Advertisement

ರಾಜ್ಯ ಹೆದ್ದಾರಿ ಮೇಲೆಯೇ ತುಂಡಾಗಿ ಬಿದ್ದ ವಿದ್ಯುತ್‌ ತಂತಿ: ಸಂಚಾರಕ್ಕೆ ಅಡಚಣೆ

07:27 PM Mar 04, 2023 | Team Udayavani |

ಕುಳಗೇರಿ ಕ್ರಾಸ್: ಗ್ರಾಮದಿಂದ ಬಾದಾಮಿ ಕಡೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಸಿದ್ಧೇಶ್ವರ ನಗರದ ಲೇಔಟ್ ಹತ್ತಿರ 11 ಕೆವಿ ವಿದ್ಯುತ್ ತಂತಿ ಹರಿದು ಬಿದ್ದು ಕೆಲಕಾಲ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿದ ಘಟನೆ ಶನಿವಾರ ಸಾಯಂಕಾಲ ನಡೆದಿದೆ.

Advertisement

ಅದೃಷ್ಟವಶಾತ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಎಂ.ಐ ತೋಟದ, ತೋಳಮಟ್ಟಿ, ತುಪ್ಪದ ಹರಿದು ಬಿದ್ದ ತಂತಿ ಕಂಡು ಮುನ್ನಚ್ಚರಿಕೆ ಕ್ರಮ ವಹಿಸಿ ಸಂಚರಿಸುತ್ತಿದ್ದ ವಾಹನಗಳನ್ನ ತಡೆದು ಬಾರಿ ಅನಾಹುತ ತಪ್ಪಿಸಿದ್ದಾರೆ. ನಂತರ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕೆಇಬಿ ಲೈನ್‌ಮ್ಯಾನ್ ಕೀರಣ ಕುಂಬಾರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ರಸ್ತೆ ಮಧ್ಯೆ ಬಿದ್ದಿದ್ದ ತಂತಿಯನ್ನ ಬದಿಗೆ ಹಾಕಿ ಸರಿಪಡಿಸುವ ಮೂಲಕ ಸಂಚಾರಕ್ಕೆ ಅನಕೂಲ ಮಾಡಿದ್ದಾರೆ.
ಇನ್ನೂ ಗ್ರಾಮದ ಸಾಕಷ್ಟು ಕಡೆ ವಿದ್ಯುತ್ ತಂತಿಗಳು ಸಾಕಷ್ಟು ಹಳೆಯದಾಗಿದ್ದು ಗ್ರಾಮದ ತುಂಬೆಲ್ಲ ಸಮಸ್ಯೆ ಎದ್ದು ಕಾಣುತ್ತಿದೆ. ಸಮಸ್ಯೆಗಳನ್ನ ಸರಿಪಡಿಸಿ ಮುಂದಾಗುವ ಅನಾಹುತಗಳನ್ನ ತಪ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೆಸ್ಕಾಂ ನಿರ್ಲಕ್ಷ

ಹೆಸ್ಕಾಂ ನಿರ್ಲಕ್ಷ ತನದಿಂದ ಈ ಅವಗಡ ಸಂಭವಿಸಿದೆ ಎನ್ನಲಾಗಿದೆ. ಹೆದ್ದಾರಿಗೆ ಅಡ್ಡಲಾಗಿ ಹಾದು ಹೋಗಿರುವ 11 ಕೆವಿ ವಿದ್ಯುತ್ ತಂತಿಗಳು ಬಹಳ ವರ್ಷಗಳ ಹಳೆಯದಾಗಿದ್ದು ತಂತಿಗಳು ಅಲ್ಲಲ್ಲಿ ತುಂಡರಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಸಾಕಷ್ಟು ವಿದ್ಯುತ್ ಕಂಬಗಳು ಗಿಡ-ಗಂಠಿಗಳ ಮಧ್ಯೆ ಮುಚ್ಚಿ ಹೋಗಿದ್ದು ಹೆಸ್ಕಾಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬರುತ್ತಿದೆ. ಇದರಿಂದ ಸಾಕಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಅನಾಹುತ ಸಂಬವಿಸುವ ಮುನ್ನವೇ ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಬೇಸಿಗೆ ಕಾಲ ಇರುವುದರಿಂದ ಲೋಡ್ ಆಗಿ ಇಂಥ ಸಮಸ್ಯೆಗಳು ಸಂಭವಿಸುತ್ತವೆ. ಗ್ರಾಮದ ಸಾಕಷ್ಟುಕಡೆ ವಿದ್ಯುತ್ ತಂತಿಗಳು ಬಹಳ ವರ್ಷಗಳಿಂದ ಬದಲಾಯಿಸಿಲ್ಲ. ಈ ಬಾರಿ ಬಜೇಟ್‌ನಲ್ಲಿ ಹಾಕಲಾಗಿದ್ದು ಹೊಸ ತಂತಿಗಳನ್ನ ಅಳವಡಿಸುವ ಮೂಲಕ ಇಂತ ಸಮಸ್ಯೆಗಳನ್ನ ಆದಷ್ಟು ಬೇಗ ಬಗೆಹರಿಸುತ್ತೆನೆ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿ ಬಾಲಚಂದ್ರ ಕೊಳ್ಳಿ.

Advertisement

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಜೊತೆ ಬಲವಂತದ ಮದುವೆ: ತಾಯಿ, ಮಗನಿಗೆ 20 ವರ್ಷ ಕಠಿಣ ಸಜೆ

Advertisement

Udayavani is now on Telegram. Click here to join our channel and stay updated with the latest news.

Next