Advertisement

Electoral Bond ರಹಸ್ಯ ಬಹಿರಂಗ : ಲಾಟರಿ ಕಂಪೆನಿಯಿಂದ ಗರಿಷ್ಠ 1,368 ಕೋ.ರೂ. ದೇಣಿಗೆ

01:28 AM Mar 15, 2024 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ದೇಶದ ರಾಜಕೀಯ ಪಕ್ಷಗಳ ದೇಣಿಗೆ ರಹಸ್ಯ ಬಹಿರಂಗಗೊಂಡಿದೆ. ಗುರುವಾರ ಸಂಜೆ ವೇಳೆ ಚುನಾವಣೆ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಎಸ್‌ಬಿಐ ಸಲ್ಲಿಸಿದ್ದ ಚುನಾವಣೆ (ಎಲೆಕ್ಟೋರಲ್‌) ಬಾಂಡ್‌ಗಳ ದತ್ತಾಂಶವನ್ನು ಅಪ್‌ಲೋಡ್‌ ಮಾಡಿದೆ. ವಿಶೇಷವೆಂದರೆ ಅತೀ ಹೆಚ್ಚು ದೇಣಿಗೆ ನೀಡಿರುವ ಟಾಪ್‌ 10 ಸಂಸ್ಥೆಗಳ ಪೈಕಿ ಅಗ್ರ ಎರಡು ಸಂಸ್ಥೆಗಳು ದಕ್ಷಿಣ ಭಾರತದ್ದಾಗಿವೆ. ಆದರೆ ದೇಣಿಗೆದಾರರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾ ರೆಂಬ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

Advertisement

ತಮಿಳುನಾಡು ಮೂಲದ “ಲಾಟರಿ ದೊರೆ’ ಸ್ಯಾಂಟಿಯಾಗೋ ಮಾರ್ಟಿನ್‌ ಮಾಲಕತ್ವದ ಫ್ಯೂಚರ್‌ ಗೇಮಿಂಗ್‌ ಆ್ಯಂಡ್‌ ಹೊಟೇಲ್‌ ಸರ್ವೀಸ್‌ ಪಿ.ಆರ್‌. ಸಂಸ್ಥೆಯು ಬರೋಬ್ಬರಿ 1,368 ಕೋಟಿ ರೂ. ದೇಣಿಗೆ ನೀಡಿದೆ. ಹೈದರಾಬಾದ್‌ ಮೂಲದ ಪಿ.ಪಿ. ರೆಡ್ಡಿ ನೇತೃತ್ವದ ಮೇಘಾ ಎಂಜಿನಿಯರಿಂಗ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯು 966 ಕೋಟಿ ರೂ. ದೇಣಿಗೆ ನೀಡಿದೆ. ಮುಂಬಯಿ ಮೂಲದ ಕ್ವಿಕ್‌ ಸಪ್ಲೆ„ ಚೈನ್‌ ಕಂಪೆನಿ 410 ಕೋಟಿ ರೂ. ದೇಣಿಗೆ ನೀಡುವ ಮೂಲಕ ಅತಿಹೆಚ್ಚು ದೇಣಿಗೆ ನೀಡಿದ ಮೂರನೇ ಅಗ್ರ ಸಂಸ್ಥೆಯಾಗಿದೆ. ಆದರೆ ಯಾವ ಸಂಸ್ಥೆ ಯಾವ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂಬ ವಿವರ ಬಹಿರಂಗವಾಗಿಲ್ಲ. ಇನ್ನು ರಾಜ್ಯದ ಜೆಡಿಎಸ್‌ ಒಟ್ಟು 43.50 ಕೋಟಿ ರೂ. ದೇಣಿಗೆ ಪಡೆದಿದೆ.

2019ರ ಎ. 12ರಿಂದ 2024ರ ಜ. 11ರ ವರೆಗೆ ಬಾಂಡ್‌ಗಳನ್ನು ಖರೀದಿಸಿರುವ ಸಂಸ್ಥೆಗಳ ವಿವರ ಹಾಗೂ 2019ರ ಎ. 12ರಿಂದ 2024ರ ಜನವರಿಯ ವರೆಗೆ ಬಾಂಡ್‌ ಬಳಕೆ ಮಾಡಿರುವ ರಾಜಕೀಯ ಪಕ್ಷಗಳ ಹೆಸರನ್ನು ಪಟ್ಟಿ ಒಳಗೊಂಡಿದೆ. ರಾಜಕೀಯ ಪಕ್ಷಗಳ ದೇಣಿಗೆಯಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಚುನಾವಣ ಬಾಂಡ್‌ಗಳ ದತ್ತಾಂಶದ ವಿವರವನ್ನು ಶುಕ್ರವಾರ ಸಂಜೆ ಒಳಗೆ ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಟಾಪ್‌ 10 ದೇಣಿಗೆದಾರರು
ಫ್ಯೂಚರ್‌ ಗೇಮಿಂಗ್‌: 1,368 ಕೋಟಿ ರೂ.
ಮೇಘಾ ಎಂಜಿನಿಯರಿಂಗ್‌: 966 ಕೋಟಿ ರೂ.
ಕ್ವಿಕ್‌ ಸಪ್ಲೆ„ ಚೈನ್‌ ಪ್ರೈವೇಟ್‌ ಲಿ.: 410 ಕೋಟಿ ರೂ.
ವೇದಾಂತ: 400 ಕೋಟಿ ರೂ.
ಹಲ್ದಿಯಾ ಎನರ್ಜಿ ಲಿ.: 377 ಕೋಟಿ ರೂ.
ಭಾರ್ತಿ ಗ್ರೂಪ್‌: 247 ಕೋಟಿ ರೂ.
ಎಸ್ಸೆಲ್‌ ಮೈನಿಂಗ್‌: 224 ಕೋಟಿ ರೂ.
ವೆಸ್ಟರ್ನ್ ಯುಪಿ ಪವರ್‌: 220 ಕೋಟಿ ರೂ.
ಕೆವೆಂಟರ್‌ ಫ‌ುಡ್‌ಪಾರ್ಕ್‌: 195 ಕೋಟಿ ರೂ.
ಮದನ್‌ಲಾಲ್‌ ಲಿ.: 185 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next