Advertisement

ಶಾಲೆ ಸ್ವಚ್ಛಗೊಳಿಸುವ ವೇಳೆ ವಿದ್ಯುತ್‌ ಸ್ಪರ್ಶಿಸಿ ವಿದ್ಯಾರ್ಥಿ ಸಾವು

12:46 PM Jan 26, 2021 | Team Udayavani |

ಚಿಂತಾಮಣಿ: ಸರ್ಕಾರಿ ಶಾಲೆಯಲ್ಲಿನ ನೀರಿನ ತೊಟ್ಟಿಯಲ್ಲಿ ವಿದ್ಯುತ್‌ ಹರಿದು 5ನೇ ತರಗತಿಯ ವಿದ್ಯಾರ್ಥಿಯೊಬ್ಬ
ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕು ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿ
ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಸರ್ಕಾರಿ ಶಾಲೆಯಲ್ಲಿನ ನೀರಿನ ತೊಟ್ಟಿಯಲ್ಲಿ ನೀರು ಎತ್ತಿಕೊಳ್ಳಲು ಹೋಗಿ ವಿದ್ಯುತ್‌ ಹರಿದು ಸಾವನ್ನಪ್ಪಿರುವ ವಿದ್ಯಾರ್ಥಿ, ತಾಲೂಕಿನ ಮುರುಗಮಲ್ಲ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಶಂಕರಪ್ಪರವರ ಮಗ ಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಂದೀಶ್‌ (11) ಮೃತ ಬಾಲಕ.

ನಂದೀಶ್‌ ಮತಿತ್ತರರು ಮಂಗಳವಾರ ಗಣರಾಜ್ಯೋತ್ಸವದ ಆಚರಣೆ ಅಂಗವಾಗಿ ಶಾಲೆಯನ್ನು ಸ್ವತ್ಛಗೊಳಿಸಲು ಶಿಕ್ಷಕರು ಶಾಲೆಗೆ ಬರುವ ಮುಂಚೆಯೇ ಅಡುಗೆಯವರಿಂದ ಬೀಗದ ಕೀ ಪಡೆದುಕೊಂಡು ಶಾಲಾವರಣದಲ್ಲಿನ ತೊಟ್ಟಿಯಲ್ಲಿ ನೀರು ಸೇದುತ್ತಿದ್ದ ವೇಳೆ ಬಕೆಟ್‌ ತೊಟ್ಟಿಯಲ್ಲಿ ಬಿದ್ದಿದ್ದು, ಎತ್ತಿಕೊಳ್ಳಲು ತೊಟ್ಟಿಯಲ್ಲಿ ಇಳಿದಾಗ ಅಳವಡಿಸಿದ್ದ ಮೋಟಾರ್‌ ಕಬ್ಬಿಣದ ಪೈಪ್‌ ಹಿಡಿದುಕೊಂಡಿದ್ದಾನೆ. ರಾಡ್‌ ಮುಖಾಂತರ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

ಬಾಲಕನ ಜೊತೆಯಲ್ಲಿದ್ದ ಮತ್ತಿತರ ಶಾಲಾ ಮಕ್ಕಳಿಗೂ ಕೂಡ ವಿದ್ಯುತ್‌ ಶಾಕ್‌ ಆಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂದೀಶ್‌ನ
ತಂದೆತಾಯಿ ಹಾಗೂ ಶಿಕ್ಷಕರ ಗಮನಕ್ಕೆ ತಂದಿದ್ದು, ಸ್ಥಳಕ್ಕಾಗಮಿಸಿ ತೊಟ್ಟಿಯಿಂದ ಮೇಲೆತ್ತಿದರು. ಪೋಷಕರ ಅಕ್ರಂದನ
ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್‌ ಕುಮಾರ್‌, ಕೆಂಚಾರ್ಲಹಳ್ಳಿ ಠಾಣೆಯ ಪಿಎಸ್‌ಐ ರಂಜನ್‌ ಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ರವಣಪ್ಪ, ಮಾಜಿ ಅಧ್ಯಕ್ಷ ಅಶೋಕ್‌ ಕುಮಾರ್‌ ಮತಿತ್ತರರು ಭೇಟಿ ನೀಡಿ ಪರಿಶೀಲನೆ ನಡೆಸಿ ಪೋಷಕರಿಗೆ ಸಾಂತ್ವನ ತಿಳಿಸಿ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿಕೋಡುವುದಾಗಿ ಭರವಸೆ ನೀಡಿದರು. ಪೋಷಕರ ದೂರಿನ ಮೇರೆಗೆ ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

ಬೇಸರ: ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸರೆಡ್ಡಿ, ಗಣರಾಜೋತ್ಸವ ಅಂಗವಾಗಿ ಶಾಲೆ
ಸ್ವತ್ಛಗೊಳಿಸಬೇಕೆಂದು ಹಾಗೂ ಸೋಮವಾರ ನಾನು ಬರುತ್ತೇನೆಂದು ಹೇಳಿದ್ದೆ. ಆದರೆ ವಿದ್ಯಾರ್ಥಿಗಳು ನಾನು ಬರುವುದಕ್ಕೂ ಮುನ್ನವೇ ಅಡುಗೆ ಸಹಾಯಕರಿಂದ ಕೀ ಪಡೆದು ಸ್ವತ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಬಾಲಕನಿಗೆ ವಿದ್ಯುತ್‌ ತಗುಲಿರುವುದು
ಬೇಸರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next