Advertisement

Puttur ಐಸಿಯುವಿನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್

11:51 PM Dec 23, 2023 | Team Udayavani |

ಪುತ್ತೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಯು ವಿನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಡಿ. 22ರ ತಡರಾತ್ರಿ ನಡೆದಿದೆ.

Advertisement

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಪುತ್ತೂರು ವಿ.ಹಿಂ.ಪ. ಕಾರ್ಯಾಲಯದಲ್ಲಿದ್ದ ದತ್ತ ಮಾಲಾಧಾರಿಗಳು ಬೆಂಕಿ ಶಮನಕ್ಕೆ ಸಹಕರಿಸಿದರು. ವಿಷಯ ತಿಳಿದು ರಾತ್ರಿ 1 ಗಂಟೆ ಸುಮಾರಿಗೆ ಶಾಸಕ ಅಶೋಕ್‌ ಕುಮಾರ್‌ ರೈ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ಆಗಿ ದಟ್ಟ ಹೊಗೆ ಕಾಣಿಸಿಕೊಂಡ ತತ್‌ಕ್ಷಣವೇ ಆಸ್ಪತ್ರೆಯ ಸಿಬಂದಿ ಮತ್ತು ಭದ್ರತ ಸಿಬಂದಿ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಿಂದ ರೋಗಿಗಳು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಶಮನದ ಬಳಿಕ ದತ್ತಮಾಲಾಧಾರಿಗಳು ಅಸ್ಪತ್ರೆಯನ್ನು ಶುಚಿಗೊಳಿಸಿದ್ದಾರೆ. ಎಸಿ ಸಹಿತ ಕೆಲವು ಪರಿಕರಗಳಿಗೆ ಹಾನಿ ಉಂಟಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next