Advertisement
ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಜಲಾಶಯ ಭರ್ತಿಯಾಗಿತ್ತು. ಬಸವ ಸಾಗರ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಲು ಮಹತ್ವದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ 2018ರ ಮಾ. 25ರವರೆಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು. ವಿದ್ಯುತ್ ವ್ಯತ್ಯಯದಿಂದ ಫಲವತ್ತಾದ ಫಸಲು ಬರುವ ವೇಳೆಯಲ್ಲಿ ನೀರು ಹರಿಸದಿರುವುದರಿಂದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ.
ಸಮರ್ಪಕ ಮಳೆಯಾಗದ ಕಾರಣ ಕುಡಿಯುವ ನೀರಿಗೂ ಪರದಾಡುವಂತಾಗಿತ್ತು. ಆದರೆ ಈ ಬಾರಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಏರಿಕೆಯಾಗಿ ಜಲಾಶಯ ಭರ್ತಿಯಾಗಿದೆ. ವಿದ್ಯುತ್ ಪೂರೈಕೆಯಾಗದಿರುವುದರಿಂದ ರೈತರ ಕೈಗೆ ಬಂದ
ತುತ್ತು ಬಾಯಿಗೆ ಬರದಂತಾಗಿದೆ. ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ, ಬಲದಂಡೆ ಕಾಲುವೆ, ತಿಮ್ಮಾಪುರ ಏತ ನೀರಾವರಿಯ ಡಿಸಿ-1 ಹಾಗೂ ಡಿಸಿ-2, ಚಿಮ್ಮಲಗಿ ಏತ ನೀರಾವರಿ, ಮುಳವಾಡ ಏತ ನೀರಾವರಿ ಯೋಜನೆಯ ಹಂತ-1ರ ಕಾಲುವೆಗಳು, ಮರೋಳ ಏತ ನೀರಾವರಿ ಯೋಜನೆ ಹಂತ-1ರ ಪೂರ್ವ ಹಾಗೂ ಪಶ್ಚಿಮ ಕಾಲುವೆ ನೀರಾವರಿ ಮತ್ತು ಹಂತ-2ರ ಪೂರ್ವ ಹಾಗೂ ಪಶ್ಚಿಮ ಹನಿ ನೀರಾವರಿ ಯೋಜನೆ ಸೇರಿದಂತೆ ಎಲ್ಲ ಕಾಲುವೆಗಳ ಮುಖ್ಯ ಸ್ಥಾವರಗಳಿಗೆ ಸಮರ್ಪಕ
ವಿದ್ಯುತ್ ಪೂರೈಕೆಯಾಗದಿರುವುದರಿಂದ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳು ರೈತರ ಆಕ್ರೋಶಕ್ಕೆ ತುತ್ತಾಗುವಂತಾಗಿದೆ. ಕೊನೆಯಂಚಿನ ರೈತರಿಗಿಲ್ಲ ನೀರು: ಪ್ರತಿ ಬಾರಿಯೂ ವರ್ಷದಲ್ಲಿ ಎರಡು ಬಾರಿ ಅಂದರೆ ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿಗೆ ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಶಾಸಕರುಗಳು, ಕೃಭಾಜನಿ ಅಧಿಕಾರಿಗಳು, ಕಂದಾಯ, ಕೃಷಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡು ಕಾಲುವೆಗಳ ಕೊನೆಯಂಚಿನ ರೈತರ
ಜಮೀನಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳುತ್ತಾರೆ. ಆದರೆ ಕಾಲುವೆಗಳ ಕೊನೆಯಂಚಿನ ರೈತರ ಜಮೀನಿಗೆ ನೀರು ಇನ್ನೂವರೆಗೆ ನೀರು ಹರಿಯದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ. ಜಮೀನಿಗೆ ನೀರಿಲ್ಲದಿದ್ದರೂ ಅಚ್ಚುಕಟ್ಟು: ಲಾಲ್
ಬಹಾದ್ದೂರ್ ಶಾಸ್ತ್ರೀ ಜಲಾಶಯ ವ್ಯಾಪ್ತಿಯಲ್ಲಿ ಕಾಲುವೆಗಳನ್ನು ನಿರ್ಮಿಸಿ ರೈತರ ಜಮೀನಿಗೆ ನೀರೊದಗಿಸಲು ವಿತರಣಾ ಕಾಲುವೆ, ಶೀಳುಗಾಲುವೆ, ಹೊಲಗಾಲುವೆಗಳನ್ನು ನಿರ್ಮಿಸಿ ರೈತರ ಜಮೀನಿಗೆ ನೀರೊದಗಿಸಲು ಕ್ರಮ ಕೈಗೊಳ್ಳಲಾಗಿದೆಯಾದರೂ
ಶಾಸ್ತ್ರೀ ಸಾಗರ ಜಲಾಶಯ ವ್ಯಾಪ್ತಿಯಲ್ಲಿ ಇನ್ನೂ ಸಾವಿರಾರು ಎಕರೆ ರೈತರ ಜಮೀನಿಗೆ ನೀರು ಹರಿಯದಿದ್ದರೂ ಕೂಡ ಕೃಷ್ಣಾಭಾಗ್ಯಜಲ ನಿಗಮದ ಕೃಷ್ಣಾ ಕಾಡಾ ಯೋಜನೆಯ ಅಧಿಕಾರಿಗಳ ಕೈಚಳಕದಿಂದ ರೈತರ ಜಮೀನುಗಳಿಗೆ ಹೊಲಗಾಲುವೆ
ಮಾಡದಿದ್ದರೂ ಕೂಡ ಆ ಎಲ್ಲ ಜಮೀನುಗಳನ್ನು ಕೃಮೇಯೋ ಜಲಾನಯನ ಪ್ರದೇಶವೆಂದು ನಮೂದಿಸಲಾಗಿದೆ.
Related Articles
ಕೊಡಲು ತೀರ್ಮಾನಿಸಿದಂತೆ ಈಗಾಗಲೇ ಫೆಬ್ರುವರಿಗೆ ನೀರು ಹರಿಸಲಾಗಿದ್ದು, ನಿಯಮದಂತೆ ಮಾಚ್ 8ರಿಂದ 12ರವರೆಗೆ ಹಾಗೂ 21ರಿಂದ 25ರವರೆಗೂ ನೀರು ಹರಿಸಬೇಕಾಗಿತ್ತು. ಮಾರ್ಚ್ ತಿಂಗಳ 8ರಿಂದ ಕಾಲುವೆಗಳಿಗೆ ನೀರು ಹರಿಸಬೇಕಾಗಿದ್ದರೂ
ಸಮರ್ಪಕ ವಿದ್ಯುತ ಪೂರೈಕೆ ಆಗದಿರುವುದರಿಂದ ಕಾಲುವೆಗೆ ನೀರು ಹರಿಸಿಲ್ಲ ಮತ್ತು ಇನ್ನೂ ಎಷ್ಟು ದಿನಗಳು ವಿದ್ಯುತ್ ಕೊರತೆಯಾಗುತ್ತದೆ ಎನ್ನುವುದೂ ಸ್ಪಷ್ಟವಾಗಿಲ್ಲ.
Advertisement
ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ರೈತರ ಜಮೀನಿನಲ್ಲಿರುವ ಹಿಂಗಾರು ಹಂಗಾಮಿನ ಬೆಳೆಗಳು ಕೈಗೆ ಬರಲು ಮಾರ್ಚ್ 31ರವರೆಗೂ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎನ್ನುತ್ತಾರೆ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಪ್ರಗತಿಪರ ರೈತಶಾಂತಪ್ಪ ಮನಗೂಳಿ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಸಮರ್ಪಕ
ವಿದ್ಯುತ್ ಪೂರೈಕೆಯಾದರೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನೀರು ಹರಿಸಲಾಗುವುದು. ವಿದ್ಯುತ್
ಕೊರತೆಯಿಂದ ನೀರು ಪೂರೈಕೆಯಾಗದಿರುವ ದಿನಗಳ ನೀರನ್ನು ಬೇಡಿಕೆಗೆ ಅನುಗುಣವಾಗಿ ತೀರ್ಮಾನಿಸಿ ನೀರು ಹರಿಸಲು ಕ್ರಮ
ಕೈಗೊಳ್ಳಲಾಗುವುದು.
ಆರ್.ತಿರುಮೂರ್ತಿ, ಅಧಿಧೀಕ್ಷಕ ಅಭಿಯಂತರ ಶಂಕರ ಜಲ್ಲಿ