ಕಾಸರಗೋಡು: ಕೇರಳ ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಏರಿಸಲಾಗಿದೆ. ಆ ಮೂಲಕ ವಿದ್ಯುತ್ ಬಳಕದಾರರಿಗೆ ಶಾಕ್ ನೀಡಿದಂತಾಗಿದೆ.
ಗೃಹ ಬಳಕೆ ವಿದ್ಯುತ್‌ಗೆ ಯೂನಿಟ್‌ಗೆ ತಲಾ 30 ಪೈಸೆಯಂತೆ ಹಾಗೂ ಉದ್ಯಮಗಳಿಗೆ ತಲಾ ಯೂನಿಟ್‌ಗೆ 15 ಪೈಸೆಯಂತೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ಈ ಹೆಚ್ಚಳವನ್ನು ನವೆಂಬರ್ 1ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.
ವಿದ್ಯುತ್‌ಗೆ ಈ ವರ್ಷ ಯೂನಿಟ್ ಒಂದಕ್ಕೆ ತಲಾ 40.6 ಪೈಸೆಯಂತೆ ಹೆಚ್ಚಿಸುವಂತೆ ವಿದ್ಯುನ್ಮಂಡಳಿ ಆಯೋಗದೊಂದಿಗೆ ಕೇಳಿಕೊಂಡಿತ್ತು. ಆದರೆ ಅದನ್ನು ಅಂಗೀಕರಿಸದ ಆಯೋಗ ಮುಂದಿನ ಎಂಟು ತಿಂಗಳ ಬಳಿಕ ಅಂದರೆ ಜೂನ್‌ನಲ್ಲಿ ವಿದ್ಯುತ್ ದರ ಮತ್ತೆ ಹೆಚ್ಚಿಸುವ ಸಾಧ್ಯತೆಯಿದೆ.
ಬಡತನ ರೇಖೆಗಿಂತ ಕೆಳಸ್ತರದಲ್ಲಿರುವ ಕುಟುಂಬಗಳನ್ನು ವಿದ್ಯುತ್ ದರ ಏರಿಕೆಯಿಂದ ಆಯೋಗ ಹೊರತುಪಡಿಸಿದೆ. ಅದೇ ರೀತಿ ಕಿರು ಉದ್ದಿಮೆ ವಲಯದ ವಿದ್ಯುತ್ ದರ ಹೆಚ್ಚಿಸಲಾಗಿಲ್ಲ. ಆದರೆ ಫಿಕ್ಸೆಡ್ ಚಾರ್ಜ್ ಹೆಚ್ಚಿಸಲಾಗಿದೆ.
ಬೃಹತ್ ಉದ್ದಿಮೆಗಳಿಗೆ ತಲಾ ಐದು ಪೈಸೆಯಂತೆಯೂ, ಎಕ್ಸ್‌ಟ್ರಾ ಹೈಟೆನ್ಶನ್ ಉದ್ದಿಮೆಗಳ ವಿದ್ಯುತ್ ದರದಲ್ಲಿ ಯೂನಿಟ್ ಒಂದಕ್ಕೆ ತಲಾ 15 ಪೈಸೆಯಂತೆ ಹೆಚ್ಚಿಸಲಾಗಿದೆ.