Advertisement

ಚುನಾವಣೆ ಹಣಾಹಣಿಗೆ ಒಡ್ಡೋಲಗ

06:00 AM Nov 03, 2017 | Harsha Rao |

ಬೆಂಗಳೂರು: ರಾಜ್ಯವನ್ನು ಕಾಂಗ್ರೆಸ್‌ ಆಡಳಿತದಿಂದ ಮುಕ್ತಗೊಳಿಸುವ ಘೋಷಣೆಯೊಂದಿಗೆ ರಾಜ್ಯ ಬಿಜೆಪಿ ಹಮ್ಮಿ ಕೊಂಡಿರುವ “ನವ ಕರ್ನಾಟಕ ನಿರ್ಮಾಣದ ಪರಿವರ್ತನ ಯಾತ್ರೆ’ಗೆ ಗುರುವಾರ ಚಾಲನೆ ನೀಡಲಾಯಿತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ, ಎತ್ತಿನ ಬಂಡಿ ಮತ್ತು ಪಕ್ಷದ ಧ್ವಜ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಥಯಾತ್ರೆಗೆ ಹಸಿರು ನಿಶಾನೆ ತೋರಿದರು.

Advertisement

ಈ ಮೂಲಕ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿದ ವಿಪಕ್ಷ ಬಿಜೆಪಿ, ಮುಂದಿನ 75 ದಿನಗಳ ಕಾಲ ರಾಜ್ಯವನ್ನು ಕಾಂಗ್ರೆಸ್‌ಮುಕ್ತಗೊಳಿಸುವ ಘೋಷಣೆಯೊಂದಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್‌ ಸಮಾವೇಶಗಳನ್ನು ನಡೆಸಲಿದೆ.

ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತ ನಾಡಿದ ಅಮಿತ್‌ ಶಾ, ಈ ಪರಿವರ್ತನ ಯಾತ್ರೆ ಕೇವಲ ಮುಖ್ಯಮಂತ್ರಿ, ಸರಕಾರ, ಸಚಿವರ ಪರಿವರ್ತನೆಗೆ ಅಲ್ಲ. ರಾಜ್ಯದ ಸ್ಥಿತಿ ಪರಿವರ್ತನೆಗೆ ಹಮ್ಮಿಕೊಂಡಿರುವ ಯಾತ್ರೆ. ರಾಜ್ಯದ ರೈತರು, ಯುವಕರನ್ನು ಉತ್ತಮ ಸ್ಥಿತಿಗೆ ತರಲು, ಕಾಂಗ್ರೆಸ್‌ ಸರಕಾರದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ಹೆಚ್ಚಿರುವ ಭ್ರಷ್ಟಾಚಾರವನ್ನು ದೂರ ಮಾಡಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು, ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ವೇದಿಕೆ ಸಿದ್ಧಪಡಿಸುವ ಯಾತ್ರೆ ಎಂದು ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ರಾಜಕೀಯ ಪಕ್ಷಗಳಿಗೆ ಯುದ್ಧ ಎಂದರೆ ಅದು ಚುನಾವಣೆ. ಅದರಂತೆ ಪರಿವರ್ತನ ಯಾತ್ರೆ ಮೂಲಕ ಮುಂಬರುವ ಚುನಾ ವಣ ಯುದ್ಧ ಆರಂಭಿಸಲಾಗಿದೆ. ಈ ಯುದ್ಧದಲ್ಲಿ ಗೆದ್ದು ರಾಜ್ಯವನ್ನು ಕಾಂಗ್ರೆಸ್‌ ಮುಕ್ತಗೊಳಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಈ ಯಾತ್ರೆಯ ಮೂಲಕ ನೀಡುತ್ತೇನೆ ಎಂದ‌ರು.

