Advertisement

Dandeli: ದ್ವಿಚಕ್ರ ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ: ತಪ್ಪಿದ ಅನಾಹುತ

01:59 PM Jun 10, 2024 | Team Udayavani |

ದಾಂಡೇಲಿ : ನಗರದ ಟೌನ್ ಶಿಪ್ ನ ಶ್ರೀ ರಾಘವೇಂದ್ರ ಮಠದ ಬಳಿಯಿರುವ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ‌ ಅವರ ಮನೆಯ ಎದುರಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ಕಂಬ ಒಂದು ಮುರಿದು ಬಿದ್ದು, ಆಗಬಹುದಾದ ಅನಾಹುತವೊಂದು ತಪ್ಪಿದ ಘಟನೆ ಸೋಮವಾರ ನಡೆದಿದೆ.

Advertisement

ನಗರದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಉಸ್ಮಾನ್ ಹೈದರ್ ಶೇಖ ಎಂಬವರು ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋದ ಒಂದೆರಡು ನಿಮಿಷದಲ್ಲೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಬೆಳಿಗ್ಗೆ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.‌ ಒಂದು ವೇಳೆ ಸಂಜೆಯ ಸಮಯದಲ್ಲಿ ಈ ಘಟನೆ ನಡೆಯುತ್ತಿದ್ದರೇ ಸ್ಥಳೀಯ ಮಕ್ಕಳು ರಸ್ತೆ ಬದಿಯಲ್ಲಿ ಆಟವಾಡುತ್ತಿರುವ ಸಾಧ್ಯತೆಯಿದ್ದ ಕಾರಣಕ್ಕೆ ಅನಾಹುತ ನಡೆಯುವ ಸಂಭವ ಇತ್ತು. ಆದರೆ ಅದೃಷ್ಟವಶಾತ್ ಈ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಯಾರು ಇಲ್ಲದಿದ್ದ ಪರಿಣಾಮವಾಗಿ ಆಗಬಹುದಾದ ಅನಾಹುತ ಒಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿಯ ಪಂಕಜಾ ಮುಂಡೆ ಸೋತರೆ ಸಾಯುವೆ ಎಂದಿದ್ದ ವ್ಯಕ್ತಿ ಅಪಘಾತದಲ್ಲಿ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next