Advertisement

ನೂರೈವತ್ತು ಕೋಟಿ ರೂ.ದಾಟಿದ ಚುನಾವಣಾ ಅಕ್ರಮ

06:20 AM May 01, 2018 | Team Udayavani |

ಬೆಂಗಳೂರು: ಹಿಂದೆಂದೂ ಕಾಣದ ಚುನಾವಣಾ ಅಕ್ರಮಕ್ಕೆ ವಿಧಾನಸಭೆ ಚುನಾವಣೆ ಸಾಕ್ಷಿ ಯಾಗಿ ದ್ದು, ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿ ವರೆಗೆ 150 ಕೋಟಿ ರೂ.ಗೂ ಹೆಚ್ಚು ಬೇನಾಮಿ, ಅಕ್ರಮ ನಗದು ವಶಪಡಿ ಸಿ ಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 

Advertisement

ಆಯೋಗದ ನೀತಿ ಸಂಹಿತೆ ಜಾರಿ ತಂಡಗಳು ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಈ ಪ್ರಮಾಣದ ಅಕ್ರಮ ಕಂಡು ಬಂದಿದೆ. 

ಮಾ.27 ರಿಂದ ಇಲ್ಲಿವರೆಗೆ ರಾಜ್ಯದ ವಿವಿಧ ಕಡೆ ಕಾರ್ಯಾಚರಣೆ ನಡೆಸಿ ನೀತಿ ಸಂಹಿತೆ ಜಾರಿ ತಂಡಗಳು 55.16 ಕೋಟಿ ನಗದು ವಶಪಡಿಸಿ ಕೊಂಡಿವೆ. ಇದರ ಜೊತೆಗೆ ಅಧಿಕಾರಿಗಳು ಗುತ್ತಿಗೆದಾರರು, ಕೆಲ ಆಭ್ಯರ್ಥಿಗಳ ಆಪ್ತರ ಮನೆ ಹಾಗೂ ಇನ್ನಿತರ ಸ್ಥಳಗಳಲ್ಲಿ ದಾಳಿ ನಡೆಸಿ 12.04 ಕೋಟಿ, 5.18 ಕೋಟಿ ಮತ್ತು 19.69 ಕೋಟಿ ರೂ.(ಒಟ್ಟು 36.91 ಕೋಟಿ)  ವಶಪಡಿಸಿಕೊಂಡಿದ್ದಾರೆ. ಇಲ್ಲಿವರೆಗೆ 22.15 ಕೋಟಿ ರೂ. ಮೊತ್ತದ ಅಕ್ರಮ ಮದ್ಯ, 39.11 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 

ಇಲ್ಲಿ ತನಕ ವಶಪಡಿಸಿಕೊಂಡ ನಗದು ಮೊತ್ತ 55 ಕೋಟಿ ರೂ. ಆಗಿದೆ. ಚುನಾವಣೆ ಮುಗಿಯಲು 12 ದಿನ ಇದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 

ಐಟಿ ದಾಳಿ: ಈ ಮಧ್ಯೆ ಏ.24ರಿಂದ 28ರ ಅವಧಿಯಲ್ಲಿ ರಾಜ್ಯದ ವಿವಿಧ ಕಡೆ ಲೋಕೋಪ ಯೋಗಿ ಗುತ್ತಿಗೆದಾರರ ಮನೆ ಮತ್ತು ಅವರಿಗೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ 2 ಸಾವಿರ ಮತ್ತು 500 ರೂ. ಮುಖ ಬೆಲೆಯ 12.04 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 2.79 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿಪಡಿಸಿ ಕೊಳ್ಳಲಾಗಿದೆ. ಈ ದಾಳಿ ವೇಳೆ 74.39 ಕೋಟಿ ಹೆಚ್ಚುವರಿ ಆದಾಯ ಪತ್ತೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

