Advertisement
ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ಹಣವನ್ನು ಹಲವು ಮೂಲಗಳಿಂದ ಸಂಪಾ ದಿಸಿಕೊಳ್ಳುತ್ತವೆ. ಪ್ರತಿ ಪಕ್ಷಗಳಿಗೆ ಬಲಿಷ್ಠವಾದ ಆರ್ಥಿಕ ಶಕ್ತಿಯೊಂದು ಇದ್ದರೆ ಮಾತ್ರ ಚುನಾವಣೆಯಲ್ಲಿ ತಂತ್ರ ಗಾರಿಕೆಯನ್ನು ನಡೆಸಬಹುದೇ ವಿನಃ “ಜೀರೋ ಇನ್‌ವೆಸ್ಟ್ ಮೆಂಟ್’ನಲ್ಲಿ ಪ್ರಸ್ತುತ ರಾಜಕೀಯ ಕಷ್ಟ. ಇಂತಹ ಆದಾಯಗಳಿಗೆ ಪಕ್ಷಗಳು ಹಲವು ಮೂಲಗಳನ್ನು ಇಟ್ಟುಕೊಂಡಿರುತ್ತವೆ. ಅವುಗಳು ನಿಯಮಿತವಾಗಿ ಪಕ್ಷಗಳಿಗೆ ಹಣಕಾಸನ್ನು ನೀಡುತ್ತವೆ. ಇದೂ ಒಂದು ರೀತಿ ಬಂಡವಾಳ ಹೂಡಿಕೆ ಮಾಡಿದ ರೀತಿ. 2017ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಕೇಂದ್ರ ಮಂಡಿಸಿತ್ತು.
ಇದು ಒಂದು ಮೌಲ್ಯವುಳ್ಳ ಸ್ವೀಕೃತಿ ಪತ್ರ ಎನ್ನಬಹುದು. ಇದು ಹಣದ ರೀತಿ ಮುಖ ಬೆಲೆಯಳ್ಳ ದಾಖಲೆಯಾಗಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಸ್ವೀಕರಿಸುವ ಹಣವನ್ನು ಬ್ಯಾಂಕ್‌ಗಳಿಂದ ಬಾಂಡ್ ರೂಪದಲ್ಲಿ ಪಡೆಯುವ ವಿಧಾನವಾಗಿದೆ. ಇದು ಬರೀ ರಾಜಕೀಯ ಪಕ್ಷದ ಹೆಸರಿನಲ್ಲಿ ಮಾತ್ರವಲ್ಲದೇ ವ್ಯಕ್ತಿಯ ಹೆಸರಿನಲ್ಲೂ ಇದನ್ನು ಪಡೆಯಬಹುದಾಗಿದೆ.
Related Articles
ಪಕ್ಷಗಳಿಗೆ ಹಣ ಹೂಡುವ ವ್ಯಕ್ತಿ ಸಂಬಂಧಿಸಿದ ಬ್ಯಾಂಕುಗಳಿಂದ ಅಥವಾ ಆನ್‌ಲೈನ್‌ನಿಂದ ಬಾಂಡ್ ಪಡೆಯುತ್ತಾರೆ. ಈ ಸಂದರ್ಭ ಬ್ಯಾಂಕ್ ದಾನಿಯ ಎಲ್ಲ ಆರ್ಥಿಕ ವ್ಯವಹಾರ ಮಾಹಿತಿಯನ್ನು ಕಲೆ ಹಾಕುತ್ತದೆ. ಆದರೆ ನೀವು ನಗದು ಬಾಂಡ್ ಪಡೆಯುವಂತಿಲ್ಲ. ಬಾಂಡ್ ಪಡೆಯುವ ಸಂದರ್ಭ ನಿಮ್ಮ ಖಾತೆಗೆ ಹಣ ಬಂದ ಮೂಲವನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಬಳಿಕ ಬ್ಯಾಂಕ್ ಬಾಂಡ್ ನೀಡುತ್ತದೆ.
Advertisement
ಬಳಕೆ ಹೇಗೆ?ಇಂತಹ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದುಕೊಳ್ಳಬೇಕಾಗುತ್ತದೆ. ಇದು 1000 ರೂ., 10,000 ರೂ., 1 ಲಕ್ಷ ರೂ., 10 ಲಕ್ಷ ರೂ. ಮತ್ತು 1 ಕೋಟಿ ರೂ. ನ ಬೆಲೆಯಲ್ಲಿ ಲಭ್ಯವಾಗಲಿದೆ. ಪಕ್ಷಗಳಿಗೆ ಹಣ ನೀಡಿದರವರ ವಿವರಗಳನ್ನು ಬ್ಯಾಂಕ್ ದಾಖಲಿಸಿಕೊಳ್ಳುತ್ತದೆ. ದಾನಿ ಕೆ.ವೆ.çಸಿ. ಖಾತೆಯನ್ನು ಹೊಂದಿರಬೇಕು. ಬ್ಯಾಂಕ್ ಬಾಂಡ್ ನೀಡಿದ ಬಳಿಕ ದಾನಿ ಅದನ್ನು ಪಕ್ಷಗಳಿಗೆ ನೀಡುತ್ತಾರೆ. ಬಳಿಕ ಪಕ್ಷ ಅದನ್ನು ಬ್ಯಾಂಕ್‌ಗೆ ಸಲ್ಲಿಸಿ ತನ್ನ ಖಾತೆಗೆ ಜಮೆ ಮಾಡಿಕೊಳ್ಳುತ್ತದೆ. ಯಾಕೆ ಈ ಕ್ರಮ?
ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚಗಳಿಗೆ ಕಪ್ಪುಹಣ ಬಳಕೆಯಾಗುತ್ತಿರುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಕೆಲವು ಆದಾಯದ ಮೂಲಗಳು ವಿದೇಶದಲ್ಲಿದ್ದು ಚುನಾವಣೆಗೆ ಈ ರೀತಿಯಾಗಿ ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇವೆಲ್ಲದರ ನಡುವೆ ಪಾರದರ್ಶಕ ಚುನಾವಣೆಗೆ ಎಲ್ಲೂ ಕಪ್ಪುಹಣ ಬಳಕೆಯಾದಂತೆ ಈ ಕ್ರಮ ಪರಿಚಯಿಸಲಾಗುತ್ತಿದೆ. ಬಾಂಡ್ ಮೂಲಕ ರಾಜಕೀಯ ಪಕ್ಷಗಳ ಖಾತೆಗೆ ಸಂದಾಯವಾದ ಹಣ ತೆರಿಗೆ ಕಟ್ಟಿದ ಹಣವಾಗಿರುತ್ತದೆ. ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಎಸ್‌ಬಿಐ 1,716.05 ಕೋಟಿ ರೂ.ಗಳ ಬಾಂಡ್ ಅನ್ನು ಹಂಚಿಕೆ ಮಾಡಿದೆ. ಬಿಜೆಪಿ ಈಗಾಗಲೇ ತನ್ನ ಹೆಚ್ಚಿನ ಪಕ್ಷದ ನಿಧಿಯನ್ನು ಬಾಂಡ್ ಮುಖಾಂತರ ಪಡೆದಿದೆ. ಕುತೂಹಲದ ಸಂಗತಿಗಳು
ಯಾರು ಬೇಕಾದರೂ ಈ ಬಾಂಡ್ ಪಡೆದುಕೊಳ್ಳಲು ಸ್ವತಂತ್ರರು.
1000 ರೂ.ನಿಂದ 1 ಕೋಟಿ ವರೆಗೆ ಮಾತ್ರ ಲಭ್ಯ.
KYC (know your customer) ಮೂಲಕ ದಾನಿಯ ಹಣಕಾಸಿನ ವ್ಯವಹಾರದ ಬಗ್ಗೆ ಬ್ಯಾಂಕ್ ಮಾಹಿತಿ ಕಲೆಹಾಕುತ್ತದೆ.
ಬಾಂಡ್ ಸ್ವೀಕರಿಸಿದ ವ್ಯಕ್ತಿಯ ಮಾಹಿತಿ ಬ್ಯಾಂಕ್ ಗೌಪ್ಯವಾಗಿಡುತ್ತದೆ.
1 ಬಾಂಡ್ 15 ದಿನಗಳ ಕಾಲ ಮಾತ್ರ ಮೌಲ್ಯ ಹೊಂದಿರುತ್ತದೆ.
ಬಾಂಡ್‌ಗಳಿಗೆ ಬಡ್ಡಿದರ ಅನ್ವಯಿಸುವುದಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಾತ್ರ ಲಭ್ಯ.
ಬಾಂಡ್ ಖರೀದಿ ಉದ್ದೇಶದ ಕುರಿತು ಬ್ಯಾಂಕ್ ಮಾಹಿತಿ ಪಡೆಯುತ್ತದೆ.
ಬಾಂಡ್ ಅನ್ನು ವರ್ಷದಲ್ಲಿ ನಾಲ್ಕು ಅವಧಿಯಲ್ಲಿ, ಪ್ರತಿ ಅವಧಿಯಲ್ಲಿ 10ದಿನಗಳು ಮಾತ್ರ ಖರೀದಿಸಬಹುದು. ಚುನಾವಣೆಯ ಸಂದರ್ಭ ಅದನ್ನು 30 ದಿನಗಳಿಗೆ ವಿಸ್ತರಿಸಲಾಗಿದೆ.
ಜನವರಿ-ಮಾರ್ಚ್, ಎಪ್ರಿಲ್-ಜೂನ್, ಜುಲೈ-ಸೆಪ್ಟೆಂಬರ್, ಅಕ್ಟೋಬರ್-ಡಿಸೆಂಬರ್ ಅವಧಿ ಎಂದು ವಿಂಗಡಿಸಲಾಗಿದೆ.
ಸ್ವೀಕರಿಸಿದ ಬಾಂಡ್ ಕುರಿತ ಮಾಹಿತಿ ಯನ್ನು ಕೇಂದ್ರ ಚುನಾವಣ ಆಯೋಗಕ್ಕೆ ರಾಜಕೀಯ ಪಕ್ಷಗಳು ಸಲ್ಲಿಸುತ್ತಿರಬೇಕು.