Advertisement

Panaji: ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮೃತ್ಯು

03:15 PM Nov 24, 2023 | Team Udayavani |

ಪಣಜಿ: ಗುರುವಾರ ಸಂಜೆ ಫೋರ್ಟ್ ವಾಡದ ಶಿವೋಲಿಯಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವಿದ್ಯುತ್ ಕಾರ್ಮಿಕ ಕೃಷ್ಣ ಪವಾರ್ (42) ಎಂಬ ವ್ಯಕ್ತಿ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.

Advertisement

ಈ ಬಗ್ಗೆ ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ ಗುರುವಾರ ಸಂಜೆ 4 ಗಂಟೆಯ ವೇಳೆಗೆ ಶಿವೋಲಿ-ಮಧಳವಾಡದಲ್ಲಿ ಲೈನ್ ಕಟ್ ಆಗಿದೆ ಎಂದು ವಿದ್ಯುತ್ ಇಲಾಖೆಗೆ ಕರೆ ಬಂದಿದೆ. ಲೈನ್‍ಮ್ಯಾನ್ – ಕೃಷ್ಣಾನಾಯ್ಕ್ ಮತ್ತು ಸಹಾಯಕ-ಕೃಷ್ಣ ಪವಾರ್ ಕಾಮಗಾರಿ ದುರಸ್ತಿಗೆ ಸ್ಥಳಕ್ಕೆ ತೆರಳಿದ್ದಾರೆ. ಕಾಮಗಾರಿ ವೇಳೆ ಕೃಷ್ಣ ಪವಾರ್ ಕಂಬ ಹತ್ತಿ ದುರಸ್ತಿ ಕಾರ್ಯ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಶಾಕ್ ಆದ ತಕ್ಷಣ ಕಂಬ ಹತ್ತಲು ಬಳಸುವ ಲೋಡರ್ ಸಹಾಯದಿಂದ ಕಂಬದ ಅರ್ಧದಾರಿಯಲ್ಲೇ ಬಂದು ಅಲ್ಲಿಂದ ಕೆಳಗೆ ಬಿದ್ದು ಪ್ರಜ್ಞಾಹೀನನಾಗಿದ್ದ ಎನ್ನಲಾಗಿದೆ. ಈ ಘಟನೆ ನಡೆದ ತಕ್ಷಣ ಲೈಮನ್ ಹಾಗೂ ಅಲ್ಲಿನ ಜನರು ಶಿವೋಲಿಯ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಆತನನ್ನು ದಾಖಲಿಸಿದ್ದಾರೆ. ಅಲ್ಲಿ ಇಸಿಜಿಯಂತಹ ಪರೀಕ್ಷೆಗಳನ್ನು ಮಾಡಲಾಯಿತು. ಅವರ ವರದಿ ಸಹಜ ಸ್ಥಿತಿಗೆ ಬಂದಿದೆ.

ಆದರೆ ಅಸ್ವಸ್ಥಗೊಂಡಿದ್ದ ಅವರನ್ನು ಮಾಪಸಾಗೆ ಕರೆದೊಯ್ಯುವಾಗ ಆಂಬುಲೆನ್ಸ್‍ನಲ್ಲಿ ಸಾವನ್ನಪ್ಪಿದರು. ಅವರು ಪತ್ನಿ, ಪುಟ್ಟ ಮಗಳು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಈ ಅಹಿತಕರ ಘಟನೆಯಿಂದ ಸ್ಥಳದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳಕ್ಕಾಗಮಿಸಿದ ಶಾಸಕ ಜೀತ್ ಅರೋಲ್ಕರ್ ಅವರು ಲೈನ್‍ಮ್ಯಾನ್ ಕೃಷ್ಣಾನಾಯ್ಕ್ ಅವರನ್ನು ಘಟನೆಯ ಬಗ್ಗೆ ಕೇಳಲು ಪ್ರಾರಂಭಿಸಿದರು. ಅಲ್ಲದೆ, ಮೃತ ಕೃಷ್ಣ ಪವಾರ್ ಅವರ ಸಂಬಂಧಿಕರು ಸಹ ಅಲ್ಲಿದ್ದ ಕಾರಣ, ಅವರು ನಾಯ್ಕ್ ಅವರನ್ನು ಘಟನೆಗಳ ಬಗ್ಗೆ ಕೇಳಿದರು ಮತ್ತು ಅವರು ಅಸಂಬದ್ಧ ಉತ್ತರಗಳನ್ನು ನೀಡಿದರು. ಸಹಜವಾಗಿಯೇ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯುತ್ ಇಲಾಖೆಯ ಹರೀಶ್ ರಾಯ್ಕರ್ ಮತ್ತು ವಿಶಾಲ್ ತಾಂಬೋಸ್ಕರ್ ಸ್ಥಳಕ್ಕೆ ಆಗಮಿಸಿದಾಗ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಜನರ ಗುಂಪು ರಾಯ್ಕರ್ ಅವರನ್ನು ಥಳಿಸಿತು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೃಷ್ಣ ಪವಾರ್ ಮೋರ್ಜಿಯ ನಿವಾಸಿಯಾಗಿದ್ದು ಅತ್ಯಂತ ಸ್ನೇಹಪರ ಸ್ವಭಾವದವರಾಗಿದ್ದರು. ಹಲವು ವರ್ಷಗಳಿಂದ ಶಿವೋಲಿಯ ವಿದ್ಯುತ್ ಕೇಂದ್ರದಲ್ಲಿ ಸಹಾಯಕ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯ ಕುರಿತು ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೊಂಡಿದ್ದಾರೆ.

ಇದನ್ನೂ ಓದಿ: Shivamogga: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

Advertisement
Advertisement

Udayavani is now on Telegram. Click here to join our channel and stay updated with the latest news.

Next