Advertisement

Electoral Bonds: “ರಾಜಕೀಯ ಪಕ್ಷಗಳ ಹಣದ ಮೂಲ ತಿಳಿಯುವ ಹಕ್ಕು ನಾಗರಿಕರಿಗಿಲ್ಲ’

10:18 PM Oct 30, 2023 | Team Udayavani |

ನವದೆಹಲಿ: ಸಂವಿಧಾನದ 19(1)(ಎ) ವಿಧಿಯಡಿ ರಾಜಕೀಯ ಪಕ್ಷಗಳ ಹಣದ ಮೂಲಕ್ಕೆ ಸಂಬಂಧಿಸಿ ಮಾಹಿತಿ ಪಡೆಯುವ ಹಕ್ಕು ನಾಗರಿಕರಿಗೆ ಇಲ್ಲ ಎಂದು ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.

Advertisement

ಅಕ್ರಮ ಹಣವನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪದ ನಡುವೆಯೇ ಅಟಾರ್ನಿ ಜನರಲ್‌ ಅವರಿಂದ ಈ ಸ್ಪಷ್ಟನೆ ಬಂದಿದೆ. “ಸಮಂಜಸವಾದ ನಿರ್ಬಂಧಗಳಿಗೆ ಒಳಪಡದೇ ಜನರಿಗೆ “ಯಾವುದನ್ನೂ ಮತ್ತು ಎಲ್ಲವನ್ನೂ’ ತಿಳಿಯುವ ಹಕ್ಕು ಇರುವುದಿಲ್ಲ’ ಎಂದು ಆರ್‌.ವೆಂಕಟರಮಣಿ ಪ್ರತಿಪಾದಿಸಿದ್ದಾರೆ.

“ಚುನಾವಣಾ ಬಾಂಡ್‌ ಯೋಜನೆಯು ಬಾಂಡ್‌ಗಳನ್ನು ಖರೀದಿಸುವವರ ಗೌಪ್ಯತೆಯ ಪ್ರಯೋಜನವನ್ನು ವಿಸ್ತರಿಸುತ್ತದೆ. ಇದು ಶುದ್ಧ ಹಣದ ಕೊಡುಗೆಯನ್ನು ಖಚಿತಪಡಿಸುತ್ತದೆ. ತೆರಿಗೆ ಬಾಧ್ಯತೆಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸುತ್ತದೆ’ ಎಂದೂ ವಾದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next