ಡೀಸೆಲ್ ಎಂಜಿನ್ ರೈಲುಗಳನ್ನು ಓಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜತೆಗೆ ವೆಚ್ಚದಾಯಕವಾಗಿರುವ ಡೀಸೆಲ್ ಕೂಡ ಉಳಿತಾಯವಾಗಲಿದೆ. ಇದಕ್ಕೆ ಪರ್ಯಾಯವಾಗಿ ಭಾರತೀಯ ರೈಲ್ವೆ ಇಲಾಖೆ ವಿದ್ಯುತ್ ಎಂಜಿನ್‌ಗಳ ಬಳಕೆಗೆ ಮುಂದಾಗಿದ್ದು, ಇದಕ್ಕೆ ಬೇಕಾಗುವ ವಿದ್ಯುತ್ ದೇಶದಲ್ಲೇ ಉತ್ಪಾದಿಸಬಹುದಾಗಿದ್ದು, ಆಗ ಡೀಸೆಲ್‌ಗಾಗಿ ಅನ್ಯ ದೇಶಗಳ ಮೇಲೆ ಅವಲಂಬನೆ ಆಗುವುದನ್ನು ತಡೆಗಟ್ಟಬಹುದಾಗಿದೆ. ಅದಕ್ಕಾಗಿ ರೈಲ್ವೆ ಇಲಾಖೆ ತನ್ನ ಮಾರ್ಗಗಳಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಳುತ್ತಿದೆ.
Advertisement
ನೈಋತ್ಯ ರೈಲ್ವೆಯು 2019-20ನೇ ಸಾಲಿನಲ್ಲಿ ಹುಬ್ಬಳ್ಳಿ ವಿಭಾಗದ ತೋರಣಗಲ್ಲು-ರಂಜಿತಪುರ (ಸಿಂಗಲ್ ಲೈನ್) ನಡುವೆ ಮಂಜೂರಾದ 34 ಟ್ರಾಕ್ ಕಿಮೀನಲ್ಲಿ 22.93 ರೂಟ್ ಕಿಮೀ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಳ್ಳಾರಿ – ರಾಯದುರ್ಗ (ಸಿಂಗಲ್ ಲೈನ್) ನಡುವಿನ 58.66 ಟ್ರಾಕ್ ಕಿಮೀನಲ್ಲಿ 52.64 ರೂಟ್ ಕಿಮೀ ಹಾಗೂ ತೋರಣಗಲ್ಲು-ಹೊಸಪೇಟೆ ನಡುವಿನ34 ಟ್ರಾಕ್ ಕಿಮೀನಲ್ಲಿ 32ರೂಟ್ ಕಿಮೀ ಹಾಗೂ ಬೈಯ್ಯಪ್ಪನಹಳ್ಳಿ-ಆನೆಕಲ್ಲ ರಸ್ತೆಯ 37.4 ಟ್ರಾಕ್ ಕಿ.ಮೀ.ನಲ್ಲಿ 34.5ರೂಟ್ ಕಿ.ಮೀ. ಹಾಗೂ ಮೈಸೂರು ವಿಭಾಗದ ರಾಯದುರ್ಗ-ಥಳಕು ನಡುವಿನ 53 ಟ್ರಾಕ್ ಕಿ.ಮೀ.ನಲ್ಲಿ 48ರೂಟ್ ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿದೆ.
2020-21ನೇ ಸಾಲಿನಲ್ಲಿ ಹೊಸಪೇಟೆ – ಹುಬ್ಬಳ್ಳಿ-ವಾಸ್ಕೋ (346 ಕಿ.ಮೀ.) ಮಾರ್ಗದ 193 ಕಿ.ಮೀ. ಗುರಿಯಲ್ಲಿ 161ಕಿ.ಮೀ. ರೂಟ್
ಕಾಮಗಾರಿ ಪೂರ್ಣಗೊಂಡಿದೆ. ಹೊಸೂರು ಮಾರ್ಗವಾಗಿ ಬೆಂಗಳೂರು-ಒಮಲೂರ (196 ಕಿ.ಮೀ.) ಮಾರ್ಗದ 85 ಕಿ.ಮೀ. ಗುರಿಯಲ್ಲಿ 38ಕಿ. ಮೀ. ರೂಟ್ ಹಾಗೂ ಚಿಕ್ಕಬಾಣಾವರ-ಹುಬ್ಬಳ್ಳಿ (455 ಕಿ.ಮೀ.) ಮಾರ್ಗದ 105 ಕಿ.ಮೀ. ಗುರಿಯಲ್ಲಿ
72 ಕಿ.ಮೀ. ರೂಟ್ ಹಾಗೂ ಬಳ್ಳಾರಿ-ಚಿಕ್ಕಜಾಜೂರ (184ಕಿಮೀ) ಮಾರ್ಗದಲ್ಲಿನ 50 ಕಿ.ಮೀ. ಗುರಿ ಪೂರ್ಣಗೊಳಿಸಿದೆ.
Related Articles
ಯಲಹಂಕ-ಬಂಗಾರಪೇಟೆ (149ಕಿಮೀ), ಲೋಂಡಾ-ಮಿರಜ್(189ಕಿಮೀ) ನಡುವೆ ಕೈಗೊಳ್ಳಬೇಕಿದ್ದ ಕಾಮಗಾರಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಹೀಗಾಗಿ ಈ ಮಾರ್ಗಗಳಲ್ಲಿ ಕೈಗೊಳ್ಳಬೇಕಿದ್ದ ವಿದ್ಯುದೀಕರಣ ಕಾಮಗಾರಿ ಗುರಿ ತಲುಪಲು ಸಾಧ್ಯವಾಗಿಲ್ಲ.
