ಕುಷ್ಟಗಿ: ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಡಾ.ಅನೂಪ್ ಶೆಟ್ಟಿ ಪೊಲೀಸ್ ಕಾಲೋನಿಯ ಸ್ವಾಗತ ಕಮಾನಿಗೆ ವಿದ್ಯುತ್ ತಂತಿ, ತಾಗಿದ್ದು ಅಪಾಯಕ್ಕೆ ಅಹ್ವಾನಿಸಿದೆ.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆಗಿದ್ದ ಡಾ. ಅನೂಪ್ ಶೆಟ್ಟಿ ಅವರ ಕಾರ್ಯದಕ್ಷತೆ ಸ್ಮರಿಸಿಕೊಂಡು ಅವರ ಹೆಸರಲ್ಲಿ ಕಳೆದ ನವೆಂಬರ್ 2019ರಲ್ಲಿ ಪೊಲೀಸ ಕಾಲೋನಿ ಲೋಕಾರ್ಪಣೆಗೊಳಿಸಲಾಗಿತ್ತು.
3 ಎಕರೆ ವಿಸ್ತೀರ್ಣದ ಜಮೀನಿನಲ್ಲಿ 54 ನಿವೇಶನಗಳನ್ನು ರಚಿಸಲಾಗಿತ್ತು. 5 ರಿಂದ6 ಲಕ್ಷ ರೂ ಮೌಲ್ಯದ ನಿವೇಶನ ಪೊಲೀಸರಿಗೆ ಕನಿಷ್ಠ ಬೆಲೆಯಲ್ಲಿ ಸಿಗುವಂತೆ ಮಾಡಿದ್ದರು. ಇದರ ಸಂಪೂರ್ಣ ಜವಾಬ್ದಾರಿ ಹಿಂದಿನ ಪಿಎಸೈ ವಿಶ್ವನಾಥ ಹಿರೇಗೌಡ್ರುವಹಿಸಿಕೊಂಡಿದ್ದರು. ಈ ಕಾಲೋನಿ ನಿರ್ಮಾಣಕ್ಕೆ ಕಾರಣೀಕರ್ತರು ಅವರಾಗಿದ್ದರು.
ವಿದ್ಯುತ್ ತಂತಿ ತಂದ ಅಪಾಯ ಕುಷ್ಟಗಿಯಿಂದ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಹೋಗುವ ಡಾ.ಅನೂಪ್ ಶೆಟ್ಟಿ ಪೊಲೀಸ್ ಕಾಲೋನಿ ಬೋರ್ಡ್ ಕಾಣಬಹುದಾಗಿದೆ. ಈ ಬೋರ್ಡ್ ಗೆ ವಿದ್ಯುತ್ ತಂತಿ ಅಂಟಿಕೊಂಡಿದ್ದು, ಅಪಾಯಕ್ಕೆ ಎಡೆಮಾಡಿದೆ. ಬೋರ್ಡ್ ಕಬ್ಬಿಣದಿಂದ ಕೂಡಿದ್ದು ಮಳೆಯ ಸಂದರ್ಭ ದಲ್ಲಿ ಜಾಸ್ತಿ ಹೀಗಾಗಿ ಜೆಸ್ಕಾಂ ಈ ಬೋರ್ಡ ನಿಂದ ವಿದ್ಯುತ್ ತಂತಿ ಪ್ರತ್ಯೇಕಿಸಿ ಅಪಾಯ ತಪ್ಪಿಸಬೇಕಿದೆ. ಇಲ್ಲವಾದಲ್ಲಿ ಅಪಾಯ ಹೇಳಿ ಕೇಳಿ ಬರುವುದಲ್ಲ. ಅಪಾಯ ಸಂಭವಿಸುವ ಮೊದಲೇ ಜೆಸ್ಕಾಂ ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕಿದೆ.
ಇದನ್ನೂ ಓದಿ: Hindu Rashtra: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ… ಸ್ವಾಮಿ ಚಕ್ರಪಾಣಿ ಬೇಡಿಕೆ