Advertisement

ಉಡುಪಿ : ವಿವಿಧೆಡೆ ವಿದ್ಯುತ್‌ ನಿಲುಗಡೆ

02:25 AM Dec 19, 2018 | Team Udayavani |

ಉಡುಪಿ: ಕೆವಿ 33/11 ಕುಂಜಿಬೆಟ್ಟು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರ್‌ಗಳಾದ ಉಡುಪಿ-1, ಸಿಟಿ ಸೆಂಟರ್‌, ಉಡುಪಿ-2, ಉಡುಪಿ-3, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕೃಷ್ಣಮಠ, ಕುಂಜಿಬೆಟ್ಟು, ಉದ್ಯಾವರ-1 ಮತ್ತು ಚಿಟಾ³ಡಿ ಫೀಡರ್‌ಗಳಲ್ಲಿ ಐ.ಪಿ.ಡಿ.ಎಸ್‌. ಯೋಜನೆಯಡಿ 33ಕೆವಿ ಮಣಿಪಾಲ-ಕುಂಜಿಬೆಟ್ಟು ಮಾರ್ಗದ ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ. 19ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

Advertisement

ವಿದ್ಯುತ್‌ ನಿಲುಗಡೆಯಾಗುವ ಪ್ರದೇಶಗಳು: ಉಡುಪಿ ನಗರ ಪ್ರದೇಶಗಳಾದ ಬಡಗುಪೇಟೆ, ಸಿಟಿ ಬಸ್‌ ಸ್ಟ್ಯಾಂಡ್‌ ಏರಿಯಾ, ಕಡಿಯಾಳಿ, ಎಂ.ಜಿ.ಎಂ. ಎದುರು, ಸಿಟಿ ಸೆಂಟರ್‌ ಮಾಲ್‌, ಕಿನ್ನಿಮುಲ್ಕಿ, ಕೊಳಂಬೆ, ಮಿಷನ್‌ ಕಂಪೌಂಡ್‌, ಬೈಲೂರು, ಅಜ್ಜರಕಾಡು, ಚಂದು ಮೈದಾನ, ಶಾಂತಿನಗರ, ಕೋರ್ಟ್‌ರಸ್ತೆ, ಒಳಕಾಡು, ಕೆ.ಎಂ. ಮಾರ್ಗ, ಮಾರುತಿ ವೀಥಿಕ, ಸರ್ವಿಸ್‌ ಬಸ್‌ ನಿಲ್ದಾಣ, ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಶಾರದಾ ಕಲ್ಯಾಣ ಮಂಟಪ, ಬೈಲಕೆರೆ, ವಾದಿರಾಜ ಕ್ರಾಸ್‌ರೋಡ್‌, ಕೃಷ್ಣಮಠ ಪಾರ್ಕಿಂಗ್‌ ಏರಿಯಾ, ಶಾರದಾಂಬಾ ರಸ್ತೆ, ಕುಂಜಿಬೆಟ್ಟು, ಗುಂಡಿಬೈಲು, ಕಲ್ಸಂಕ, ಉದ್ಯಾವರ, ಪಡುಕೆರೆ, ಪಿತ್ರೋಡಿ, ಕಡೆಕಾರ್‌, ಪಣಿಯಾಡಿ, ಚಿಟ್ಪಾಡಿ, ಇಂದಿರಾನಗರ, ಹನುಮಾನ್‌ ಗ್ಯಾರೇಜ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next