Advertisement
ಇದನ್ನೂ ಓದಿ:ಕೆಕೆಆರ್ ತಂಡದಿಂದ ಅಲಿ ಖಾನ್ ಔಟ್: ಕಿವೀಸ್ ಕೀಪರ್ ಸೀಫರ್ಟ್ ಸೇರ್ಪಡೆ
2020-21ನೇ ಸಾಲಿನಲ್ಲಿ ಹೊಂದಲಾಗಿದ್ದ 630 ಕಿ.ಮೀ. ಗುರಿಯಲ್ಲಿ ನಿರೀಕ್ಷಿಸಲಾಗಿದ್ದ 322 ಕಿ.ಮೀ. ರೂಟ್ ಕಾಮಗಾರಿ ಪೂರ್ಣಗೊಂಡಿದೆ. ಜೋಡು ಮಾರ್ಗ ಕಾಮಗಾರಿ ಜತೆ ಜತೆಯಲ್ಲಿಯೇ ವಿದ್ಯುದೀಕರಣ ಕಾಮಗಾರಿಯನ್ನು ನೈಋತ್ಯ ರೈಲ್ವೆಕೈಗೊಳ್ಳುತ್ತಿದೆ. ಈಗಾಗಲೇ ಬಳ್ಳಾರಿ-ಕಾರಿಗನೂರು ಮತ್ತು ತೋರಣಗಲ್ಲು-ರಂಜಿತಪುರ ನಡುವಿನ 89.5 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತೋರಣಗಲ್ಲುವರೆಗೆ ರೈಲುಗಳು ಸಂಚರಿಸುತ್ತಿವೆ. ಆಣೆಕಲ್ಲು- ಹೊಸೂರು-ಪೆರಿಯಾನಗಥುನೈ ವಿಭಾಗದಲ್ಲಿ 38 ಕಿ.ಮೀ. ರೂಟ್ ಇಲೆಕ್ಟ್ರಿಫೈಡ್ ಕಾಮಗಾರಿ ಕೈಗೊಳ್ಳಲು ಕೇಂದ್ರ ರೈಲ್ವೆ ವಿಭಾಗವು (ಸಿಆರ್‌ಎಸ್) ಯೋಜಿಸಿ
ಸೆಪ್ಟೆಂಬರ್‌ನಲ್ಲಿ ಪರಿಶೀಲನೆ ಮಾಡಿದೆ. ಈ ಯೋಜನೆಯ ಭಾಗವಾಗಿ ಈ ವರ್ಷ ಹೂಟಗಿ-ಕಲಗುರ್ಕಿ (128 ಕಿಮೀ), ಘಟಪ್ರಭಾ-ಕುಡಚಿ (47 ಕಿಮೀ), ಚಿಕ್ಕಬಾಣಾವರ-ಬಾಣಸಂದ್ರ (105ಕಿಮೀ), ಹುಬ್ಬಳ್ಳಿ-ಲೋಂಡಾ (90ಕಿಮೀ), ಕಾರಿಗನೂರು-ಹುಲಕೋಟಿ (102 ಕಿಮೀ), ಕಾರಿಗನೂರು-ಹರ್ಲಾಪುರ (71ಕಿಮೀ) ಯೋಜನೆಯನ್ನು ಸಿಆರ್‌ಎಸ್ ಪರಿಶೀಲಿಸಿದೆ. ಥಳಕು-ಚಿತ್ರದುರ್ಗ (50ಕಿಮೀ), ಪೆರಿಯಾನಗಥುನೈ-ಪಾಲಕ್ಕೋಡ (50ಕಿಮೀ), ಯಲಹಂಕ-ದೇವನಹಳ್ಳಿ (23ಕಿಮೀ) ನಡುವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ.
ಕೋವಿಡ್-19 ಲಾಕ್‌ಡೌನ್ ಘೋಷಣೆ ಆಗುವುದಕ್ಕಿಂತಲೂ ಮೊದಲು ನೈಋತ್ಯ ರೈಲ್ವೆಯು ವಿಜಯವಾಡ-ಹುಬ್ಬಳ್ಳಿ-ವಿಜಯವಾಡ ಹಾಗೂ ತಿರುಪತಿ-ಹುಬ್ಬಳ್ಳಿ-ತಿರುಪತಿ ಈ ಎರಡು ರೈಲುಗಳನ್ನು ಬಳ್ಳಾರಿ-ಗುಂತಕಲ್ಲ ನಡುವೆ ವಿದ್ಯುದೀಕರಣ ಎಂಜಿನ್ ರೈಲು ಓಡಿಸುತ್ತಿತ್ತು. ನಂತರ ಕೋವಿಡ್-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ ಹಿನ್ನೆಲೆಯಲ್ಲಿ ವಿದ್ಯುದ್ದೀಕರಣ ಇಂಜಿನ್ ರೈಲುಗಳ ಓಡಾಟ
ಸ್ಥಗಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಮತ್ತೆ ಇವುಗಳನ್ನು ಆರಂಭಿಸುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ. – ಶಿವಶಂಕರ ಕಂಠಿ