Advertisement

ವಿದ್ಯುತ್‌ ಬಿಲ್‌ ದರ ಹೆಚ್ಚಳ: ಸಿಎಂಗೆ ಫಡ್ನವೀಸ್‌ ಪತ್ರ

05:03 PM Jun 25, 2020 | Suhan S |

ಮುಂಬಯಿ, ಜೂ. 24: ಲಾಕ್‌ ಡೌನ್‌ ಸಂದರ್ಭ ವಿದ್ಯುತ್‌ ವಿತರಣಾ ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ಬಿಲ್‌ ವಿಧಿಸಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ದೇವೇಂದ್ರ ಫ‌ಡ್ನವೀಸ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಲಾಕ್‌ಡೌನ್‌ ಸಂದರ್ಭ ವಿದ್ಯುತ್‌ ವಿತರಣಾ ಕಂಪೆನಿಗಳಿಗೆ ಮೀಟರ್‌ ರೀಡಿಂಗ್‌ ಸಾಧ್ಯವಿಲ್ಲದ ಕಾರಣ ಅವರು ಭಾರೀ ಶುಲ್ಕ ವಿಧಿಸಿರುವುದಲ್ಲದೆ, ಮೂರು ತಿಂಗಳ ಪಾವತಿಯನ್ನು ಒಮ್ಮೆಲೇ ಮಾಡಲು ಒತ್ತಾಯಿಸಿದ್ದಾರೆ. ಲಾಕ್‌ಡೌನ್‌ ಬಳಿಕ ಅನೇಕರು ಉದ್ಯೋಗ ಮತ್ತು ವೇತನ ಕಡಿತವನ್ನು ಎದುರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಏಕಕಾಲದಲ್ಲಿ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಪತ್ರದಲ್ಲಿ ತಿಳಿಸಿದ್ದು, ಈ ವೈಪರೀತ್ಯಗಳನ್ನು ಸರಿಪಡಿಸಲು ಠಾಕ್ರೆ ಅವರನ್ನು ಕೇಳಿಕೊಂಡಿದ್ದಾರೆ.

ದೂರು ನೀಡಿದ ಗ್ರಾಹಕರಲ್ಲಿ ಮುಂಬಯಿ, ಥಾಣೆ, ಮತ್ತು ನವಿ ಮುಂಬಯಿಯ ಎಂಎಸ್‌ಇಡಿಸಿಎಲ್‌ ಪೂರೈಕೆ ಪ್ರದೇಶಗಳು ಮತ್ತು ಮುಂಬಯಿಯ ಅದಾನಿ ಮತ್ತು ಟಾಟಾ ಪವರ್‌ನ ಗ್ರಾಹಕರು ಸೇರಿದ್ದಾರೆ. ಈ ಬಗ್ಗೆ ಸೋಮವಾರ ಪ್ರತಿಭಟಿಸಲು ಗ್ರಾಹಕರು ವಿದ್ಯುತ್‌ ಸಂಸ್ಥೆಯ ಕಚೇರಿಗಳ ಮುಂದೆ ಜಮಾಯಿಸಿದ್ದರು. ಪನ್ವೆಲ್, ಕಾಮೋಟೆ ಮತ್ತು ಖಾರ್ಘ‌ರ್‌ ನಿಂದ ನಾಗರಿಕರನ್ನು ಸಾಮಾನ್ಯ ವೇದಿಕೆಗೆ ತರಲು ಕಾಮೋಟೆ ವಿದ್ಯುತ್‌ ಮಸೂದೆಯಂತಹ ಹಲವಾರು ವಾಟ್ಸಾಪ್‌ ಗುಂಪುಗಳನ್ನು ರಚಿಸಲಾಗಿದೆ ಎಂದು ಕಾಮೋಟೆಯ ಪ್ರೈಡ್‌ ಪ್ಯಾರಡೈಸ್‌ ನಿವಾಸಿ ಡಿ. ಕೆ. ರಾಯ್‌ ಹೇಳಿದ್ದಾರೆ.

ಎಂಎಸ್‌ಇಡಿಸಿಎಲ್‌ ಮುಖ್ಯ ವಕ್ತಾರ ಅನಿಲ್‌ ಕಾಂಬ್ಲೆ ಮಾತನಾಡಿ, ಮೀಟರ್‌ ರೀಡಿಂಗ್‌ ಮಾಡುವವರು ಮಾರ್ಚ್‌-ಮೇ ತಿಂಗಳ ಬಳಕೆಯನ್ನು ಜತೆಗೆ ಗಣನೆಗೆ ತೆಗೆದುಕೊಂಡಿದ್ದಾರೆ. ಲಾಕ್‌ಡೌನ್‌ನಲ್ಲಿ ಮೀಟರ್‌ ರೀಡಿಂಗ್‌ ಇಲ್ಲದಿರುವುದರಿಂದ ಬಿಲ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next