Advertisement
ಈ ವಿಚಾರಕ್ಕೆ ಸಂಬಂಧಿಸಿ ವಿದೇಶಿ ಮೂಲದ ಕಂಪೆನಿಯೊಂದರ ಜತೆ ರಾಜ್ಯ ಸರಕಾರವು ಮಾತುಕತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ತಿಂಗಳಲ್ಲಿ ಈ ಯೋಜನೆಗೆ ಅಧಿಕೃತವಾಗಿ ಅಂಕಿತ ಬೀಳಲಿದೆ. ನೂತನ ಪ್ರಸ್ತಾವದ ಪ್ರಕಾರ ವಿದೇಶಿ ಮೂಲದ ಕಂಪೆನಿಯೊಂದು ಹಣ ಹೂಡಲು ಮುಂದಾಗಿದ್ದು, ಬಸ್ ಖರೀದಿ, ನಿರ್ವಹಣೆ ಅವರದ್ದೇ ಜವಾಬ್ದಾರಿಯಾಗಿರುತ್ತದೆ. ನಿರ್ವಾಹಕ, ಚಾಲಕರ ನೇಮಕಾತಿ ಜವಾಬ್ದಾರಿಯನ್ನು ಮಾತ್ರ ಕೆಎಸ್ಸಾರ್ಟಿಸಿ ವಹಿಸಲಿದೆ. ಸಿಬಂದಿ ಸಂಬಳವನ್ನು ಆ ಸಂಸ್ಥೆಯೇ ನೀಡಲಿದೆ.
“ಶೂನ್ಯ ಬಂಡವಾಳದ ಯೋಜನೆ ಒಂದೆಡೆಯಾದರೆ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು “ಫೇಮ್’ ಯೋಜನೆಯ ಎರಡನೇ ಹಂತದಲ್ಲಿ ಕೆಎಸ್ಸಾರ್ಟಿಸಿಗೆ 50 ಎಲೆಕ್ಟ್ರಿಕ್ ಬಸ್‌ಗೆ ಸಹಾಯ ಧನ ನೀಡಲು ಈಗಾಗಲೇ ಒಪ್ಪಿಗೆ ಸೂಚಿಸಿದೆ. ಫೇಮ್ ಯೋಜನೆಯ ಮುಖೇನ ನಗರ ಮತ್ತು ಅಂತರ್ ನಗರ ಸಾರಿಗೆ ಸೇವೆಗೂ ಸಹಾಯಧನ ನೀಡಲು ನಿರ್ದರಿಸಿದ್ದು, ಗುತ್ತಿಗೆ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ ಪಡೆದು ಕಾರ್ಯಾಚರಣೆ ಮಾಡಬೇಕಿದೆ. ಸದ್ಯವೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು’ ಎಂದು ಕೆಎಸ್ಸಾರ್ಟಿಸಿ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ವಿದೇಶಿ ಕಂಪೆನಿಯ ಸಹಯೋಗದೊಂದಿಗೆ ಶೂನ್ಯ ಬಂಡವಾಳದಲ್ಲಿ ಅಸ್ಸಾಂ ರಾಜ್ಯದ ಸಾರಿಗೆ ನಿಗಮವು ಬಸ್ ಕಾರ್ಯಾಚರಣೆ ನಡೆಸಲು ಸದ್ಯ ಮುಂದಾಗಿದೆ. ಅಲ್ಲಿನ ವ್ಯವಸ್ಥೆಯನ್ನು ನೋಡಿಕೊಂಡು ಕೆಎಸ್ಸಾರ್ಟಿಸಿ ಈ ರೀತಿಯ ಎಲೆಕ್ಟ್ರಿಕ್ ಬಸ್ ಸೇವೆ ಪ್ರಾರಂಭಿಸುವತ್ತ ಗಮನಹರಿಸಲಿದೆ.
Advertisement
ಕಾರ್ಯಾಚರಣೆಯ ಬಗ್ಗೆ ವಿದೇಶಿ ಕಂಪೆನಿಯೊಂದಿಗೆ ಮಾತುಕತೆ ನಡೆದಿದೆ. ಯೋಜನೆಯ ಸಾಧ್ಯಾಸಾಧ್ಯತೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದರ ಪ್ರಕಾರ ವ್ಯವಹಾರದ ಶೇ. 60ರಷ್ಟು ನಮ್ಮ ನಿಗಮಕ್ಕೆ ಮತ್ತು ಶೇ. 40ರಷ್ಟು ವಿದೇಶಿ ಕಂಪೆನಿಗೆ ಬಂಡವಾಳ ಹಂಚಿಹೋಗಲಿದೆ.– ಲಕ್ಷ್ಮಣ ಸವದಿ, ಸಾರಿಗೆ ಸಚಿವ – ನವೀನ್ ಭಟ್ ಇಳಂತಿಲ