ಮಹಾನಗರ: ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಇನ್ನೇನು ಕೆಲವೇ ತಿಂಗಳಿನಲ್ಲಿ ಪರಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿದ್ದು, ನಗರ ದಿಂದ ಮೂರು ರೂಟ್ ಗಳಲ್ಲಿ ಕಾರ್ಯಾ ಚರಣೆ ನಡೆಸಲು ಕೆಎಸ್ಸಾರ್ಟಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ರಾಜ್ಯ ಸರಕಾರದಿಂದ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ಈಗಾಗಲೇ 45 ಎಲೆಕ್ಟ್ರಿಕ್ ಬಸ್ ಗಳು ಹಂಚಿಕೆಯಾ ಗಿದ್ದು, ಕೊನೆಯ ಪ್ರಕ್ರಿಯೆ ಯಲ್ಲಿದೆ. ಈ ಬಸ್‌ಗಳು ನಿಗಮಕ್ಕೆ ಸೇರಿದ ಬಳಿಕ ಮಂಗಳೂರು-ಉಡುಪಿ-ಮಣಿಪಾಲ, ಮಂಗಳೂರು – ಕಾಸರಗೋಡು ಮತ್ತು ಮಂಗಳೂರು-ಧರ್ಮಸ್ಥಳ ರೂಟ್‌ಗಳಲ್ಲಿ ಕಾರ್ಯಾಚರಣೆ ನಡೆಸಲು ಚಿಂತನೆ ನಡೆದಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಬಸ್‌ಗಳು ಸುಮಾರು 200 ಕಿ.ಮೀ. ಸಂಚರಿಸಹುದು. ಒಂದು ಬಸ್ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂವರೆಯಿಂದ 2 ಗಂಟೆ ಬೇಕು. ಹೀಗಿರು ವಾದ ಮಂಗಳೂರಿನಿಂದ ಬೆಂಗಳೂರು, ಮೈಸೂರು ಸೇರಿದಂತೆ ದೂರದ ರೂಟ್‌ಗಳಿಗೆ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಕಷ್ಟ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಬಸ್ ಓಡಿಸಲು ನಿರ್ಧಾರ ಮಾಡಲಾಗಿದೆ.
ಮತ್ತಷ್ಟು ಹೊಸ ಬಸ್‌ನಿರೀಕ್ಷೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ಸದ್ಯದಲ್ಲೇ ಮತ್ತಷ್ಟು ಹೊಸ ಬಸ್ ಆಗಮಿಸುವ ನೀರೀಕ್ಷೆ ಇದೆ. ಕೇಂದ್ರ ಸರಕಾರದಿಂದ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮಂಗಳೂರು ನಗರ ಆಯ್ಕೆಯಾಗಿದೆ. ಈ ಪ್ರಕ್ರಿಯೆ ಕೆಲವು ತಿಂಗಳಲ್ಲಿ ನಡೆಯಲಿದೆ. ಅಲ್ಲದೆ, ರಾಜ್ಯದಲ್ಲಿ ಈಗಾಗಲೇ ಅತ್ಯಾಧುನಿಕ ಸೌಕರ್ಯ ಹೊಂದಿದ ಅಶ್ವಮೇಧ ಕ್ಲಾಸಿಕ್ ಬಸ್ ಅನ್ನು ಕೆಲವು ನಗರಗಳಿಗೆ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಬಸ್ ಕೇಂದ್ರ ಕಚೇರಿ ಸೇರಲಿದ್ದು, ಅದರಲ್ಲಿ
ಕೆಲವು ಬಸ್‌ಗಳು ಮಂಗಳೂರಿಗೆ ಹಂಚಿಕೆಯಾಗುವ ಸಾಧ್ಯತೆ ಇದೆ.
ಅಲ್ಲದೆ, ಕೆಲವು ಸಾಮಾನ್ಯ ಸಾರಿಗೆ ಬಸ್ ಗಳು ಕೂಡ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಸದ್ಯ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಸದ್ಯ 565 ವಿವಿಧ ಮಾದರಿಯ ಬಸ್‌ಗಳಿವೆ. 505 ಶೆಡ್ನೂಲ್ ಗಳಲ್ಲಿ ಸಂಚರಿಸುತ್ತಿದ್ದು, ಪ್ರತೀ ದಿನ ಸುಮಾರು 1.10 ಲಕ್ಷಕ್ಕೂ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದಾರೆ. ಮತ್ತಷ್ಟು ಬಸ್‌ಗಳು ನಿಗಮ ಸೇರಿದಂತೆ 100ಕ್ಕೂ ಹೆಚ್ಚಿನ ಶೆಡ್ನೂಲ್‌ಗಳು ಹೆಚ್ಚಾಗಿ ಸಾರ್ವಜನಿಕರಿಗೆ ಮತ್ತಷ್ಟು ಉಪಯೋಗವಾಗಬಹುದು.
ಡಿಪೋದಲ್ಲಿ ಚಾರ್ಜಿಂಗ್ ಸ್ಟೇಷನ್ ಯಾವೆಲ್ಲ ಡಿಪೋದಿಂದ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ನಡೆಸಲಾಗುತ್ತದೋ ಆ ಡಿಪೋಗಳಲ್ಲಿ ಇ.ವಿ. ಸ್ಟೇಷನ್ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ. ಅದರಂತೆ ಮಂಗಳೂರಿನ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತು ಕುಂಟಿಕಾನದಲ್ಲಿರುವ ಡಿಪೋದಲ್ಲಿ ಇವಿ ಸ್ಟೇಷನ್ ಸ್ಥಾಪನೆಯಾಗಲಿದೆ. ಈ ಕುರಿತು ಈಗಾಗಲೇ ಸ್ಥಳ ಪರಿಶೀಲನೆ ನಡೆದಿದ್ದು, ಟೆಂಡರ್ ಕಾರ್ಯಗತದಲ್ಲಿದೆ. ಕುಂಟಿಕಾನದಲ್ಲಿ 15 ಮತ್ತು ಬಿಜೈನಲ್ಲಿ 5 ಬಸ್ ಗಳನ್ನು ಒಮ್ಮೆಲ್ಲೇ ಚಾರ್ಜಿಂಗ್ ಮಾಡಲು ಅವಕಾಶ ಇದೆ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 45 ಎಲೆಕ್ಟ್ರಿಕ್ ಬಸ್‌ಗಳು ಹಂಚಿಕೆಯಾಗಿದೆ. ಅದರಂತೆ ಸದ್ಯದಲ್ಲೇ ಈ ಬಸ್‌ಗಳು ನಿಗಮ ಸೇರುವ ನಿರೀಕ್ಷೆ ಇದೆ. ರೂಟ್ ಸರ್ವೇಯ ಪ್ರಕಾರ ಈ ಬಸ್‌ಗಳನ್ನು ಮಂಗಳೂರಿನಿಂದ ಮಣಿಪಾಲ, ಧರ್ಮಸ್ಥಳ ಮತ್ತು ಕಾಸರಗೋಡಿಗೆ ಕಾರ್ಯಾಚರಣೆ ನಡೆಸಲು ಚಿಂತನೆ ಮಾಡಲಾಗಿದೆ.
ರಾಜೇಶ್ ಶೆಟ್ಟಿ ಕೆಎಸ್ಸಾರ್ಟಿಸಿ, ವಿಭಾಗೀಯ ನಿಯಂತ್ರಣಾಧಿಕಾರಿ
*ನವೀನ್ ಭಟ್ ಇಳಂತಿಲ