆಯಲ್ಲಿ ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕೆಂಬ ಸಿಎಂ ಬಸವರಾಜ್‌ ಬೊಮ್ಮಾಯಿಯವರ ಆಶಯಕ್ಕೆ ಪೂರಕವಾಗಿ ಬೆಳಕು ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ.” ವಿ.ಸುನೀಲ್‌ ಕುಮಾರ್‌, ಇಂಧನ, ಕನ್ನಡ ಸಂಸ್ಕೃತಿ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next