Advertisement

ಅಲ್ಲದೇ ಅಭ್ಯರ್ಥಿಯೊಬ್ಬರಿಗೆ ಹಣ ಪೂರೈಸು ತ್ತಿದ್ದ ವ್ಯಕ್ತಿಯೊಬ್ಬರ ಮನೆ ಮೇಲೆ ಐಟಿ ಅಧಿಕಾ ರಿಗಳು ದಾಳಿ ನಡೆಸಿದಾಗ  5.18 ಕೋಟಿ ರೂ. ಬೇನಾಮಿ ನಗದು ಪತ್ತೆಯಾಗಿದೆ. ಈ ಮಧ್ಯೆ, ಬೆಂಗಳೂರು, ದಾವಣಗೆರೆ, ಮೈಸೂರಿ ನಲ್ಲಿ ದಾಳಿ ನಡೆಸಿ 4.01 ಕೋಟಿ ರೂ. ಮತ್ತು 6.5 ಕೆಜಿ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳ ಲಾಗಿದೆ. 

ಘೋಷಿಸಿದ್ದು 18 ಕೋಟಿ; ಆಸ್ತಿ 191 ಕೋಟಿ!
ಎ.28 ಮತ್ತು 29 ರಂದು ಅಭ್ಯರ್ಥಿಯೊಬ್ಬರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ವೇಳೆ  18 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಆದರೆ, ಇವರ ನಿವಾಸದ ಮೇಲೆ ದಾಳಿ ನಡೆಸಿದಾಗ 191 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ . ಈ ಅಭ್ಯರ್ಥಿ 2012-13ರಿಂದ ಐಟಿ ರಿಟರ್ನ್ ಸಲ್ಲಿಕೆಯನ್ನೇ ಮಾಡಿಲ್ಲ. ಆದರೂ ನಾಮಪತ್ರ ಸಲ್ಲಿಕೆ ವೇಳೆ ಒಂದಷ್ಟು ಆಸ್ತಿ ಇರುವುದಾಗಿ ಘೋಷಣೆ ಮಾಡಿದ್ದಾರೆ ಎಂದಿದೆ. ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿಯೂ ಆಯೋಗ ಹೇಳಿದೆ. ವಿಚಿತ್ರವೆಂದರೆ, ತಮ್ಮ ಆನ್‌ಲೈನ್‌ ಅಕೌಂಟ್‌ ಅನ್ನು ಆದಾಯ ತೆರಿಗೆ ಇಲಾಖೆ ಬ್ಲಾಕ್‌ ಮಾಡಿದ್ದು ಹೀಗಾಗಿ ರಿಟರ್ನ್ ಸಲ್ಲಿಕೆ ಮಾಡಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಈ ಮಾಹಿತಿ ತಪ್ಪಾಗಿದೆ ಎಂದೂ ಅದು ತಿಳಿಸಿದೆ.  ಅಲ್ಲದೆ ತಮ್ಮ ಕುಟುಂಬ ಸದಸ್ಯರ ಐದು ಆಸ್ತಿಗಳ ವಿವರವನ್ನು ಅಫಿಡವಿಟ್‌ನಲ್ಲಿ ನಮೂದಿಸಿಲ್ಲ ಎಂದು ಅಭ್ಯರ್ಥಿ ಒಪ್ಪಿಕೊಂಡಿದ್ದಾರೆ ಎಂದೂ ಆಯೋಗ ಮಾಹಿತಿ ನೀಡಿದೆ.

ಮುಖ್ಯಾಂಶಗಳು
55.16 ಕೋಟಿ ರೂ. : ಚು.ಆಯೋಗ ವಶ ಪಡಿಸಿಕೊಂಡ  ಹಣ
36.91 ಕೋಟಿ ರೂ.: ಐಟಿ ಇಲಾಖೆ ವಶ ಪಡಿಸಿಕೊಂಡ ಹಣ
22.15 ಕೋಟಿ ರೂ.:ಅಕ್ರಮ ಮದ್ಯ ಜಪ್ತಿ
39.11 ಕೋಟಿ ರೂ.:ವಶಪಡಿಸಿಕೊಂಡ ಆಭರಣ ಮೌಲ್ಯ
14.42 ಕೋಟಿ ರೂ.:2013ರ ಚುನಾವಣಾ ಅಕ್ರಮ
28 ಕೋಟಿ ರೂ.:2014ರ ಲೋಕ ಸಭಾ ಚುನಾವಣೆ

Advertisement

Udayavani is now on Telegram. Click here to join our channel and stay updated with the latest news.

Next