Advertisement

ವಿದ್ಯುತ್‌ ಕಂಬವೇರಿ ಮಹಿಳಾ ಕಾರ್ಪೋರೇಟರ್‌ ಪ್ರತಿಭಟನೆ

06:00 AM Oct 31, 2018 | Team Udayavani |

ಬೆಳಗಾವಿ: ಇಲ್ಲಿಯ ಸದಾಶಿವ ನಗರದ ಸ್ಮಶಾನದಲ್ಲಿ ವಿದ್ಯುತ್‌ ಕಂಬಗಳ ಮೇಲೆ ಹೈಮಾಸ್ಟ್‌ ದೀಪ ಅಳವಡಿಸಲಾಗಿಲ್ಲ. ಹೀಗಾಗಿ, ಕತ್ತಲಲ್ಲಿ ಅಂತ್ಯಸಂಸ್ಕಾರ ನಡೆಸುವಂತಾಗಿದೆ ಎಂದು ಆರೋಪಿಸಿ ನಗರಪಾಲಿಕೆಯ 41ನೇ ವಾರ್ಡ್‌ ಸದಸ್ಯೆ ಸರಳಾ ಹೇರೇಕರ
ಮಂಗಳವಾರ ವಿದ್ಯುತ್‌ ಕಂಬವೇರಿ ಪ್ರತಿಭಟನೆ ನಡೆಸಿದರು. ಕಂಬದ ಮೇಲೇರಿ ನಿಂತ ಅವರು, ಅಧಿಕಾರಿಗಳು ಇಲ್ಲಿ ಬರುವವರೆಗೂ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದರು.

Advertisement

ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಮಹಿಳಾ ಪೊಲೀಸರು ಕಂಬದ ಮೇಲೇರಿ ಹೇರೇಕರ ಅವರನ್ನು ಕೆಳಗಿಳಿಯುವಂತೆ ಮನವಿ ಮಾಡಿದರೂ ಇದಕ್ಕೆ ಒಪ್ಪಲಿಲ್ಲ. ಪಾಲಿಕೆ ಅಧಿಕಾರಿಗಳು ನಮ್ಮ ವಾರ್ಡ್‌ನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಈ ಭಾಗದಲ್ಲಿ ವಿದ್ಯುತ್‌ ಇಲ್ಲದ್ದಕ್ಕೆ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿಯಾದರೆ ಜನ ಹೊರಗೆ ಬರುವುದು ಕಷ್ಟಕರವಾಗಿದೆ. ಸ್ಮಶಾನ
ಭೂಮಿಯಲ್ಲಿಯೂ ವಿದ್ಯುತ್‌ ದೀಪ ಇಲ್ಲದೇ ಕತ್ತಲಲ್ಲಿ ಅಂತ್ಯಸಂಸ್ಕಾರ ನಡೆಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಪಾಲಿಕೆ ಆಯುಕ್ತ ಶಶಿಧರ ಕುರೇರ ಆಗಮಿಸಿ, ವಾರ್ಡ್‌ ಪರಿಶೀಲಿಸಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ, ಹೆರೇಕರ ಅವರು ಪ್ರತಿಭಟನೆ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next