Advertisement

ವಿದ್ಯುತ್ ಚಾಲಿತ ಕಾರುಗಳ ಪ್ರವೇಶದಿಂದ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆಯೇ?

04:23 PM Oct 11, 2019 | Team Udayavani |

ಮಣಿಪಾಲ: ಭಾರತದ ಮಾರುಕಟ್ಟೆಗೆ ವಿದ್ಯುತ್ ಚಾಲಿತ ಕಾರುಗಳ ಪ್ರವೇಶದಿಂದ ಅಟೊಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ದಯಾನಂದ್ ಕೊಯಿಲ: ಕಾಲಕ್ಕೆ ತಕ್ಕಂತೆ ಬದಲಾಗಲೇ ಬೇಕು ಕಳೆದ ಐವತ್ತು ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ವಾಹನಗಳ ಕಂಡ ಈಗ ರಸ್ತೆ ತುಂಬಾ ವಾಹನಗಳು ಓಡಾಡುತ್ತಿವೆ ಈ ವಾಹನಗಳಿಗೆ ಇಂಧನ ಕೊರತೆ ಆರಂಭ ವಾದ್ರೆ ವಿದೇಶ ದಿಂದ ಇಂಧನ ಪೂರೈಕೆ ಅಸಾಧ್ಯ ವಾದ್ರೆ.?ಪರಿಸ್ಥಿತಿ ಏನಾಗಬಹುದು? ಅದಕ್ಕಾಗಿ ಪರ್ಯಾಯವ್ಯವಸ್ಥೆ ಎಲ್ಲಾ ದೇಶಗಳು ಕಂಡುಕೊಳ್ಳುತ್ತಿರುವಾಗ ನಮಗೂ ಅಗತ್ಯವಲ್ಲವೇ?

ರಾಕ್ಷಸ ಇವ: ಖಂಡಿತ ಆಗುತ್ತೆ…ಅದಕ್ಕೆ ತಕ್ಕ ಹಾಗೆ ವ್ಯವಸ್ಥೆಯೂ ಕೂಡ ಬದಲಾವಣೆ ಮಾಡ್ಕೋಬೇಕು.

ನವೀನ ಕಾಸರಗೋಡು: ಖಂಡಿತವಾಗಿಯೂ ಬದಲಾವಣೆ ಸಾಧ್ಯತೆ ಜಾಸ್ತಿ ಅದೇ ರೀತಿ ವಾಹನ ದಟ್ಟಣೆ ಆಗುವ ಸಾಧ್ಯತೆಯೂ ಇದೆ. ಎಲ್ಲರು ಸಾಧ್ಯವಾದಷ್ಟು ಸೌರ ವಿದ್ಯುತ್ತನ್ನು ಬಳಸಿ ಜನಸ್ನೇಹಿಯಾದ ಪ್ರಪಂಚವನ್ನು ನೋಡಬಹುದು ಅಷ್ಟೇ ಅಲ್ಲದೆ ವಾಯುಮಾಲಿನ್ಯದಂತಹ ದೊಡ್ಡ ಸಮಸ್ಯೆಯನ್ನು ಹೋಗಲಾಡಿಸಬಹುದು. ಆದರೆ ತುಂಬ ದೂರದ ಪ್ರಯಾಣ ಸದ್ಯಕ್ಕೆ ಕಷ್ಟ ಅನಿಸುತಿದೆ. ಇನ್ನು ಎಲ್ಲ ಕಡೆ charging station ಹಾಕಬೇಕು. ಇದರಿಂದ ಕೆಲವರಿಗೆ ಉದ್ಯೋಗವು ದೊರೆಯಬಹುದು. ಅದೇ ರೀತಿ ಬೇರೆ ದೇಶದ ತೈಲ ಉದ್ಯಮಗಳನ್ನು ಅವಲಂಬಿಸಿ ಇರಬೇಕಾಗಿಲ್ಲ. ಇದರಿಂದ ದೇಶದ ಅಭಿವ್ರಿದ್ದಿ ಸಾಧ್ಯವಾಗುತ್ತದೆ.

ರಾಜ ಅಶೋಕ್ ರಾಜ: ಬದಲಾವಣೆ ಜಗದ ನಿಯಮ, ಜನಸ್ಮೇಹಿ ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಬದಲಾವಣೆ ಆದರೆ ಕಂಡಿತ ಹೌದು.

Advertisement

ಪಂಚಲಿಂಗ ಭದ್ರಾವತಿ: ಸರ್ಕಾರ, ಮೊದ್ಲು ತಡೆ ರಹಿತ ವಿದ್ಯುತ್ ಪೂರೈಸುವ ವ್ಯವಸ್ಥೆಯನ್ನು ಮಾಡಲಿ, ನಂತರ ವಿದ್ಯುತ್ ಚಾಲಿತ ವಾಹನವೋ ಅಥವಾ ಇನ್ಯಾವುದೇ ವಿದ್ಯುತ್ಗೆ ಸಂಭಂದಿಸಿದ ಹೊಸ ಹೊಸ ಅನ್ವೇಷಣೆಗಳನ್ನು ಬಿಡುಗಡೆ ಮಾಡಲಿ.

ಪವನ್ ಗೌಡ: ಉತ್ತಮ ಗುಣಮಟ್ಟದ ಉತ್ಪನ್ನಗಳು ಬಂದರೆ ಕಂಡಿತಾ ಆಗುತ್ತದೆ

ಹರಿ ಪ್ರಸಾದ್ : ಹೌದು , ಆದರೆ ಚಾರ್ಜಿಂಗ್ ಬಗ್ಗೆ ಸೂಕ್ತ ವ್ಯವಸ್ಥೆ ಆಗಬೇಕು

ಗಂಗಾಧರ್: ಇದು ಜನಪ್ರಿಯತೆ ಹೊಂದಿದರೆ ನಿಜಕ್ಕೂ ಪರಿಸರಕ್ಕೆ ಉತ್ತಮವಾಗಲಿದೆ. ತುಂಬಾ ಹಣವು ಉಳಿತಾಯವಾಗಲಿದೆ. ಪೆಟ್ರೋ ಕೆಮಿಕಲ್ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next