Advertisement

Electrical system: ಕೃಷಿ ಪಂಪ್‌ಸೆಟ್‌-ಆಧಾರ್‌ ಜೋಡಣೆ ಕೂಡಲೇ ಕೈಬಿಡಲಿ: ಕೋಡಿಹಳ್ಳಿ ಆಗ್ರಹ

12:58 AM Sep 28, 2024 | Team Udayavani |

ಬೆಂಗಳೂರು: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ಸಂಖ್ಯೆ ಜೋಡಣೆಯನ್ನು ಸರಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ರೂಪಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸುರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚಕೆ ನೀಡಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಆಡಳಿತ ಅವಧಿಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಜೋಡಣೆಯನ್ನು ಮಾಡಿ ವಿದ್ಯುತ್‌ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯಿತು. ಆದರೆ ರೈತರ ಹೋರಾಟದ ಫ‌ಲವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಯಿಂದ ಹಿಂದೆ ಸರಿಯಿತು. ಇದೀಗ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ಸಂಖ್ಯೆಯ ಜೋಡಣೆಯ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿದ್ದು ಸರಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗಳನ್ನು ಗ್ರೀಡ್‌ ಮತ್ತು ಗ್ರೀಡ್‌ ಮಾರ್ಗಗಳಿಂದ ಸಂಪೂರ್ಣ ಬೇರ್ಪಡಿಸುವ ಕಾರ್ಯವನ್ನು ತತ್‌ಕ್ಷಣವೇ ಸರಕಾರ ಕೈಬಿಡಬೇಕು. ಕೇಂದ್ರ ಸರಕಾರದಿಂದ ನೀಡುತ್ತಿರುವ ಸಬ್ಸಿಡಿ ದರವನ್ನು ಶೇ. 30ರಿಂದ ಶೇ. 50ಕ್ಕೆ ಏರಿಕೆ ಮಾಡಿ, ವಿದ್ಯುತ್‌ನಿಂದ ಸೋಲಾರ್‌ ಶಕ್ತಿಗೆ ಬದಲಾಗುವಂತೆ ಆದೇಶಿಸಿದೆ. ಇದು ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next