ಯುವ ಕಾರ್ಯಕರ್ತರ ಬೈಕ್‌ ಸವಾರಿ: ಪರಿವರ್ತನ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕಾಗಿ ಬೆಂಗಳೂರು ಭಾಗದ 17 ಜಿಲ್ಲೆಗಳ 114 ವಿಧಾನಸಭಾ ಕ್ಷೇತ್ರಗಳಿಂದ ಸಹಸ್ರಾರು ಯುವ ಕಾರ್ಯಕರ್ತರು ದ್ವಿಚಕ್ರ
ವಾಹನಗಳ ರ್ಯಾಲಿ ಮೂಲಕ ಅಂತಾ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವ ರಣಕ್ಕೆ ಆಗಮಿಸಿದ್ದರು.ಅನಂತರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advertisement

ಪರಿವರ್ತನ ಯಾತ್ರೆ ಸಂಬಂಧ ಪ್ರತ್ಯೇಕ ಲಾಂಛನವನ್ನು ಬಿಡುಗಡೆ ಮಾಡಲಾಗಿದ್ದರೆ, ಗುರುವಾರ ಯಾತ್ರೆಯ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.

ಮುಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರಿವರ್ತನ ಯಾತ್ರೆ ಹೊರಟಿದ್ದಾರೆ. 75 ದಿನ ರಾಜ್ಯಾದ್ಯಂತ ಓಡಾಡಿ, ಎಲ್ಲ  ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ  ಕಾಂಗ್ರೆಸ್‌ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿಯನ್ನು ಸನ್ನದ್ಧ ಗೊಳಿಸಲಿದ್ದಾರೆ 
-ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**
ಕುಮಾರಪರ್ವ ನ. 7ರಿಂದ ಶುರು
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್‌ನ ಉದ್ದೇಶಿತ “ಕುಮಾರಪರ್ವ’ ಯಾತ್ರೆ ನವೆಂಬರ್‌ 7ರಿಂದ ಆರಂಭವಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿರುವ ಚಾಮುಂಡೇಶ್ವರಿ ಕ್ಷೇತ್ರ ದಿಂದಲೇ ಪ್ರಚಾರ ಆರಂಭಿಸಲಿದ್ದಾರೆ.

ಬೆಳಗ್ಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಾವೇಶ ಒಂದು ರೀತಿ ಯಲ್ಲಿ  ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನವೂ ಹೌದು ಎಂದು ಪಕ್ಷ ಮೂಲಗಳು ತಿಳಿಸಿವೆ. ಚಾಮುಂಡೇಶ್ವರಿ ಯಾತ್ರೆ ಆರಂಭದ ಅನಂತರ ವಿಧಾನಮಂಡಲ ಅಧಿ ವೇಶನ ಪ್ರಾರಂಭವಾಗುವ ನ. 13ರ ವರೆಗೆ ಎರಡು ಮೂರು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಅಧಿವೇಶನಕ್ಕೆ ಹಾಜರಾದ ಅನಂತರ ಮತ್ತೆ ಉತ್ತರ ಕರ್ನಾಟಕ ಭಾಗದಲ್ಲೇ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗಿದೆ.

ನ. 3ರಿಂದಲೇ ಕುಮಾರಪರ್ವ ಯಾತ್ರೆ ಆರಂಭ ವಾಗಬೇಕಿತ್ತಾದರೂ ಜೆಡಿಎಸ್‌ ಶಾಸಕ ಚಿಕ್ಕಮಾದು ನಿಧನ ಹೊಂದಿದ ಹಿನ್ನೆಲೆಯಲ್ಲಿ ಮುಂದೂಡ ಲಾಗಿತ್ತು. ರಾಜ್ಯ ಯಾತ್ರೆ ಸಂದರ್ಭ ಕುಮಾರಸ್ವಾಮಿ ಜತೆ ಎಚ್‌. ವಿಶ್ವನಾಥ್‌, ಸಿಂಧ್ಯಾ, ವೈ.ಎಸ್‌.ವಿ. ದತ್ತಾ ಸಹಿತ ಹತ್ತು ಪ್ರಮುಖ ನಾಯಕರು ಭಾಗಿ ಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 

Advertisement

Udayavani is now on Telegram. Click here to join our channel and stay updated with the latest news.

Next